Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಹಟ್ಟಿಯಂಗಡಿ ಶಾಂತಾನಂದ ಭಟ್ ಸ್ಮಾರಕ” ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿದರು.

ದಾನಿಗಳಾದ ವಿಜಯಾ ಕಾರ್ಕಳ ಅವರು ತಮ್ಮ ಸಹೋದರ ಹಟ್ಟಿಯಂಗಡಿ ಶಾಂತಾನಂದ ಭಟ್ ಅವರ  ಸವಿನೆನಪಿಗಾಗಿ  ಶುದ್ಧ ಕುಡಿಯುವ ನೀರಿನ ಘಟಕವನ್ನು  ವಿದ್ಯಾರ್ಥಿಗಳಿಗಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ದಾನಿಗಳಾದ ಪ್ರಾಕ್ತನ ವಿದ್ಯಾರ್ಥಿಗಳಾದ ಕಿರಣ್ ಹಟ್ಟಿಯಂಗಡಿ, ಚಂದ್ರಶೇಖರ್ ಕೊತ್ವಾಲ್, ಭಾಸ್ಕರ ಗಾಣಿಗ, ನಾಮದೇವ ಖಾರ್ವಿ, ರಾಮಚಂದ್ರ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಹರಿ ಚಾತ್ರ ಹಾಜರಿದ್ದರು.

Exit mobile version