ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಲಾಡಿ ಜೆಸಿಐ ಘಟಕದ ವತಿಯಿಂದ ಜೆಸಿಐ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿಶೇಷ ಮಾಹಿತಿ ಕಾರ್ಯಗಾರವು ಇಲ್ಲಿನ ಹಾಲಾಡಿ ಬ್ರೈಟ್ ಪರ್ಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆಎಫ್ಎಂ ರೇಖಾ ಪ್ರಭಾಕರ ಕುಲಾಲ್ ಜೆಸಿಐ ಧ್ಯೇಯೋದ್ದೇಶಗಳು ಮತ್ತು ಸಂಘಟನೆ ಹಾಗೂ ಸಭೆಯ ಮಹತ್ವ ಮತ್ತು ಆಯೋಜನೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ಹಾಲಾಡಿ ಜೆಸಿಐ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ ಹಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಂಕರನಾರಾಯಣ ಜೆಸಿಐ ಪೂರ್ವಾಧ್ಯಕ್ಷರಾದ ಜೆಸಿ ಪ್ರವೀಣ ಬಾಳೆಕೊಡ್ಲು, ಶಂಕರನಾರಾಯಣ ಜೆಸಿಐ ಅಧ್ಯಕ್ಷರಾದ ಜೆಸಿ ಯೋಗೇಶ್ ಕಾಂಚನ್, ಜೆಸಿಐ ಕಾರ್ಯದರ್ಶಿ ಜೆಸಿ ಅಶೋಕ ಆಚಾರಿ, ಲೇಡಿ ಜೇಸಿ ಪ್ರೆಸಿಡೆಂಟ್ ಜೆಸಿ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಆಶಾ ರಾಜೀವ ಕುಲಾಲ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

