Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕರ್ನಾಟಕ ಪೊಲೀಸ್‌ ಧ್ವಜ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಪೊಲೀಸ್‌ ಧ್ವಜ ದಿನಾಚರಣೆಯನ್ನು ಉಡುಪಿಯ ಚಂದು ಮೈದಾನದಲ್ಲಿ ಆಚರಿಸಲಾಯಿತು.

ಪೊಲೀಸ್‌ ಧ್ವಜ ದಿನಾಚರಣೆಯ ಗೌರವ ವಂದನೆಯನ್ನು ಉಡುಪಿ ನಿವೃತ್ತ ಮಹಿಳಾ ಪೊಲೀಸ್‌ ನಿರೀಕ್ಷಕರಾದ ಸುಜಾತ ಸಾಲಿಯಾನ್‌ ಅವರು ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಹರಿರಾಮ್‌ ಶಂಕರ ಐಪಿಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸುಧಾಕರ ಎಸ್‌ ನಾಯ್ಕ್‌ ಅವರು ಹಾಜರಿದ್ದರು.

ಇದೇ ಸಮಯದಲ್ಲಿ 2025-26ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಂದ ವೈದ್ಯಕೀಯ ಧನ ಸಹಾಯಕ್ಕಾಗಿ ಸ್ವೀಕರಿಸಲಾದ ಅರ್ಜಿಗಳಲ್ಲಿ ರೂ 13,08,050/- ಗಳನ್ನು ವೈದ್ಯಕೀಯ ಧನ ಸಹಾಯವನ್ನು ವಿತರಿಸಲಾಯಿತು.

ಪಥಸಂಚಲನದ ನೇತೃತ್ವವನ್ನು ಉಡುಪಿ ಆರ್‌ಪಿಐ, ಡಿಎಆರ್‌ ರವಿ ಕುಮಾರ್‌ ಅವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಡುಪಿ ಡಿಎಆರ್‌ ಯೋಗೀಶ್‌ ನಾಯ್ಕ ಅವರು ನಿರ್ವಹಿಸದರು. ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳು ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ/ಸಿಬ್ಬಂಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Exit mobile version