Kundapra.com ಕುಂದಾಪ್ರ ಡಾಟ್ ಕಾಂ

ಬ್ಯಾರೀಸ್ ಶಿಕ್ಷಣ ಸಂಸ್ಥೆ: 110ನೇ ವರ್ಷಾಚರಣೆಯ ಲಾಂಛನ ಬಿಡುಗಡೆ

ದೂರದೃಷ್ಟಿಯಿಂದ ಹುಟ್ಟಿಕೊಂಡ ಈ ವಿದ್ಯಾ ಸಂಸ್ಥೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ: ಸಚಿವ ವಿನಯ ಕುಮಾರ್ ಸೊರಕೆ

ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ 110 ನೇ ವಾರ್ಷಿಕಾಚರಣೆಯ ಪೂರ್ವಭಾವಿಯಾಗಿ ‘ಲಾಂಛನ’ ಅನಾವರಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಜರುಗಿತು. ಲಾಂಛನ ಅನಾವರಣಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ ದೂರದೃಷ್ಟಿತ್ವದಿಂದ ಹುಟ್ಟಿಕೊಂಡ ಈ ವಿದ್ಯಾಸಂಸ್ಥೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ. ಇಡೀ ಸಮುದಾಯದ ಕಾರ್ಯತತ್ಪರತೆಯನ್ನು ಗುರುತಿಸುವ ಕಾರ್ಯಕ್ರಮವಾಗಿದೆ ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಬ್ಯಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 1906 ರಿಂದ ಆರಂಭಗೊಂಡು 2016 ನೇ ವರ್ಷದಲ್ಲಿ 110 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸಮುದಾಯದ, ಸಮಾಜದ, ವಿವಿಧ ಕಾಳಜಿಗಳನ್ನು ಅಭಿವ್ಯಕ್ತಗೊಳಿಸುವ ಕಾರ್ಯಕ್ರಮಗಳನ್ನು ವರ್ಷವಿಡೀ ತಿಂಗಳಿಗೊಂದರಂತೆ ಹಮ್ಮಿಕೊಳ್ಳಲಾಗಿದೆ ಎಂದರು

ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಟ್ರಸ್ಟನ ಸದಸ್ಯ ಅಬ್ದುಲ್ ರೆಹಮಾನ್ ಬ್ಯಾರಿ, ಅಶ್ರಫ್ ಬ್ಯಾರಿ, ಮಝರ್ ಬ್ಯಾರಿ, ಹಿರಿಯರಾದ ಶೇಖ್ ಅಬು ಖತೀಬ್ ಮೊಹಮ್ಮದ್, ಹಾಜಿ ಅಬುಶೇಖ್ , ಸ್ಥಳೀಯ ಕೌನ್ಸಿಲರ್‌ ಪ್ರಭಾಕರ್, ಜ್ಯೋತಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಪ್ರೊ. ಚಂದ್ರಶೇಖರ್ ದೋಮ, ಮಂಗಳೂರಿನ ಬಿ.ಐ.ಟಿ ಯ ಪ್ರಾಂಶುಪಾಲ ಡಾ. ರಾಣಾ ಪ್ರತಾಪ್ ರೆಡ್ಡಿ, ಕೆ.ಎಮ್.ಎಫ್. ಮಾಜಿ ಅಧ್ಯಕ್ಷ ದಿವಾಕರ್ ಶೆಟ್ಟಿ, ಕೋಟೇಶ್ವರ ಪಂಚಾಯತ್ ಅಧ್ಯಕ್ಷೆ ಜಾನಕಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮುಸ್ತರಿ ಹಾಗೂ ಶಹಬಾನ್ ಉಪಸ್ಥಿತರಿದ್ದರು. ಸೀ-ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ರವೀಂದ್ರ ಸ್ವಾಗತಿಸಿ, ಡಾ. ಕೃಷ್ಣರಾಜಕರಬ ವಂದಿಸಿದರು. ಜಯಶೀಲ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Exit mobile version