Kundapra.com ಕುಂದಾಪ್ರ ಡಾಟ್ ಕಾಂ

ಜೇಸಿಐ ಹಾಲಾಡಿ ವಾರಾಹಿ ಘಟಕವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಜೇಸಿಐ ಕಟಪಾಡಿ ಆತಿಥ್ಯದಲ್ಲಿ ಮಟ್ಟು ಬೀಚ್‌ನಲ್ಲಿ ಕಡಲೋತ್ಸವ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿದ್ದು ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಗದು ಬಹುಮಾನ ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ.

ವಲಯ 15ರ ವಲಯಧಿಕಾರಿ ಜೆಎಫ್ಎಫ್ ಸಂತೋಷ್ ಶೆಟ್ಟಿ,  ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೇಸಿ ಪ್ರದೀಪ್ ಹಾಲಾಡಿ ಅವರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು  ಹಸ್ತಾoತರಿಸಿದರು.

ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕದ ಉಪಾಧ್ಯಕ್ಷರಾದ ಜೇಸಿ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೇಸಿ ಅಶೋಕ್ ಆಚಾರ್ಯ, ಲೇಡಿ ಜೇಸಿ ಅಧ್ಯಕ್ಷೆ ಜೇಸಿ ಅವಶ್ಯ ಶೆಟ್ಟಿ,ಜೇಸಿ ರಾಘವೇಂದ್ರ ಕುದ್ರುಮನೆ, ಜೇಸಿ ನಾಗೇಶ್, ಜೇಸಿ ಕಿರಣ್, ಜೇಸಿ ಪ್ರಶಾಂತ್, ಜೆಸಿ ಶ್ರೀಕಾಂತ್ ಆಚಾರಿ, ಜೇಸಿ ಮಂಜುಳಾ ಶೆಟ್ಟಿ, ಜೇಸಿ ದೀಪ ಶೆಟ್ಟಿ, ಜೇಸಿ ಆಶಾ ರಾಜೀವ ಕುಲಾಲ್, ದೀಪಾ ಪ್ರದೀಪ್, ವಲಯ ಉಪಾಧ್ಯಕ್ಷರು, ವಲಯ ನಿರ್ದೇಶಕರು, ಘಟಕಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Exit mobile version