Site icon Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಂಡಾರ್‌ಕಾರ್ಸ್‌ ಪ.ಪೂ ಕಾಲೇಜಿಗೆ ಶೇ.92% ಫಲಿತಾಂಶ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜಿಗೆ 2025-2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 92% ದೊರೆತಿದೆ ಎಂದು ಭಂಡಾರ್ಕಾರ್ಸ್‌ ಪದವಿ ಪೂರ್ವ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಥಮ – ಅನಿಲ್‌ ಜೀವನ್‌ ಲೋಬೋ (578/600), ದ್ವಿತೀಯ- ಅಶ್ವಿನಿ ಪ್ರಭು (575/600), ತೃತೀಯ-ಭೂಮಿಕಾ ಎಂ.ಡಿ (574/600), ನಾಲ್ಕನೇ ಸ್ಥಾನವನ್ನು ರವೀಂದ್ರ ಮಾಸ್ತಿ ಗೊಂಡ 573/600 ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪ್ರಥಮ – ಸಬಾ (586/600), ದ್ವಿತೀಯ- ನವ್ಯ  (581/600), ತೃತೀಯ- ಪ್ರಿಯಾ (574/600), ನಾಲ್ಕನೇ- ರೇಣುಕಾ (573/600), ಪಂಚಮ ಸ್ಥಾನವನ್ನು ಭೂಮಿಕಾ (571/600) ಪಡೆದುಕೊಂಡಿದ್ದಾರೆ. 

ಕಾಲೇಜಿನ 63 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 102 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಮತ್ತು  ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಅಧ್ಯಾಪಕೇತರರು, ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version