Kundapra.com ಕುಂದಾಪ್ರ ಡಾಟ್ ಕಾಂ

ಪ್ರಥಮ ಬ್ಯಾಚ್‌ನ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದ ರ‍್ಯಾಂಕ್‌ ಗಳಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
2025-2026ನೇ ಸಾಲಿನ ಪದವಿಪೂರ್ವ ಕಾಲೇಜಿನ ಫಲಿತಾಂಶ ಏಪ್ರಿಲ್‌ 09,2026ರಂದು ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಕುಂದಾಪುರ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಅಮೋಘ ಸಾಧನೆ ಗೈದಿದ್ದಾರೆ.

ಕೇವಲ 11 ವಿದ್ಯಾರ್ಥಿಗಳಿಂದ 2024-2025ರಲ್ಲಿ ಆರಂಭವಾದ ಸುಜ್ಞಾನ ಪಿಯು ಕಾಲೇಜು ದ್ವಿತೀಯ ಪಿಯುಸಿಗೆ ಬೇರೆ ಕಾಲೇಜುಗಳಿಂದ ಸುಮಾರು 100 ವಿದ್ಯಾರ್ಥಿಗಳು ದಾಖಲಾತಿ ಪಡೆದು ಒಟ್ಟು 125 ವಿದ್ಯಾರ್ಥಿಗಳು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಸಂಸ್ಥೆಯ ಸ್ಪಂದನಾ ಆರ್‌. ಶೆಟ್ಟಿ 600 ಅಂಕಕ್ಕೆ 592 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್‌ ಪಡೆದಿದ್ದಾರೆ. ವಿಶೇಷವೆಂದರೆ ಸ್ಪಂದನಾ ಎಸ್‌.ಎಸ್‌.ಎಲ್‌.ಸಿಯಲ್ಲಿ 84% ಅಂಕ ಪಡೆದರೂ ಕೂಡ ದ್ವಿತೀಯ ಪಿಯುಸಿಯಲ್ಲಿ 98.7% ಅಂಕ ಗಳಿಸುವುದರ ಮೂಲಕ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ.

SSLCಯಲ್ಲಿ 95ಕ್ಕಿಂತ ಅಧಿಕ ಅಂಕ ಗಳಿಸಿದ ಕೇವಲ 9 ವಿದ್ಯಾರ್ಥಿಗಳನ್ನು ಒಳಗೊಂಡು ಒಟ್ಟು 125 ವಿದ್ಯಾರ್ಥಿಗಳು ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‌ನ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಹಾಗೂ ವಿವಿಧ ವಿಭಾಗಗಳಲ್ಲಿ, 57 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಹಾಗೂ 89 ವಿದ್ಯಾರ್ಥಿಗಳು ಶೇಕಡಾ 85ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ಸಮ್ಮೆದ ಪಾರೀಸ ಭೋಜ 587, ಸಿಂಚನಾ 586, ಪ್ರತೀಕ್ಷಾ ಎಚ್.ಶೆಟ್ಟಿ 586, ಎನ್‌ ರಕ್ಷಾ 584, ಅನಘಾ ವಿ. ಶೆಟ್ಟಿ 583 ಶ್ರೀಶಾಂತ್‌ 582, ಶಿವರಾಜ್‌ ಬಿ. ಶೆಟ್ಟಿ 581, ಕೌಶಿಕ್‌ ಶೆಟ್ಟಿ 580, ಪವನ್‌ ಎ ಕುಲಾಲ್ 57̧9 ಪ್ರಿಯಾಂಕಾ ಶೆಟ್ಟಿ-577,  ಸೃಷ್ಠಿ ಶಿವಾಜಿ ನೆಲವಾಡೆ-577 ಜಯರಾಜ್‌ ಜೆ.ಎಸ್-575,   ಸುಶ್ಮಿತಾ ಪ್ರವೀಣ್‌ ಕುಮಾರ್ ಸುಕಾಲಿ-575, ಭೂಮಿಕಾ ಎಸ್.‌ ಆಚಾರ್ಯ-575, ಪಂಚಮಿ ಚಂದ್ರ ಕುಲಾಲ್-574   ಶ್ರೀಜನ್‌ ಶ್ರೀಧರ್‌ ಶೆಟ್ಟಿ-573   ದೇಶಿಕ್‌ ಕೆ-572, ಸುಜನ್‌ ಬಿ ಶೆಟ್ಟಿ-572, ನವ್ಯಾ-571, ತನುಷಾ ಎಸ್‌ ಶೆಟ್ಟಿ-571,  ಪೃಥ್ವಿಕ್‌ -570 ಹಾಗೇ 57 ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ, 89 ವಿದ್ಯಾರ್ಥಿಗಳು ಶೇ. 85ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 15 ವಿದ್ಯಾರ್ಥಿಗಳು, ಗಣಿತದಲ್ಲಿ 9 ವಿದ್ಯಾರ್ಥಿಗಳು, ಸಂಸ್ಕೃತದಲ್ಲಿ4 ವಿದ್ಯಾರ್ಥಿಗಳು ಹಾಗೂ ಭೌತಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿರುವುದು ಶ್ಲಾಘನೀಯ.

ಹೀಗೆ ಉತ್ತಮ ಫಲಿತಾಂಶ ಪಡೆದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎರಡು ವರ್ಷಗಳ ಹಿಂದಿನ ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದಿದ್ದರು.ಈಗ ಪಿಯುಸಿ ಫಲಿತಾಂಶದಲ್ಲಿ ಅವರುಗಳು SSLCಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಗಣನೀಯ ಏರಿಕೆಯ ಅಂಕ ಗಳಿಸಿದ್ದು ಪೋಷಕರ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ 97.83% ಅಂಕ ಗಳಿಸಿ ಸಮ್ಮೆದ ಪಾರೀಸ ಕನ್ನಡ ಮಾಧ್ಯಮದಲ್ಲಿ SSLC ಪರೀಕ್ಷೆ ಬರೆದು 95% ಪಡೆದು ಇದೀಗ ಸುಜ್ಞಾನ ಪಿಯು ಕಾಲೇಜಿನಲ್ಲಿ ಫಿಸಿಕ್ಸ್‌ 100, ಕೆಮಿಸ್ಟ್ರಿ 96, ಮ್ಯಾಥಮೆಟಿಕ್ಸ್‌ 100, ಬಯೋಲಜಿ 99, ಇಂಗ್ಲಿಷ್‌ 93, ಕನ್ನಡ 99 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಹಾಗೇ ಎಸ್‌ ಎಸ್‌ ಎಲ್‌ ಸಿಯಲ್ಲಿ 77.8% ಅಂಕ ಗಳಿಸಿದ ಜಯರಾಜ್‌ ಪಿಯುಸಿಯಲ್ಲಿ 95.83% ಗಳಿಸಿದ್ದಾರೆ. ಎಸ್‌ ಎಸ್‌ ಎಲ್‌ ಸಿಯಲ್ಲಿ 79.4% ಅಂಕ ಗಳಿಸಿದ ದೇಶಿಕ್‌ ಕೆ ಪಿಯುಸಿಯಲ್ಲಿ95.33, ಎಸ್‌ ಎಸ್‌ ಎಲ್‌ ಸಿಯಲ್ಲಿ 77.6 ಅಂಕ ಗಳಿಸಿದ ಭರತ್‌ ಕುಮಾರ್‌ ನಾಯಕ್‌ ಪಿಯುಸಿಯಲ್ಲಿ 93.50, ಎಸ್‌ ಎಸ್‌ ಎಲ್‌ ಸಿಯಲ್ಲಿ 75 ಅಂಕ ಗಳಿಸಿದ ಶಾನ್‌ ಸುಜಿತ್‌ ಜಾನ್‌ ಪಿಯುಸಿಯಲ್ಲಿ 90.33, ಎಸ್‌ ಎಸ್‌ ಎಲ್‌ ಸಿಯಲ್ಲಿ 49.28 ಅಂಕ ಗಳಿಸಿದ ಸೋಮನ್‌ ಗೌಡ ಪಿಯುಸಿಯಲ್ಲಿ 88.50 ಅಂಕ, ಎಸ್‌ ಎಸ್‌ ಎಲ್‌ ಸಿಯಲ್ಲಿ 51.52 ಅಂಕ ಗಳಿಸಿದ ರಾಘವೇಂದ್ರ 89.77 ಅಂಕ  ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ರಾಜ್ಯ ಮಟ್ಟದ ಸಾಧಕಿ ಸ್ಪಂದನಾ ಆರ್‌ ಶೆಟ್ಟಿಗೆ 50,000 ಬಹುಮಾನ ವಿತರಣೆ
SSLCಯಲ್ಲಿ 84% ಅಂಕಗಳಿಸಿದ್ದರೂ ಕೂಡ ಸಂಸ್ಥೆಯ ಬೋಧಕ ಸಿಬ್ಬಂದಿಗಳ ನಿರಂತರ ಪ್ರಯತ್ನ ಮತ್ತು ವಿದ್ಯಾರ್ಥಿನಿಯ ಕಠಿಣ ಪರಿಶ್ರಮದ ಫಲವಾಗಿ ಸ್ಪಂದನಾ 98.7% ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್‌ ಪಡೆದಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವುದು. ನಮ್ಮ ಸಂಸ್ಥೆಯ ಪ್ರಥಮ ಬ್ಯಾಚ್‌ ನಲ್ಲಿ ಯಾವುದೇ ವಿದ್ಯಾರ್ಥಿ ರಾಜ್ಯಮಟ್ಟದ Rank ಪಡೆದರೆ 50,000 ಬಹುಮಾನ ನೀಡುವುದಾಗಿ ಹಿಂದೆ ತಿಳಿಸಲಾಗಿತ್ತು. ಅದರಂತೆ ಇಂದು ಸ್ಪಂದನಾಗೆ 50,000 ನಗದು ನೀಡಿ ಗೌರವಿಸಲಾಯಿತು. ಅವಳ ಸಾಧನೆ ನಮ್ಮ ಮುಂದಿನ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಮತ್ತು ಅವಳ ಭವಿಷ್ಯ ಉಜ್ವಲವಾಗಲಿ.

ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ನಮ್ಮ ಆದ್ಯತೆಯಾಗಿದೆ. ಹೀಗಾಗಿ, ನಾವು ನಮ್ಮ ಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಂಪರೆಯನ್ನು ಪರಿಚಯಿಸುವ ಚಟುವಟಿಕೆಗಳು ಹಾಗೂ ಆಟೋಟಗಳಿಗೂ ಪ್ರಾಮುಖ್ಯ ನೀಡುತ್ತಿದ್ದೇವೆ. ಇದು ಮಕ್ಕಳನ್ನು ಶಾರೀರಿಕವಾಗಿ ಸದೃಢಗೊಳಿಸುವ ಜೊತೆಗೆ ಅವರ ಮನೋಬಲವನ್ನೂ ವೃದ್ಧಿಸಲು ಸಹಕಾರಿಯಾಗಿದೆ.

ಉತ್ತಮ ಶೈಕ್ಷಣಿಕ ಪರಿಸರ ಕಾಯ್ದುಕೊಳ್ಳಲು ನಮ್ಮ ಹೆಚ್ಚು ಗಮನ ನೀಡುತ್ತಿದ್ದೇವೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಯಾವುದೇ ಪ್ರಶ್ನೆಗಳಿಗೆ ಬೋಧಕರೊಂದಿಗೆ ಚರ್ಚಿಸಿ ಉತ್ತರಗಳನ್ನು ಕಂಡುಕೊಳ್ಳಲು ಅನುಕೂಲಕರವಾಗಿದೆ.

ಬೋಧಕರು ತರಗತಿಯಲ್ಲಿ ಸಾಮೂಹಿಕವಾಗಿ ಬೋಧನೆ ಮಾಡುವ ಜೊತೆಗೆ ಪ್ರತಿ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕ ನಿಗಾ ವಹಿಸುತ್ತಾರೆ. ಆಯಾ ವಿದ್ಯಾರ್ಥಿಗೆ ಸೂಕ್ತವೆನ್ನಿಸುವ ರೀತಿಯಲ್ಲಿ ವಿಷಯವನ್ನು ಮನಮುಟ್ಟಿಸುವ ಪ್ರಯತ್ನ ಮಾಡುತ್ತಾರೆ. ಇದು ನಮ್ಮ ಸಂಸ್ಥೆಯಲ್ಲಿ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ.

ನಾವು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಗಣ್ಯರನ್ನು ಕಾಲೇಜಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತೇವೆ. ಇವು ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಬೇಕು ಎಂಬ ಆಶಯ ಇದರ ಹಿಂದಿರುತ್ತದೆ. ತರಗತಿಯಲ್ಲಿನ ಬೋಧನೆಯ ಜೊತೆಗೆ ಹೀಗೆ ತರಗತಿಯಾಚೆಗಿನ ಜ್ಞಾನವಿಕಾಸಕ್ಕೂ ನಾವು ತೆರೆದುಕೊಂಡಿರುವುದು ಉತ್ತಮ ಫಲ ನೀಡುತ್ತಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ,ಪ್ರಾಂಶುಪಾಲರಾದ ರಂಜನ್‌ ಬಿ ಶೆಟ್ಟಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳನ್ನು ಅಭಿನಂದಿಸಿದರು.

Exit mobile version