ಬೈಂದೂರು: ಧರ್ಮವನ್ನು ತಿಳಿಯುತ್ತಲೇ ಆಚರಣೆಯಲ್ಲಿಯೂ ತರಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ. ಭಗವದ್ಗೀತೆ ವೇದಗಳ ಸಾರವಾಗಿದ್ದು ದಿನನಿತ್ಯದ ಸಮಸ್ಯೆಗಳಿಗೂ ಸಮಾಧಾನ ಸ್ಫುರಿಸುತ್ತದೆ. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು ಎಂದು ಸ್ವರ್ಣವಲ್ಲಿ ಮಠಾದೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹೇಳಿದರು.
ಬೈಂದೂರಿನ ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯವರು ಐದನೇಯ ವರ್ಷದ ಅಭಿಯಾನ ಕಾರ್ಯಕ್ರಮವನ್ನು ಅಭಿಯಾನದ ಪ್ರೇರಕ ಶ್ರೀಗಳಿಗೆ ಸಮರ್ಪಿಸಲು ಏರ್ಪಡಿಸಲಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮಾತನಾಡಿ, ಒಂದು ನೂರಕ್ಕೂ ಮಿಕ್ಕಿ ಪಠಣಕಾರರು ಪ್ರವಚನಕಾರರಿಗೆ ವಿಶೇಷ ಶಿಬಿರ ಏರ್ಪಡಿಸಿ ತಾಲೂಕಿನ ಭಜನಾ ಕೇಂದ್ರಗಳು, ಶೃದ್ಧಾ ಕೇಂದ್ರಗಳು, ಸ್ತ್ರೀಶಕ್ತಿ ಗುಂಪುಗಳಲ್ಲಿಯೂ ಗೀತೆಯ ಸಂದೇಶವನ್ನು ಪಸರಿಸುತ್ತಿದ್ದು ಜನ ಸಾಮಾನ್ಯರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ ಎಂದರು.
ನಾಗೂರು ಯಕ್ಷ ಬಳಗ ತಂಡದ ಬಾಲ ಕಲಾವಿದರು ಹೊಸ್ತೋಟ ಭಾಗವತರು ಬರೆದ ’ಗೀತಾನುಸಂಧಾನ’ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪೂಜ್ಯ ಸ್ವಾಮೀಜಿಯವರು ಪ್ರಶಸ್ತಿ ಪತ್ರ, ನಗದು ಬಹುಮಾನದ ನೀಡಿ ಪುರಸ್ಕರಿಸಿದರು. ರಾಮಕ್ಷತ್ರಿಯ ಸಮಾಜ ಬೈಂದೂರು ಅಧ್ಯಕ್ಷ ಬಿ ಗೋಪಾಲ ನಾಯಕ್, ಮಾತೃಮಂಡಳಿ ಅಧ್ಯಕ್ಷೆ ಸೀತಾ ಶ್ರೀನಿವಾಸ, ವಿಪ್ರರಂಜನಿ ಅಧ್ಯಕ್ಷೆ ಯು ವರಮಹಾಲಕ್ಷ್ಮೀ ಹೊಳ್ಳ, ಶ್ರೀನಿವಾಸ ಮದ್ದೋಡಿ, ಯು ರಮೇಶ ವೈದ್ಯ, ನಾಗೇಶ ರಾವ್ ಹೇರಂಜಾಲು, ವಿ.ಎಚ್ ನಾಯಕ್, ಮಂಗೇಶ ಶೆಣೈ, ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ಕೇಶವ ನಾಯ್ಕ ಉಪಸ್ಥಿತರಿದ್ದರು. ಲಲಿತಾ ಕೇಶವ ನಾಯಕ್, ಭಾರತಿ ಮಂಜುನಾಥ ಮತ್ತು ಆಶಾದಿನೇಶ ಪ್ರಾರ್ಥಿಸಿದರು. ವಿ.ಹೆಚ್ ನಾಯಕ್ ಸ್ವಾಗತಿಸಿದರು, ವೆಂಕಟ್ರಮಣ ಡಿ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಸಂಚಾಲಕ ಗಣಪತಿ ಹೋಬಳಿದಾರ ವಂದಿಸಿದರು.