Site icon Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ: ಸಿಮೆಂಟ್ ಚೀಲ ಮೈ ಮೇಲೆ ಬಿದ್ದು ಕೂಲಿ ಕಾರ್ಮಿಕ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ವಕ್ಕಾಡಿ ಸೈಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸಿಮೆಂಟ್ ಚೀಲ ಮೈ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಬಾಗಲಕೋಟೆ ಮೂಲದ ಲಕ್ಷ್ಮವ್ವ ಮಾಲಪ್ಪ ಮೂಲಿಮನೆ (38) ಮೃತಪಟ್ಟವರು.

ಕುಂದಾಪುರದ ವಕ್ವಾಡಿಯಲ್ಲಿ ಎ.9ರಂದು ಬೆಳಿಗ್ಗೆ 9 ಗಂಟೆಗೆ ಸೈಟ್ ನಲ್ಲಿ ಸಿಮೆಂಟ್ ಚೀಲವನ್ನು ತಲೆ ಮೇಲೆ ಹೊತ್ತುಕೊಂಡು ಕೂಲಿ ಕೆಲಸ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಉಳುಕಿ ಸಿಮೆಂಟ್ ಚೀಲ ಮೈ ಮೇಲೆ ಬಿದ್ದು ಅಸ್ವಸ್ಥರಾಗಿ ಅವರನ್ನು ಬಾಗಲಕೋಟೆಯ ಗುಳೆಗಾ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯದಲ್ಲಿ ಎ.12ರಂದು ರಾತ್ರಿ ಮೃತಪಟ್ಟಿರುದಾಗಿ ಹುಬ್ಬಳ್ಳಿಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version