Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸರಕಾರ ಪ್ರೌಢ ಶಾಲೆಯ ಧಕ್ಕೇರಬಾಳು ನಾರಾಯಣ ಕಾಮತ್ ಸುವರ್ಣ ಸಭಾಂಗಣದಲ್ಲಿ  ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. 

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿದ್ಧಾಪುರ ಅನಂತ ಕೃಷ್ಣ ಮಿತ್ಯಂತ, ಸಿದ್ಧಾಪುರ ಜಯರಾಮ ಆಚಾರ್ಯ, ಸಿದ್ಧಾಪುರ ಹಳವಿದ್ಯಾರ್ಥಿ ಸಂಘ ಸ. ಪ್ರೌಡ ಶಾಲೆಯ ಅಧ್ಯಕ್ಷ ಶ್ರೀಕಾಂತ್ ನಾಯಕ್, ಸಿದ್ಧಾಪುರ ಸರಕಾರಿ ಪ್ರೌಡ ಶಾಲೆಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ವಿಶ್ವನಾಥ ತುಂಬಿಕಲ್ಲಾಯ, ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ರಾಘವೇಂದ್ರ ಬೆಚ್ಚಳ್ಳಿ ಹಾಗೂ  ಉದಯ ಕುಮಾರ್ ಇವರುಗಳು ಶಿಬಿರಾರ್ಥಿಗಳಿಗೆ ಇಲ್ಲಿ ಕಲಿತ ಶಿಕ್ಷಣವನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸನ್ನ ಸಾಧಿಸಿರಿ ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿದ ಸ. ಪ್ರೌಢ ಶಾಲೆಯ ಹಳೆವಿದ್ಯಾರ್ಥಿ ಪ್ರಿಯಾ ಜಿ. ಕಾಮತ್ ಳನ್ನು ಸನ್ಮಾನಿಸಲಾಯಿತು. ಸೇವಾಸಿಂಚನ ಪೌಂಡೇಷನ್ ವತಿಯಿಂದ ಎಲ್ಲಾ ಶಿಬಿರಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ  ಅರುಣ್ ಎ ಎಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ  ಅಶ್ವಿನಿ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು. ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್  ವಂದಿಸಿದರು.

Exit mobile version