Kundapra.com ಕುಂದಾಪ್ರ ಡಾಟ್ ಕಾಂ

ಅಂಪಾರು: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ  ಜನ್ಮದಿನ ಆಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ದೇಶ ಕಂಡ ಮಹಾನ್ ನಾಯಕ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಜೆಸಿಐ ಹಾಲಾಡಿ ವಾರಾಹಿ ಘಟಕದ ವತಿಯಿಂದ ಮಂಗಳವಾರ ಅಂಪಾರಿನ ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು.

ಹಾಲಾಡಿ  ಜೆಸಿಐನ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ ಅವರು ದೀಪವನ್ನು ಬೆಳಗಿಸಿ, ಡಾ. ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಬಹು ದೊಡ್ಡ ಆಸ್ತಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಮುಖ್ಯ ಶಿಕ್ಷಕಿ ಸರೋಜಾವರು ಮಾತನಾಡಿ, ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಜಯಕರ, ಸಹ ಶಿಕ್ಷಕಿಯರಾದ ಶೈಲಜಾ  ಶೈಲಶ್ರೀ, ಸೌಭಾಗ್ಯಲಕ್ಷ್ಮಿ, ಆಶಾ, ಪ್ರತಿಮಾ,  ಶೋಭ, ಶ್ವೇತಾ, ಭವ್ಯ ಮತ್ತು ಜೆಸಿಐ ಸದಸ್ಯರು ಉಪಸ್ಥಿತರಿದ್ದರು.

Exit mobile version