Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ರ‍್ಯಾಂಕ್‌ ವಿಜೇತರಿಗೆ ಅಭಿನಂಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಈ ಬಾರಿಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದ ಉಪ್ಪುಂದ ರಾಜೇಂದ್ರ ಭಟ್ ಮತ್ತು 9ನೇ ರ‍್ಯಾಂಕ್‌ ಪಡೆದ ರಾಘವೇಶ್ವರ ಭಟ್ ಉಪ್ಪುಂದ ಅವರನ್ನು ಹವ್ಯಕ ಸಭಾ ರಿ. ಕುಂದಾಪುರ ತಾಲೂಕು ಇದರ ವತಿಯಿಂದ ಸನ್ಮಾನಿಸಲಾಯಿತು.

ಭಾನುವಾರ ದಿನ ಉಪ್ಪುಂದ ಸತ್ಯನಾರಾಯಣ ಪುರಾಣಿಕರ ಮನೆಯಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಉಪನ್ಯಾಸಕರಾದ ಡಾ| ಎಂ.ವಿ ನಾರಾಯಣ ಸ್ವಾಮೀ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹವ್ಯಕ ಸಭಾದ ಅಧ್ಯಕ್ಷರಾದ ಮುಖ್ಯ ಶಿಕ್ಷಕ ನಾಗರಾಜ ಭಟ್ ಮಕ್ಕಿ ದೇವಸ್ಥಾನ ಅವರು ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ನಿಧನನರಾದ ನಿವೃತ್ತ ಉದ್ಯೋಗಿ ಸಂಘದ ಮಾಜಿ ಅಧ್ಯಕ್ಷರು ಜಗದೀಶ ಅವಭೃತ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ಸತ್ಯನಾರಾಯಣ ಪುರಾಣಿಕ್, ವಿದ್ವಾನ್ ಶಂಕರನಾರಾಯಣ ಭಟ್, ಸುರೇಶ್ ಭಟ್, ಶ್ರೀನಿವಾಸ ಅವಭೃತ, ಸುರೇಖಾ ಪುರಾಣಿಕ್, ಗಣೇಶ್ ಪುರಾಣಿಕ, ಜಲಜಾಕ್ಷಿ ಭಟ್ ಬೇಳೂರು ಗಣೇಶ್ ರಾವ್, ಕಾರ್ಯದರ್ಶಿ ಉಪ್ಪುಂದ ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Exit mobile version