ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮದ ಹಳಗೇರಿಯ ಶ್ರೀ ಕೊಕ್ಕೇಶ್ವರ ವನದುರ್ಗಾ ದೇವಾಸ್ಥಾನದಲ್ಲಿ ಎ.19 ಆದಿತ್ಯವಾರದಂದು ವರ್ಧಂತ್ಯುತ್ಸವ ಜರುಗಲಿದೆ.
ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ಕೊಕ್ಕೇಶ್ವರ ದೇವಾಲಯದಲ್ಲಿ ನಾಂದಿ, ಪುಣ್ಯಾಹಾ ಶತರುದ್ರಾಭಿಷೇಕ, ಕಲಾವೃದ್ಧಿ ಹೋಮ, ಏಕಾದಶ ರುದ್ರ, ಸಪ್ತಶತೀ ಪಾರಾಯಣ, ಶ್ರೀ ನಾಗದೇವರಿಗೆ ಪವಮಾನ ಕಲಶ, ಶ್ರೀ ದೇವಿ ದೇವಾಲಯದಲ್ಲಿ ಸಪ್ತಶತೀ ಪಾರಾಯಣ, ಶ್ರೀ ಅಮ್ಮನವರಿಗೆ ಬ್ರಹ್ಮ ಕುಂಭಾಭಿಷೇಕ ನಡೆಯಲಿದೆ.
ಮಧ್ಯಾಹ್ನ ಘಂಟೆ 12.00ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಘಂಟೆ 4.00ರಿಂದ ಮಂತ್ರಾಕ್ಷತೆ, ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಘಂಟೆ 5.00ರಿಂದ ಶ್ರೀ ಕೊಕ್ಕೇಶ್ವರ ಭಜನಾ ಮಂಡಳಿ ಹಳಗೇರಿ ಇವರಿಂದ ಭಜನಾ ಕಾರ್ಯಕ್ರಮಗಳು, ಸಂಜೆ 7-30 ರಿಂದ ರಂಗಪೂಜೆ, ಬಲ್ಯುತ್ಸವಾದಿಗಳು ನಡೆಯಲಿದೆ.
ಊರ ಪರ ಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕೊಕ್ಕೇಶ್ವರ ವನದುರ್ಗಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯವರು ವಿನಂತಿಸಿಕೊಳ್ಳುತ್ತಾರೆ.

