ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ 2026ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ನಿಹಾಲ್ ಹೆಚ್.ಜಿ. – 596, ಡಿ .ಹೆಚ್. ನವಮಿ – 593, ಅಂಕ ಪಡೆದು ರಾಜ್ಯಕ್ಕೆ 4ನೇ ಮತ್ತು 7ನೇ ಸ್ಥಾನ ಪಡೆದಿರುತ್ತಾರೆ.
ಪರೀಕ್ಷೆಗೆ ಕುಳಿತ 186 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ನಿಹಲ್ ಹೆಚ್ ಜಿ – 596, ಡಿ . ಹೆಚ್ ನವಮಿ – 593 ರಕ್ಷಾ ನಾರಾಯಣ ಹರಿಕಾಂತ್ – 589, ನಂದನ ಜನಾರ್ದನ ಶಂಕರಲಿಂಗ – 588, ಪ್ರಮಥ್ ಶ್ಯಾನುಬೋಗ್ – 588 ಹಾಗೂ ವಾಣಿಜ್ಯ ವಿಭಾಗ: ಎಂ ಆರ್ ಕಿರಣ – 585, ಸಾತ್ವಿ – 583, ರಕ್ಷಿತಾ – 573 ಉತ್ತಮ ಅಂಕ ಪಡೆದಿರುತ್ತಾರೆ.
ಅವರಿಗೆ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ನಿರ್ದೇಶಕರು, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ , ಸಿಬ್ಬಂದಿ ವರ್ಗದವರು ಅಭಿನಂದನೆ ಹಾಗೂ ಶುಭಾಶಯ ಸಲ್ಲಿಸಿರುತ್ತಾರೆ

