Site icon Kundapra.com ಕುಂದಾಪ್ರ ಡಾಟ್ ಕಾಂ

SSLC Results: ದ,ಕ ಪ್ರಥಮ, ಉಡುಪಿ ದ್ವಿತೀಯ. 7 ವಿದ್ಯಾರ್ಥಿಗಳಿಗೆ ಔಟ್‌ ಆಫ್‌ ಔಟ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೆಂಗಳೂರು:
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಇಲಾಖೆ ವೆಬ್ ಸೈಟ್ ನಲ್ಲೂ ( https://karresults.nic.in ) ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಿದೆ. SMS, ವಾಟ್ಸಪ್‌ ಮೂಲಕವೂ ಫಲಿತಾಂಶ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಏಳು ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ದಾವಣಗೆರೆಯ ಭರತ್​, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್​, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ.
ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ (ಶೇ 97.51) ಗಳಿಸಿವೆ.
ಮಂಡ್ಯ 5ನೇ ಸ್ಥಾನ (ಶೇ 97.45), ಶಿರಸಿ 6ನೇ ಸ್ಥಾನ (ಶೇ 97.21),
ಹಾವೇರಿ 7ನೇ ಸ್ಥಾನ (ಶೇ 96.87),
ಕೊಡಗು 8ನೇ ಸ್ಥಾನ (ಶೇ 96.70),
ಶಿವಮೊಗ್ಗ 9ನೇ ಸ್ಥಾನ (ಶೇ 96.56),
ವಿಜಯನಗರ 10ನೇ ಸ್ಥಾನ (ಶೇ 96.39),
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ (ಶೇ 95.84),
ಧಾರವಾಡ 12ನೇ ಸ್ಥಾನ (ಶೇ 95.59),
ಕೋಲಾರ 13ನೇ ಸ್ಥಾನ (ಶೇ 95.50) ಗಳಿಸಿವೆ.
ಬಾಗಲಕೋಟೆ 14ನೇ ಸ್ಥಾನ – 95.42%
ಬೆಂ.ಉತ್ತರ 15ನೇ ಸ್ಥಾನ – 95.34%
ಗದಗ 16ನೇ ಸ್ಥಾನ – 95.24%
ಚಿಕ್ಕಮಗಳೂರು 17ನೇ ಸ್ಥಾನ – 94.99%
ಬೆಳಗಾವಿ 18ನೇ ಸ್ಥಾನ – 94.75%
ದಾವಣಗೆರೆ 19ನೇ ಸ್ಥಾನ – 94.64%
ಮೈಸೂರು 20ನೇ ಸ್ಥಾನ – 94.50%
ರಾಯಚೂರು 21ನೇ ಸ್ಥಾನ – 94.41%
ವಿಜಯಪುರ 22ನೇ ಸ್ಥಾನ – 94.17%
ಚಿಕ್ಕೋಡಿ 23ನೇ ಸ್ಥಾನ – 94.09%
ಬಳ್ಳಾರಿ 24ನೇ ಸ್ಥಾನ – 93.36%
ಕೊಪ್ಪಳ 25ನೇ ಸ್ಥಾನ – ಶೇ.93.10
ರಾಮನಗರ 26ನೇ ಸ್ಥಾನ – 92.83%
ಚಿತ್ರದುರ್ಗ 27ನೇ ಸ್ಥಾನ – 92.25%
ಬೀದರ್ 28ನೇ ಸ್ಥಾನ – 92.18%
ತುಮಕೂರು 29ನೇ ಸ್ಥಾನ – 92.04%
ಚಾಮರಾಜನಗರ 30ನೇ ಸ್ಥಾನ – 91.89%
ಯಾದಗಿರಿ 31ನೇ ಸ್ಥಾನ – 91.89%

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಹಾಗೇಯೇ ‘KarnatakaOne’ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪರಿಶೀಲಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದೆ.

Exit mobile version