Site icon Kundapra.com ಕುಂದಾಪ್ರ ಡಾಟ್ ಕಾಂ

ಶಂಕರನಾರಾಯಣ: ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಎಸ್‌.ಎಸ್.‌ಎಲ್.‌ಸಿಯಲ್ಲಿ ಪ್ರೀತಮ್ ಜಿ. ಪೂಜಾರಿ ರಾಜ್ಯಕ್ಕೆ ಟಾಪರ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಶಂಕರನಾರಾಯಣದ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಲೂಕಿನ ಬಿದ್ಕಲಕಟ್ಟೆಯ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳ ಪುತ್ರ ಪ್ರೀತಮ್ ಪೂಜಾರಿ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಎಲ್ ಕೆ ಜಿ ಯಿಂದ 10 ನೇ ತರಗತಿಯವರೆಗೆ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯಲ್ಲೇ ಓದಿರುವ ಪ್ರೀತಮ್ ಜಿ ಪೂಜಾರಿಯವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಬೋಧಕ ವೃಂದ ಹರ್ಷ ವ್ಯಕ್ತಪಡಿಸಿದೆ.

ಇದನ್ನೂ ಓದಿಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣ – ವಿಜ್ಞಾನ (PCMB / PCMCs) ವಿಭಾಗದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ. ಪ್ರವೇಶಾತಿ ಪ್ರಾರಂಭ – https://kundapraa.com/?p=97752 .

ತಂದೆ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ನಾಗರತ್ನ ಗೃಹಿಣಿ. ದಂಪತಿಗಳ ದ್ವಿತೀಯ ಪುತ್ರ ಇದೇ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ.

► ಮದರ್ ತೆರೆಸಾ ಪಿಯು ಕಾಲೇಜು ಶಂಕರನಾರಾಯಣ – ವಾಣಿಜ್ಯ ವಿಭಾಗದ ಅತ್ಯುತ್ತಮ ಸಾಧನೆ. ಪ್ರವೇಶಾತಿ ಪ್ರಾರಂಭ – https://kundapraa.com/?p=97738 .

ಕರ್ನಾಟಕ ರಾಜ್ಯ SSLC ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇಕಡಾ 94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Exit mobile version