ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಸ್.ಎಸ್.ಎಲ್.ಸಿ.ಫಲಿತಾಂಶದ ಲ್ಲಿ 625ಕ್ಕೆ 625 ಅಂಕಗಳ ಸಾಧನೆ ಮಾಡಿದ ತಾಲೂಕಿನ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ ಅವರನ್ನು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಅಭಿನಂದಿಸಿದರು.
ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿ ಇವರು ಈ ಯಶಸ್ಸು ಮುಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ಪ್ರೀತಮ್ ಪೂಜಾರಿಯವರ ಮುಂದಿನ ಎಲ್ಲ ಕನಸುಗಳು ಈಡೇರಲಿ ಎಂದರು. ಕಡು ಬಡತನ ನಡುವೆಯೂ ಮಗನ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿರುವ ತೊಂಬಟ್ಟು ಕಸಿನಪಾಳು ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳಿಗೆ ಹಾಗೂ ಶಂಕರ್ ನಾರಾಯಣ ಮದರ್ ತೆರೇಸಾ ಶಾಲಾ ಆಡಳಿತ ಮಂಡಳಿಗೂ ಮತ್ತು ಅಧ್ಯಾಪಕವಂದದವರಿಗೆ ಶುಭ ಹಾರೈಸಿದರು.
ಇದನ್ನೂ ಓದಿ – ► ಶಂಕರನಾರಾಯಣ: ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಎಸ್.ಎಸ್.ಎಲ್.ಸಿಯಲ್ಲಿ ಪ್ರೀತಮ್ ಜಿ. ಪೂಜಾರಿ ರಾಜ್ಯಕ್ಕೆ ಟಾಪರ್ – https://kundapraa.com/?p=97763 .

