Site icon Kundapra.com ಕುಂದಾಪ್ರ ಡಾಟ್ ಕಾಂ

ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮವು ಇತೀಚಿಗೆ ನಡೆಯಿತು.

ಮೇ.13ರ ಸಂಜೆ ಪರಿವಾರ ದೈವಗಳ ಪ್ರತಿಷ್ಠಾಪನೆ, 6.00 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು  ವಹಿಸಿಕೊಂಡ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ದಿನಕರ ತೋಳಾರ್  ಮಾತನಾಡಿ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಅತಿ ಪುರಾತನ ದೇವಸ್ಥಾನವಾಗಿದ್ದು, ರಸ್ತೆಯ ವಿಸ್ತರಣೆಯಿಂದ ರಸ್ತೆಯ ಪಕ್ಕಕ್ಕೆ ಬಂದಿರುವುದರಿಂದ ದಾನಿಗಳ ನೆರವಿನಿಂದ ನೂತನ ಶಿಲಾ ದೇಗುಲ ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ಕೆ ಭಕ್ತಾಧಿಗಳು ಕೈ ಜೋಡಿಸಿದ ಕಾರಣ ಆಕರ್ಷಕ ದೇವಸ್ಥಾನ ನಿರ್ಮಾಣವಾಗಿದೆ ಎಂದರು.

ಅವಧಾನಿ ಗುಂಡಿಬೈಲು ಸುಬ್ರಮಣ್ಯ ಭಟ್ ಧಾರ್ಮಿಕ ಉಪನ್ಯಾಸಗೈದರು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರರು  ಹಿಂದೆ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು, ಅನ್ನದಾನ ನಡೆಸುವುದು ಕಷ್ಟಕರವಾಗಿದ್ದು, ಇಂದು ಭಕ್ತಾದಿಗಳ ಸೇವೆಯಿಂದ ಎಲ್ಲ ದೇವಸ್ಥಾನಗಳು ಅಭಿವೃದ್ಧಿ ಹೊಂದುತ್ತಿದ್ದು, ಧಾರ್ಮಿಕ  ಕಾರ್ಯಕ್ರಮಗಳು  ಮತ್ತು ನಿರಂತರ ಅನ್ನಪ್ರಸಾದ ನಡೆಯುತ್ತಿದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವೇದಮೂರ್ತಿ ಸೂರ್ಯನಾರಾಯಣ  ಬಾಯರಿ,  ಹಳೆಅಗ್ರಹಾರ  ಶ್ರೀ ಸಾಂಬ ಸದಾಶಿವ ದೇವಸ್ಥಾನದ ಆಡಳಿತ ಧರ್ಮದರ್ಶಿ ವೆಂಕಟೇಶ್ ಜಿ., ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ, ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಗಣಪಯ್ಯ ಶೆಟ್ಟಿ ಬಂಟಕೋಡು, ಉಪಾಧ್ಯಕ್ಷರಾದ ನಾರಾಯಣ ನಾಯ್ಕ, ಕಾರ್ಯದರ್ಶಿ ಆನಂದ ನಾಯ್ಕ, ನಿಡ್ಗೋಡು ಪ್ರವೀಣ ಕುಮಾರ್ ಶೆಟ್ಟಿ, ಎಂ. ಸುಧಾಕರ ಶೆಟ್ಟಿ ಮೆಟ್ಕಲ್, ಸಂಜು ಮಡಿವಾಳ ಕಟ್ಟೆಮಕ್ಕಿ, ಕೃಷ್ಣಮೂರ್ತಿ ಬಾಯರಿ ಅಗ್ರಹಾರ,  ಪಾಂಡುರಂಗ ನಾಯ್ಕ ತಲ್ಲಂಜೆ, ಸುಧಾಕರ ಕುಲಾಲ್ ಶಂಕರನಾರಾಯಣ, ಶಿವರಾಮ ಶೆಟ್ಟಿ ಜನ್ಸಾಲೆ, ರಾಜೀವ ಶೆಟ್ಟಿ ಶಾನ್ಕಟ್ಟು  ಉಪಸ್ಥಿತರಿದ್ದರು.

ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿ, ಎಂ. ಸುದೀರ್ ರಾವ್ ವಂದಿಸಿದರು. ನಂತರ ಸುರೇಶ ಶೆಟ್ಟಿ ಶಂಕರನಾರಾಯಣ ಮತ್ತು ಬಳಗದವರಿಂದ ಯಕ್ಷಗಾನ ಗಾನ ನಾಟ್ಯ ವೈಭವ ನಡೆಯಿತು.

Exit mobile version