Site icon Kundapra.com ಕುಂದಾಪ್ರ ಡಾಟ್ ಕಾಂ

21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
 ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಅದ್ಭುತ ಪ್ರದರ್ಶನ ನೀಡಿ 21ನೇ ಬಾರಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡು, ಪೂರ್ಣಪ್ರಜ್ಞಾ ರೋಲಿಂಗ್ ಟ್ರೋಪಿಯನ್ನು ತನ್ನದಾಗಿಸಿಕೊಂಡರು.    

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜಿನ ತಂಡವನ್ನು ಆಳ್ವಾಸ್ ತಂಡವು 25-10 ಹಾಗೂ 25-12 ಅಂಕಗಳ ನೇರ ಸೆಟ್‌ನಲ್ಲಿ ಮಣಿಸಿತು. ಸೆಮಿಫೈನಲ್‌ನಲ್ಲಿ ಹಂಪನಕಟ್ಟೆಯ  ವಿಶ್ವವಿದ್ಯಾಲಯ ಕಾಲೇಜಿನ ವಿರುದ್ಧ 25-18 ಹಾಗೂ 25-12 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಅಂತಿಮ ಫೈನಲ್ ಹಣಾಹಣಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ತಂಡವನ್ನು 25-18 ಮತ್ತು 25-16 ಅಂಕಗಳ ನೇರ ಸೆಟ್‌ನಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್‌ಶಿಫ್ ಕಿರೀಟವನ್ನು  18ನೇ ಬಾರಿ ತನ್ನದಾಗಿಸಿಕೊಂಡಿತು.

ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Exit mobile version