ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಆರ್‌ಟಿಓ ಅಧಿಕಾರಿ ಮಾರುತಿ ನಾಯ್ಕ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿಗಳು, ಐ.ಆರ್.ಬಿ ಸಂಸ್ಥೆಯ ಮನೋಜ್ ಮೊದಲಾದವರು ತ್ರಾಸಿ – ಮರವಂತೆ ಬೀಚ್ ಬಳಿ ಪರಿಶೀಲನೆ ನಡೆಸಿ ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗೆ ಸೂಚನೆ ನೀಡಿದ್ದರು. ಅದರಂತೆ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ.

ತಾಲೂಕಿನ ತ್ರಾಸಿ – ಮರವಂತೆ ಬೀಚ್ ಬಳಿ ಎ.29 ರಂದು ಪ್ರವಾಸಿ ಬಸ್‌ವೊಂದು ನಿಂತಿದ್ದ ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಆ ಬಳಿಕ ಜಂಟಿ ಪರಿಶೀಲನೆ ನಡೆಸಲಾಗಿತ್ತು.
ರಾ.ಹೆ–66ರ ತ್ರಾಸಿ ಮರವಂತೆ ಮಧ್ಯೆ ನೋ ಪಾರ್ಕಿಂಗ್, ಅಪಘಾತ ವಲಯ ಸೂಚಕ ನಾಮಫಲಕಗಳು, ವಾಹನಗಳ ವೇಗ ಮಿತಿ ಸಂಬಂಧಿತ ಸೂಚನೆಗಳು, ರಿಫ್ಲೆಕ್ಟರ್ʼಗಳನ್ನು ಅಳವಡಿಸಲಗಿದೆ. ವಾಹನ ಸವಾರರ ಸುರಕ್ಷತೆ ಹಾಗೂ ಅಪಘಾತ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುತ್ತಿಗೆ ಸಂಸ್ಥೆ ಅಗತ್ಯ ಕ್ರಮವಹಿಸಿದೆ ಎಂದು ತಿಳಿದುಬಂದಿದೆ.