ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಇಂದಿನ ಸಮಾಜದಲ್ಲಿ ನಾವು ಸ್ವಾತಂತ್ರವಾಗಿ ಬದುಕಬೇಕೆಂದರೆ ಕಾನೂನು ಸುವ್ಯವಸ್ಥೆಗಳ ಕುರಿತು ಮಾಹಿತಿ ಎಲ್ಲರಿಗೂ ಅಗತ್ಯ ಎಂದು ಬ್ರಹ್ಮಾವರ ಪೋಲಿಸ್ ಸ್ಟೇಷನ್‌ನ ಸಬ್ ಇನ್ಸ್‌ಪಕ್ಟೆರ್ ಮುಕ್ತಾ ಬಾಯಿ ಹೇಳಿದರು.
ಅವರು ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ನಡೆಯುತ್ತಿರುವ ಬ್ಯೂಟೀಪಾರ್ಲರ್ ಮತ್ತು ಕಂಪ್ಯೂಟರ್ ಡಿ.ಟಿ.ಪಿ. ಶಿಭಿರಾರ್ಥಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸೈಬರ್ ಕ್ರೈಮ್ ಬಗ್ಗೆ ವಾಟ್ಸಪ್ ಗ್ರೂಪ್‌ಗಳಿಗೆ ಪರಿಚಯವಿಲ್ಲದವರಿಂದ ಗ್ರೂಪ್‌ಗೆ ಸೇರಿಸಿದರೆ ಗ್ರೂಪ್‌ನಿಂದ ಹೊರಬಂದು ಸುರಕ್ಷಿತವಾಗಿರಬೇಕು ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ತಿಳಿಸಿದರು. ಸ್ನಾಪ್ ಚಾಟ್‌ಗಳನ್ನು ತುಂಬಾ ಜಾಗರೂಕತೆಯಿಂದ ಬಳಸಿ ಇದರಲ್ಲಿ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಆತ್ಯಹತ್ಯೆಗೆ ಯುವ ಜನಾಂಗ ಆಲೋಚನೆ ಮಾಡದೇ ಸಹನೆಯಿಂದ ಯೋಚಿಸಿ ಬಾಳಬೇಕು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ, ಜೀವನ ಇರುವುದು ಒಂದು ಸಾರಿ ಹಾಗಾಗಿ ಉತ್ತಮ ರೀತಿಯಲ್ಲಿ ಬದುಕನ್ನು ಜೀವಿಸಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದಂತಹ ಬ್ರಹ್ಮಾವರ ಅಸಿಸ್ಟಂಟ್ ಸಬ್ ಇನ್ಸ್‌ಪಕ್ಟೆರ್ ವಿಟ್ಟಲ್, ಪೋಲಿಸ್ ಸ್ಟೇಷನ್ ಅವರ ರಸ್ತೆ ಸುರಕ್ಷತೆಯ ನಿಯಮದ ಬಗ್ಗೆ ಮಾತನಾಡಿ, ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಕಡ್ಡಾಯ ಹಾಕಬೇಕು. ರಸ್ತೆಯ ನಿಯಮ ಪಾಲನೆ ಮಾಡಬೇಕು. ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದಂತಹ ಬ್ರಹ್ಮಾವರ ಪ್ರೊಬೆಷನರಿ ಸಬ್ ಇನ್ಸ್‌ಪಕ್ಟೆರ್‌ಆಶ್ರೀತಾ, ಸೈಬರ್ ಕ್ರೈಮ್ ಬಗ್ಗೆ ಮಾತನಾಡಿ, ಸೈಬರ್ ಕ್ರೈಮ್ ಸಹಾಯವಾಣಿ 1930 ದೂರು ದಾಖಲಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಎಪಿಕೆ ಪೈಲ್‌ನ್ನು ಕ್ಲಿಕ್ ಮಾಡದೇ ಅದರ ಬಗ್ಗೆ ಜಾಗರೂಕರಾಗಬೇಕು ಎಂದು ಎಚ್ಚರಿಸಿದರು.
ಖಜಿಟಲ್ ಅರೆಸ್ಟ್ ಬಗ್ಗೆ, ‘ಸಂಚಾರ್ ಸಾಥಿ’ಅಪ್ಲಿಕೇಷನ್, ‘ಕೆ.ಎಸ್.ಪಿ.’ ಅಪ್ಲಿಕೇಷನ್, ‘*#೦೬#’ ಮೂಲಕ ಮೊಬೈಲ್‌ನ IಒಇI ನಂಬರ್ ಕಂಡು ಹಿಡಿಯುವ ಬಗ್ಗೆ ಹಾಗೂ ಮೊಬೈಲ್‌ನಲ್ಲಿ ‘ಪೈಂಡ್ ಮೈ ಡಿವೈಸ್’ ಒಪ್ಸನ್ ಬಳಕೆ ಬಗ್ಗೆ ಹಾಗೂ ವಾಟ್ಸಪ್‌ನಲ್ಲಿ ‘ಟೂ ಸ್ಟೆಪ್ ವೆರಿಪಿಕೇಷನ್, ಮತ್ತು ಕಠಿಣ ಪಾಸ್‌ವರ್ಡ್ ಬಳಕೆ, ಮೊಬೈಲ್ ಸ್ವಿಚ್ ಆಪ್ ಮಾಡುವಾಗ ಪಾಸ್‌ವರ್ಡ್ ಕೇಳುವಂತೆ ಸೆಟ್ಟಿಂಗ್‌ನಲ್ಲಿ ಇಡುವಂತೆ ಮುಂಜಾಗ್ರತಾ ಕ್ರಮವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ., ಪ್ರಾಸ್ತಾವಿಕ ನುಡಿಯನ್ನು ಮಾತನಾಡಿ, ಈ ಒಂದು ಕಾನೂನು ಮಾಹಿತಿ ಕಾರ್ಯಕ್ರಮ ನಮ್ಮ ಬದುಕಿಗೆ ತುಂಬಾ ಅಮುಲ್ಯವಾಗಿದೆ, ಹಾಗಾಗಿ ತಾವೆಲ್ಲರೂ ಕಾನೂನು ಸುವ್ಯವಸ್ಥೆಗಳನ್ನು ಅರಿತುಕೊಂಡು ಉನ್ನತ ಮಟ್ಟದ ಜೀವನವನ್ನು ನಡೆಸಿ ಎಂದು ಶುಭ ಹಾರೈಸಿದರು.
ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರಾ ಕೆ. ನಿರೂಪಿಸಿ, ಸಂಸ್ಥೆಯ ಶಿಭಿರಾರ್ಥಿ ಆಶಾ ಪ್ರಾರ್ಥಿಸಿ, ಕಛೇರಿ ಸಹಾಯಕರಾದ ಶಾಂತಪ್ಪ ಸ್ವಾಗತಿಸಿ, ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು.

