ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಚೇರಿ ಪ್ರಜಾಸೌಧದ ಕೋರ್ಟ್‌ಹಾಲ್‌ನಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94ಸಿ ಹಾಗೂ 94ಸಿಸಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು ಕ್ಷೇತ್ರದಲ್ಲಿ ಹಕ್ಕು ಪತ್ರ ವಂಚಿತರಿಗೆ ಕಾನೂನು ತೊಡಕುಗಳನ್ನು ನಿವಾರಿಸಿ ಕೊಂಡು ಅರ್ಹರಿಗೆ ಭೂಮಿ ಹಕ್ಕು ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕಳೆದ ವಾರ ವಂಡ್ಸೆ ಹೋಬಳಿಯಲ್ಲಿ 50 ಕ್ಕೂ ಮಿಕ್ಕಿದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಿಸಲಾಗಿದೆ. ಪ್ರಸ್ತುತ ಕ್ಷೇತ್ರದ ಅರ್ಹ 24 ಕುಟುಂಬಕ್ಕೆ 94 ಸಿ ಹಾಗೂ 94 ಸಿಸಿ ಅಡಿ ಹಕ್ಕು ಪತ್ರ ವಿತರಿಸಲಾಗಿದೆ.ಬಡ ಜನರಿಗೆ ಹಕ್ಕು ಪತ್ರ ಒದಗಿಸುವುದೇ ಪ್ರಮುಖ ಆದ್ಯತೆಯನ್ನಾಗಿ ಇಟ್ಟು ಕೊಳ್ಳಲಾಗಿದೆ ಎಂದರು.
24 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕರು:
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು, ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ 09 ಫಲಾನುಭವಿಗಳಿಗೆ 94 ಸಿಸಿ ಹಾಗೂ ಗೋಳಿಹೊಳೆ, ಜಡ್ಕಲ್, ಮುದೂರು, ಯಳಜಿತ್, ನಾಡ, ನಾವುಂದ, ಕಾಲ್ತೋಡು ಹಾಗೂ ಬಿಜೂರು ಗ್ರಾಮಗಳ 15 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ರಾಮಚಂದ್ರಪ್ಪ, ಕಂದಾಯ ನಿರೀಕ್ಷಕರಾದ ಉಪೇಂದ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.