Site icon Kundapra.com ಕುಂದಾಪ್ರ ಡಾಟ್ ಕಾಂ

ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿ ಬಕ್ರೀದ್ ಸಂಭ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸುಮಾರು 5 ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹಿಮರ ತ್ಯಾಗ ಬಲಿದಾನಗಳ ದೃಷ್ಟಾಂತವು ಮನುಕುಲದಲ್ಲಿ ಮಹಾ ಸಂವೇದನೆ ಮೂಡಿಸಿದ ಘಟನೆ ಎಂದು ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ಹೇಳಿದರು.

ಅವರು ಗುರುವಾರ ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿನ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಧಾರ್ಮಿಕ ಪ್ರವಚನ ನೀಡಿದರು. ನೀರಿಗಾಗಿ ಹಾಜಿರಾರವರು ಓಡಿದ ಎರಡು ಪರ್ವತಗಳ ನಡುವಿನ ಓಟ ಮತ್ತು ಅದಕ್ಕೆ ಪ್ರತಿಯಾಗಿ ಅಲ್ಲಾಹನು ನೀರಿಲ್ಲದ ಮರುಭೂಮಿಯಲ್ಲಿ ಇಡೀ ಜಗತ್ತು ಕುಡಿಯುವಷ್ಟು ನೀರನ್ನು ಸೃಷ್ಟಿಸಿದ್ದು ಕಾಲಾತೀತವಾದ ಜಾಗತಿಕ ಚರಿತ್ರೆಯ ಮಹಾನ್ ವಿಸ್ಮಯಗಳಲ್ಲಿ ಒಂದು. ದೇವನ ಇರುವಿಕೆ, ಪ್ರಭಾವ ಮತ್ತು ಪ್ರೀತಿ ಎಲ್ಲವೂ ಸಂಗಮವಾಗಿದ್ದನ್ನು ಸಂಭ್ರಮಿಸಲು ಈ ಹಬ್ಬವಿದೆ. ಯಾವುದೇ ಹಬ್ಬದ ಸಂಭ್ರಮವು ಸೌಹಾರ್ದಕ್ಕೆ ಮತ್ತು ಸಹಧರ್ಮೀಯರೊಂದಿಗಿನ ಸಹಜೀವನಕ್ಕೆ ಪೂರಕವಾಗಿರಬೇಕು ಎಂದರು.

ಪ್ರಾರ್ಥನಾ ಸಭೆಯಲ್ಲಿ ಅಲಿಯಬ್ಬ ತೋಟದಮನೆ, ಸೈಯದ್ ರಫೀಕ್, ಹಸನ್ ಸಾಹೇಬ್, ಶಾಹುಲ್ ಹಮೀದ್, ಸೈಯದ್ ಅಬ್ಬಾಸ್, ಸೈಯದ್ ಇಕ್ಬಾಲ್ , ಅಮಾನ್ ಜಮಾಲ್, ಇಬ್ರಾಹಿಂ ಸೈಯದ್, ಆದಮ್ ಸಾಹೇಬ್, ಅಶ್ರಫ್ ಕೋಟೇಶ್ವರ, ಅಶ್ಫಾಕ್  ಸಾಬ್ಜನ್, ಸಲೀಮ್ ಮೌಲಾಲಿ, ಅಬ್ದುಲ್ ರೆಹಮಾನ್, ಮುಹಮ್ಮದ್ ರಫೀಕ್, ಶಬ್ಬೀರ್ ಸಾಹೇಬ್, ಅಬ್ದುಲ್ ಹಮೀದ್, ಅಲ್ತಾಫ್ ಅಲಿ, ಬಾವಾ ಸಾಹೇಬ್, ಆರಿಫ್ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.

Exit mobile version