Site icon Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪಬ್ಲಿಕ್ ಸ್ಕೂಲ್‌: ಕಲಿಕಾ ಫಲಿತಾಂಶ ಮತ್ತು ಬೋಧನಾ ವಿಧಾನಗಳ ಕುರಿತು ವಿಶೇಷ ಉಪನ್ಯಾಸ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶೈಕ್ಷಣಿಕ ಹಂತದಲ್ಲಿ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನ ಮತ್ತು ಪ್ರಗತಿಪತ್ರಿಕೆಯು ಮಹತ್ವದ್ದಾಗಿರುತ್ತದೆ. ಕಲಿಕಾ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದಕ್ಕೆ ನವೀನ ರೀತಿಯ ಬೋಧನಾ ತಂತ್ರಗಳನ್ನು ನಾವು ಹೆಚ್ಚು ಹೆಚ್ಚು ಬಳಸಿಕೊಂಡು ಚಟುವಟಿಕೆ ಆಧಾರಿತ ಪಾಠ ಕ್ರಮದ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಂವಿಜೆ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ, ಶಿಕ್ಷಣ ತಜ್ಞೆ ಹಾಗೂ ಸಿಬಿಎಸ್‌ಸಿ ಮಾಸ್ಟರ್ ಟ್ರೈನರ್ ವಂಶಿಪ್ರಿಯ ಅಮರ್ ಹೇಳಿದರು.

ಅವರು ಗುರುವಾರ ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಿಗಾಗಿ “ಸಮಗ್ರ ಪ್ರಗತಿ ಪತ್ರಿಕೆಯ ಮೂಲ ಹಾಗೂ ಕಲಿಕಾ ಫಲಿತಾಂಶ ಮತ್ತು ಬೋಧನಾ ವಿಧಾನಗಳು “ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಅವರು ವಹಿಸಿ ಮಾತನಾಡಿ,  ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಯನ ಮತ್ತು ಅನುಭವಾತ್ಮಕ ವಿಚಾರಗಳನ್ನು ಹೆಚ್ಚು ಬಳಸಿಕೊಂಡು ತಮ್ಮ ಬೋಧನಾ ವಿಧಾನದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕರಾಗಬೇಕು ಎಂದರು.

ಪ್ರಾಂಶುಪಾಲರಾದ ಡಾ. ರೂಪ ಶೆಣೈ ಅವರು ಶಿಕ್ಷಕರಿಗೆ ಶುಭ ಕೋರಿದರು. ಶಿಕ್ಷಕಿ ಮಮತಾ ಕುಮಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Exit mobile version