Kundapra.com ಕುಂದಾಪ್ರ ಡಾಟ್ ಕಾಂ

ವಡೇರಹೋಬಳಿ ಶಾಲಾ ವಾರ್ಷಿಕೋತ್ಸವ

ಕುಂದಾಪುರ: ಶಾಸಕರ ಮಾ.ಹಿ.ಪ್ರಾ. ಶಾಲೆ, ವಡೇರಹೋಬಳಿ ಇಲ್ಲಿನ ವಾರ್ಷಿಕೋತ್ಸವ ಸಮಾರಂಭದ ಬೆಳಗ್ಗಿನ ಧ್ವಜಾರೋಹಣವನ್ನು ಹೋಟೆಲ್ ಹರಿಪ್ರಸಾದ್ ಇದರ ಮಾಲೀಕರಾದ ಶ್ರೀಯುತ ಅಭಿನಂದನ್ ಶೆಟ್ಟಿ ಇವರು ನೆರವೇರಿಸುವುದರ ಮೂಲಕ ಪ್ರಾರಂಭಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಕೆ. ಸೀತಾರಾಮ ಶೆಟ್ಟಿ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಕುಂದಾಪುರ ಇವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಶೆಟ್ಟಿ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ ವಡೇರಹೋಬಳಿ ಹಾಗೂ ಶ್ರೀಮತಿ ದೇವಿಕುಮಾರಿ ಉಪಸ್ಥಿತರಿದ್ದರು. ಪದವೀಧರ ಮುಖ್ಯ ಶಿಕ್ಷಕರಾದ ಶ್ರೀ ಬಿ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ವಯಲ್ಲಾ ಮಿರಾಂಡ ವಂದಿಸಿದರು.

ಮದ್ಯಾಹ್ನದ ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಹೆಚ್. ಶೋಭಾ ಶೆಟ್ಟಿಯವರು ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಕರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಅಲ್ಲದೆ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವುದನ್ನು ಸ್ಮರಿಸಿದರು.

ಶ್ರೀ ದತ್ತಾನಂದ, ಗಂಗೊಳ್ಳಿ ಇವರು ಬಹುಮಾನ ವಿತರಣೆ ಮಾಡಿ ಇಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ನೀಡುತ್ತಿರುವುದು ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಶ್ರೀ ಕೆ. ಆರ್. ನಾಯಕ್, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರು, ಶ್ರೀ ಅಮರಪ್ರಸಾದ ಶೆಟ್ಟಿ, ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಕುಂದಾಪುರ, ಶ್ರೀ ಎಂ. ಸದಾರಾಮ ಶೆಟ್ಟಿ ಹಾಗೂ ಡಾ: ಭವಾನಿ ರಾವ್ ಮುಖ್ಯ ಅತಿಥಿಗಳಾಗಿದ್ದರು. ಸರಕಾರಿ ಪ್ರೌಢ ಶಾಲೆ, ಬಸ್ರೂರಿನ ಶ್ರೀ ಶ್ರೀಕಾಂತ ವಿ., ವಾಚನ ಮಾಡಿದರು. ವರದಿವಾಚನವನ್ನು ಶ್ರೀಮತಿ ರತ್ನಾರವರು ಮಾಡಿದರು.

ಎಲ್ಲಾ ಅತಿಥಿಗಣ್ಯರನ್ನು ಪದವೀಧರ ಮುಖ್ಯ ಶಿಕ್ಷರಾದ ಶ್ರೀ ಬಿ. ಸುಧಾಕರ ಶೆಟ್ಟಿ ಸ್ವಾಗತಿಸುತ್ತಾ, ಶಾಲೆಯ ಮುಂದಿನ ಯೋಜನೆಯ ಬಗ್ಗೆ ತಿಳಿಸುತ್ತಾ, ಹಿಂದಿನ ವರ್ಷಕ್ಕಿಂತ ಈ ವರ್ಷ ನಮ್ಮ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿರುವರು ಎಂದು ತಿಳಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಆಧ್ಯಕ್ಷರಾದ ಶ್ರೀ ಕೆ. ಅಶೋಕ ಹಾಗೂ ವಿದ್ಯಾರ್ಥಿ ನಾಯಕರಾದ ಮಾ: ಕಿಶೋರ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಶಂಕರ ನಾಯ್ಕ ಹಾಗೂ ಶ್ರೀಮತಿ ಸುಮಿತ್ರಾ ನಿರ್ವಹಿಸಿದರು. ಧನ್ಯವಾದವನ್ನು ಶ್ರೀಮತಿ ಇಂದಿರಾ ಮಾಡಿದರು. ಅನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರೇಕ್ಷಕರನ್ನು ರಂಜಿಸಿದರು.

Exit mobile version