ಶಾಂಭವಿ ಎಂ. ಜೆ.
ಅಂದರ ಲೋಕ ಕತ್ತಲೆ ಎನ್ನುತ್ತಾರೆ. ಆದರೆ ಅಂದರ ಲೋಕದಲ್ಲಿಯೂ ಅಪೂರ್ವ ಬೆಳಕಿದೆ ಎಂಬುದನ್ನು ನಮ್ಮ ನಡುವೆ ಎಷ್ಟೋ ವ್ಯಕ್ತಿಗಳ ಸಾಧನೆಯೇ ಸಾಕ್ಷಿಕರಿಸುತ್ತದೆ. ಈ ವಿಷ್ಯಾ ಈಗ್ಯಾಕೆ ಅಂತಿರಾ? ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹುಟ್ಟೂ ಅಂಧರಾದ, ಆದರೆ ಅಪ್ರತಿಮ ಪ್ರತಿಭಾನ್ವಿತ ಬಸವರಾಜ್ ಶಂಕರ್ ಉಮಾರಾಣಿ ಅವರ ಬುದ್ಧಿಮತ್ತೆ ಇದನ್ನು ಸಾಕ್ಷೀಕರಿಸಿತು.
ಈ ಆಧುನಿಕ ಯುಗದಲ್ಲಿ ನಮ್ಮ ಮೊಬೈಲ್ ನಂಬರನ್ನೇ ನೆನಪಿಡಲಾಗದೇ ಸೇವ್ ಮಾಡುವುದನ್ನು ನೋಡಿದ್ದೇವೆ. ಆದರೆ ನಮ್ಮ ಬಸವರಾಜ್ ಅವರಿಗೆ ಯಾವುದೇ ಮೊಬೈಲ್ ನಂಬರನ್ನು ಒಮ್ಮೆ ಹೇಳಿದರೆ ಸಾಕು ಹತ್ತು ವರ್ಷದ ನಂತರ ಕೇಳಿದರು ಸರಾಗವಾಗಿ ಹೇಳುತ್ತಾರೆ.
ಯಾರೇ ಹುಟ್ಟಿದ ದಿನಾಂಕ ತಿಂಗಳು ಹೇಳಿದರೆ ಸಾಕು ಕ್ಷಣದಲ್ಲಿಯೇ ವಾರವನ್ನು ಹೇಳುತ್ತಾರೆ. ವಿವಿಧ ಮೌಲ್ಯದ ನೋಟುಗಳನ್ನು ಅವರ ಕೈಗಿತ್ತ ಕೂಡಲೇ ಅದರ ಮೌಲ್ಯವನ್ನು ಹೇಳಬಲ್ಲ, ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದರೂ ನಿಖರವಾಗಿ ಹೇಳಬಲ್ಲ, ಕೋಟಿಗಟ್ಟಲ್ಲೆ ಅಂಕಿಯನ್ನು ಕುಡಿಸಿ ಕಳೆದು ಗುಣಿಸಿ ಭಾಗಿಸಿ ಕೂಡಲೇ ಉತ್ತರ ಹುಡುಕಬಲ್ಲ ಪ್ರತಿಭಾನ್ವಿತ.
ರಾಷ್ಟ್ರದ ಕ್ರಿಕೆಟ್ ಆಟಗಾರ ಹೆಸರು ಮತ್ತು ಅವರು ಗಳಿಸಿದ ರನ್, ವಿಕೆಟ್, ಕ್ಯಾಚ್‌ಗಳ ಬಗ್ಗೆ ವಿವರವಾಗಿ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಕಾಮೆಟ್ರಿ ನೀಡಬಲ್ಲರು.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಂಕರ್ ಸಿ ಹಾಗೂ ಉಮಾರಣಿ ದಂಪತಿಗಳ ದ್ವಿತೀಯ ಪುತ್ರರಾದ ಬಸವರಾಜ್ ಅಥಣಿಯ ನಡೆದಾಟುವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದವರು. ಓದಿನಲ್ಲಿಯೂ ಪ್ರತಿಭಾನ್ವಿತರಾದ ಅವರು ಪ್ರಸ್ತುತ ಬಿ.ಇಡ್ ಪದವಿ ಪಡೆಯುತ್ತಿದ್ದಾರೆ.
ಬಸವರಾಜ್ ಅವರ ಪ್ರತಿಭೆಯನ್ನು ಗುರುತಿಸಿ ಕೇಂದ್ರ ಸರಕಾರ ಕೊಡಮಾಡುವ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಗಳು ದೊರೆತಿವೆ. ತನ್ನ ಅಪೂರ್ವ ಜ್ಞಾಪನಾಶಕ್ತಿಯಿಂದ ಹತ್ತು ಸಾವಿರದಷ್ಟು ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಂಡಿರುವ ಬಸವರಾಜ್ ಗಿನ್ನಿಸ್ ದಾಖಲೆ ಮಾಡುವ ಹಂಬಲದಲ್ಲಿದ್ದಾರೆ.
ಎಲ್ಲರಲ್ಲಿಯೂ ಇಂತ ಪ್ರತಿಭೆ ಇರುವುದಿಲ್ಲ. ಅಚಿಧರಾಗಿದ್ದರೂ ತನ್ನ ಅಂಗವೈಕಲ್ಯವನ್ನು ಮೆಟ್ಟಿನಿಂತು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ – ಪ್ರಕಾಶ್ ಡಿ. ರಾಂಪುರ್, ಆಳ್ವಾಸ್ ವಿದ್ಯಾರ್ಥಿ
ಶಾಂಭವಿ ಆಳ್ವಾಸ್ ಕಾಲೇಜಿನ ಎಂಸಿಜೆ ವಿದ್ಯಾರ್ಥಿನಿ