ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉದ್ಯಮದಲ್ಲಾದ ನಷ್ಟ ಹಾಗೂ ಸಾಲಬಾಧೆಯಿಂದ ಬೇಸತ್ತು ಕಾಳಾವರ ಗ್ರಾಮ ಶಾಲೆ ಬಳಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಗಾಣಿಗ (42) ಎಂಬವರು ಗುರುವಾರ ಮನೆಯ ಸಮೀಪದ ಹಾಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಘವೇಂದ್ರ ಗಾಣಿಗ ಬುಧವಾರ ಪತ್ನಿ ಸುಜಾತಾ ಬಳಿ ಉಡುಪಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಸಂಜೆ ಪತ್ನಿ ಪೋನ್ ಮಾಡಿ ವಿಚಾರಿಸಿದಾಗ ಹೋಟೆಲ್ ಬಾಗಿಲು ಹಾಕಿ ರಿಕ್ಷಾ ಮಾಡಿಕೊಂಡು ಮನೆಗೆ ಹೋಗು, ನಾನು ಬರೋದು ತಡವಾಗುತ್ತದೆ ಎಂದು ಪೋನ್ ಕಟ್ ಮಾಡಿದ್ದರು. ರಾತ್ರಿ ಪತ್ನಿ ಮತ್ತೆ ಪೋನ್ ಮಾಡಿದಾಗ ಮೊಬೈಲ್ ಚಾಲನೆಯಲ್ಲಿ ಇರಲಿಲ್ಲ. ಪತ್ನಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದು, ಮನೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.