ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸಾವು

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಯಡ್ತರೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಭಟ್ಕಳ ತಾಲೂಕಿನ ಜಾಲಿಯ ಮಂಜುನಾಥ ನಾಯ್ಕ್ (44) ದಾರುಣವಾಗಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಉಪ್ಪುಂದ ಕರ್ಕಿಕಳಿ ನಿವಾಸಿ ಕಿರಣ್ (21) ಗಂಭೀರ ಗಾಯಗೊಂಡಿದ್ದಾನೆ.

Call us

Click Here

Click here

Click Here

Call us

Visit Now

Click here

ಘಟನೆಯ ವಿವರ:
ಟೆಂಪೋ ಟ್ರ್ಯಾಕ್ಸ್ ಮೂಲಕ ಧರ್ಮಸ್ಥಳಕ್ಕೆ ತೆರಳಿ ಊರಿಗೆ ಹಿಂತಿರುಗುತ್ತಿದ್ದ ಭಟ್ಕಳ ಜಾಲಿಯ ತಂಡವೊಂದು ರಾಹುತನಕಟ್ಟೆ ಬಳಿ ವಾಹನ ನಿಲ್ಲಿಸಿದ್ದು, ಅವರಲ್ಲಿ ಮಂಜುನಾಥ್ ನಾಯ್ಕ್ ಎಂಬುವವರು ರಾಷ್ಟ್ರೀಯ ಹೆದ್ದಾರಿಯ ಎದುರು ಬದಿ ಇದ್ದ ಮೀನಿನ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಫಘಾತದ ರಭಸಕ್ಕೆ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಬದಿಗೆ ಎಸೆಯಲ್ಪಟ್ಟು ಅಲ್ಲಿಯೇ ಮೃತಟ್ಟಿದ್ದಾರೆ. ಬುಲೆಟ್ ಬೈಕ್ ಸವಾರ ಡಿವೈಡರ್ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಬೈಂದೂರು ಪೊಲೀಸ್ ಪಿಎಸೈ ಪವನ್ ನಾಯಕ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಂಜುನಾಥ ನಾಯ್ಕ್ ಅವರು ಭಟ್ಕಳ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿದ್ದು, ಭಟ್ಕಳ ವಿನಾಯಕ ಸೌಹಾರ್ದ ಬ್ಯಾಂಕಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಬಿಜೆಪಿ ಮುಖಂಡರಾದ ಮಂಜುನಾಥ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಸೇರಿದಂತೆ ಅವರ ಆತ್ಮೀಯರು ಬೈಂದೂರು ಆಸ್ಪತ್ರೆಗೆ ಭೇಟಿ ನೀಡಿದರು.

ಕುಂದಾಪ್ರ ಡಾಟ್aಕಾಂ ಸುದ್ದಿ.

ಸ್ಟ್ರೀಟ್ ಲೈಟ್ ಹಾಕದೇ ಐಆರ್‌ಬಿ ಪ್ರಮಾದ:
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜನವಸತಿ ಪ್ರದೇಶವಿದ್ದರೇ ವಿದ್ಯುತ್ ದೀಪಗಳನ್ನು ಅಳವಡಿಸಬೇಕೆಂಬ ನಿಯಮವಿದ್ದರೂ ಐಆರ್‌ಬಿ ಕಂಪೆನಿ ಎಲ್ಲವನ್ನೂ ಗಾಳಿಗೆ ತೂರಿ ಕುಳಿತಿದೆ. ರಾಹುತನಕಟ್ಟೆಯ ಜನಸಂಚಾರ ಇರುವ ಭಾಗದಲ್ಲಿ ತೀರ ಕತ್ತಲು ಆವರಿಸಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ. ಈ ಹಿಂದೆ ಮೂರು ಭಾರಿ ದನಗಳು ಅಡ್ಡಬಂದು ಕಾರು, ಇನ್ನೋವಾ, ಬೈಕ್ ಸವಾರರು ಅಪಘಾತಕ್ಕೊಳಗಾಗಿದ್ದರು. ಹಿಂದೆ ವ್ಯಕ್ತಿಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭವೇ ಅಪಘಾತಕ್ಕೊಳಗಾಗಿದ್ದರು.

Call us

ರಾಹುತನಕಟ್ಟೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಪಾಯಿಂಟ್ ಮಾಡಿ ಇಟ್ಟಿದ್ದರೂ ತಾಂತ್ರಿಕ ಕಾರಣಗಳನ್ನು ನೀಡಿ ವಿದ್ಯುತ್ ದೀಪ ಅಳವಡಿಸಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಐಆರ್‌ಬಿ ಕಂಪೆನಿಯ ಸಿಬ್ಬಂಧಿಗಳು ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

20 − 17 =