ಶಿರೂರು ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತ ಯುವ ಪಡೆ

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಕೋವಿಡ್ ಕಾಲದ ಸಂಕಷ್ಟದ ಕಥೆಗಳ ನಡುವೆ ಯುವಕರ ತಂಡವೊಂದು ನಿರಂತರ ಅರಿವು ಮೂಡಿಸುತ್ತಾ, ನೆರವು ನೀಡುತ್ತಾ ಗ್ರಾಮದ ಜನರು ಹಾಗೂ ಕೋವಿಡ್ ಪೀಡಿತರಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮ ಅತ್ಯಧಿಕ ಕೋವಿಡ್ ಕೇಸ್‌ಗಳಿಂದ ಸುದ್ದಿಮಾಡಿದ ಹೊತ್ತಿನಲ್ಲಿಯೇ ಗ್ರಾಮದ ಯುವ ಪಡೆಯೊಂದು ಜನರ ರಕ್ಷಣೆಗೆ ನಿಂತಿದೆ.

Call us

Call us

ಶಿರೂರಿನ ಅನಿವಾಸಿ ಭಾರತೀಯ ಉದ್ಯಮಿ ಮಣಿಗಾರ್ ಮೀರಾನ್ ಸಾಹೇಬ್ ಅವರ ಮುತುವರ್ಜಿಯಲ್ಲಿ, ಶಿರೂರು ಅಸೋಶಿಯೇಷನ್, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಹಕಾರದಲ್ಲಿ ಯುವ ಪತ್ರಕರ್ತ ಅರುಣ್ ಕುಮಾರ್ ಶಿರೂರು ಮುಂದಾಳತ್ವದಲ್ಲಿ ಲಾಕ್’ಡೌನ್ ಸಂದರ್ಭದಲ್ಲಿ ಕೋವಿಡ್ ಎದುರಿಸಲು ದಿಟ್ಟ ಪ್ರಯತ್ನ ನಡೆಸಿ ಯಶಸ್ಸು ಕಾಣುತ್ತಿದೆ. ಶಿರೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಉದಯ ಪೂಜಾರಿ, ಶಲೀಕ್ ಮೊಹಮ್ಮದ್ ಹಾಗೂ ಮುಕ್ರಿ ಅಲ್ತಾಫ್ ಅವರನ್ನೊಳಗೊಂಡ 10ಕ್ಕೂ ಅಧಿಕ ಯುವಕರ ತಂಡ ಈ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದೆ.

Click here

Click Here

Call us

Call us

Visit Now

ನಿರಂತರ ಅರಿವು ನೆರವು:
ಶಿರೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದರ ನಡುವೆಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಈ ಸಂದರ್ಭದಲ್ಲಿ ಗ್ರಾಮದ ಒಂದಿಷ್ಟು ಸಮಾನ ಮನಸ್ಕ ಯುವಕರು ಜನರಲ್ಲಿ ಅರಿಯು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಮೊದಲ ಹಂತದಲ್ಲಿ ಕೋವಿಡ್ ಪೀಡಿತರ ಮನೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಗ್ರಾಮಸ್ಥರಿಗೂ ಲಾಕ್‌ಡೌನ್ ನಿಯಮ ಪಾಲಿಸಿ ಮನೆಯಲ್ಲಿಯೇ ಇರುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ.

ಶಿರೂರು ಗ್ರಾಮದಲ್ಲಿ ಹೋಮ್ ಐಸೊಲೇಶನ್‌ನಲ್ಲಿ ಇರುವವರನ್ನು ಸಂಪರ್ಕಿಸಿ ಅವರಿಗೆ ಅಗತ್ಯವಾದ ನೆರವು ನೀಡಲಾಗುತ್ತಿದೆ. ದಾನಿಗಳ ನೆರವಿನಿಂದ ಪಡೆದ ಆಕ್ಸಿಜನ್ ಕಾನ್ಸ್‌ಟ್ರೇಟರ್ ಒದಗಿಸಲಾಗಿದೆ. ಅಗತ್ಯ ವಸ್ತುಗಳು, ಔಷಧಿ ಮಾತ್ರೆಗಳನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತಿದೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರು ಹಾಗೂ ಹೋಮ್ ಐಸೊಲೇಶನ್‌ನಿಂದ ಜೀವನ ನಿರ್ವಹಣೆಗೆ ತೊಂದರೆಯಲ್ಲಿರುವವರನ್ನು ಗುರುತಿಸಿ ಅವರ ಮನೆಗೆ ದಾನಿಗಳ ನೆರವು ಪಡೆದು ಕಿಟ್ ವಿತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

Call us

ದಾನಿಗಳ ಸಹಕಾರದೊಂದಿಗೆ ಮಾದರಿ ಕಾರ್ಯ:
ಶಿರೂರಿನ ಯುವ ಪಡೆ ಮೊದಲಿಗೆ ಝೂಮ್ ಆ್ಯಾಪ್ ಮೂಲಕ ಖಾಸಗಿ ವೈದ್ಯರು, ಸರಕಾರಿ ವೈದ್ಯರು, ಬೇರೆಡೆ ನೆಲೆಸಿರುವ ಶಿರೂರು ವೈದ್ಯರು, ಪಿ.ಡಿ.ಓ., ಪಂಚಾಯತ್ ಅಧ್ಯಕ್ಷರ ಜೊತೆ ಸಭೆ ನಡೆಸಿತು. ಸರಕಾರದಿಂದ ಔಷಧ ವಿಳಂಬವಾಗುವ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುತಿದ್ದು ಮೀರಾನ್ ಸಾಹೇಬ್ ಅವರು ಇನ್ನೂರು ಜನರಿಗಾಗುವಷ್ಟು 2.32 ಲಕ್ಷದ ಔಷದ, ಪ್ರತಿದಿನ ವೈದ್ಯರ ತಂಡ ಮನೆಗಳಿಗೆ ಬೇಟಿ ನೀಡಲು ವಾಹನ ವ್ಯವಸ್ಥೆ, ಅಂಬ್ಯುಲೆನ್ಸ್ ಕೊಡುಗೆ, 75000 ಮೌಲ್ಯದ ಹತ್ತು ಆಕ್ಸಿಜನ್ ಕಾಂನ್ಸಟ್ರೇಟರ್, ಲ್ಯಾಬ್ ಟೆಕ್ನಿಶೀಯನ್ ವ್ಯವಸ್ಥೆ ಮಾಡಿದರು. ಪ್ರತಿ ಆಶಾ ಕಾರ್ಯಕರ್ತರಿಗೆ ಪಲ್ಸ್ ಆಕ್ಸಿಮೀಟರ್ ನೀಡಲಾಯಿತು. ಸುಮಾರು 2500 ಕುಟುಂಬಗಳಿಗೆ ಇವರ ವತಿಯಿಂದ ಆಹಾರ ಕಿಟ್ ನೀಡಿದರು. ಈ ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುವ, ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಯುವ ಪಡೆ ಅಚ್ಚುಕಟ್ಟಾಗಿ ಮಾಡುತ್ತಿದೆ. ಪರಿಣಾಮವಾಗಿ ಗ್ರಾಮದಲ್ಲಿ ಕೋವಿಡ್ ಪಾಸಿಟವ್ ಕೇಸುಗಳು ಕೂಡ ಇಳಿಮುಖವಾಗುತ್ತಿದೆ.

ಒಟ್ಟಿನಲ್ಲಿ ಸಂಕಷ್ಟದ ಕಾಲದಲ್ಲಿ ಎಲ್ಲರ ಸಹಕಾರದೊಂದಿಗೆ ನಡೆಯುತ್ತಿರುವ ಯುವ ಪಡೆಯ ಕಾರ್ಯ ನಿಜಕ್ಕೂ ಶ್ಲಾಘನಾರ್ಹವಾಗಿದ್ದು, ಇತರರಿಗೂ ಮಾದರಿಯಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ

Watch Video

ಇದನ್ನೂ ಓದಿ
► ಜೆಸಿಐ ಕುಂದಾಪುರ ಸಿಟಿಯಿಂದ ಲಾಕ್‌ಡೌನ್‌ನಲ್ಲಿ ಹಸಿದವರಿಗೆ ಊಟ: ನಿತ್ಯವೂ 200ಕ್ಕೂ ಅಧಿಕ ಮಂದಿಗೆ ವಿತರಣೆ – https://kundapraa.com/?p=48043 .
► ಕೊಟೇಶ್ವರ ಶ್ರೀ ರಾಮ ಸಂಘದ ವತಿಯಿಂದ ಲಾಕ್‌ಡೌನ್ ಅವಧಿಯಲ್ಲಿ ಉಚಿತ ಉಪಹಾರದ ವ್ಯವಸ್ಥೆ – https://kundapraa.com/?p=47877 
► ಗಂಗೊಳ್ಳಿ ಯುವಕರಿಂದ ವಾಹನ ಚಾಲಕರು ಹಾಗೂ ನಿರ್ವಾಹಕರಿಗೆ ಊಟೋಪಚಾರ ವ್ಯವಸ್ಥೆ –https://kundapraa.com/?p=47808 .
► ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದಿಂದ ಹಸಿದವರಿಗೆ ಊಟ ವಿತರಣೆ – https://kundapraa.com/?p=48029 .
►ಕುಂದಾಪುರ: ಸೇವಾಭಾರತಿಯಿಂದ ಲಾಕ್‌ಡೌನ್‌ನಲ್ಲಿ ಲಾರಿ, ಟ್ರಕ್ ಚಾಲಕರಿಗೆ ಉಚಿತ ಊಟ ವಿತರಣೆ –  https://kundapraa.com/?p=48464 .

Leave a Reply

Your email address will not be published. Required fields are marked *

nine + thirteen =