ಜ.2ಕ್ಕೆ ‘ಆ 90 ದಿನಗಳು’ ಸಿನೆಮಾದ ಪೋಸ್ಟರ್, ಟೈಲರ್ ಹಾಗೂ ಆಡಿಯೋ ಬಿಡುಗಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.28:
ಬಹುತೇಕ ಕುಂದಾಪುರ ಭಾಗದ ತಾರಾಗಣದಲ್ಲಿರುವ ‘ಆ 90 ದಿನಗಳು’ ಸಿನೆಮಾದ ಪೋಸ್ಟರ್, ಟೈಲರ್ ಹಾಗೂ ಆಡಿಯೋ ಬಿಡುಗಡೆ ಜ. 2ರಂದು ಗುಲ್ವಾಡಿಯಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರೊನಾಲ್ಗೊ ಲೋಬೊ ಹೇಳಿದರು.

Call us

Call us

Call us

ಅವರು ಕುಂದಾಪುರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಚಿತ್ರಕ್ಕಾಗಿ ಪ್ರತ್ಯೇಕ ಸೆಟ್ ಹಾಕದೆ, ಕುಂದಾಪುರ ಭಾಗದ ಸಹಜ, ಸುಂದರ ನೈಸರ್ಗಿಕ ಪರಿಸರದಲ್ಲಿಯೇ ಚಿತ್ರೀಕರಣಗೊಂಡಿದ್ದು ಸುಂದರವಾಗಿ ಮೂಡಿ ಬಂದಿದೆ. ಕುಂದಾಪುರದವರೇ ಆದ ರಿತಿಕ್ ಮುರ್ಡೇಶ್ವರ ಅವರು ನಾಯಕ ನಟನಾಗಿ, ಬೆಂಗಳೂರಿನ ಚಂದ್ರಿಕಾ ನಾಯಕಿ ನಟಿಯಾಗಿದ್ದು ಜೊತೆಗೆ ಕೃತಿಕಾ, ಖಳನಟನಾಗಿ ಪ್ರದೀಪ್ ಪೂಜಾರಿ ಸೇರಿದಂತೆ ಯುವ ಪ್ರತಿಭಾವಂತ ತಾರೆಯರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಿರಿಯ ನಟಿ ಭವ್ಯಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ, ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಅವರ ಹಾಡುಗಳು, ರಾಧಾಕೃಷ್ಣ ಬಸ್ರೂರು ಅವರ ಸಂಗೀತ ಚಿತ್ರದಲ್ಲಿದೆ ಎಂದರು.

ಸಹ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಅದ್ಭುತ ಕಥಾಹಂದರವನ್ನು ಹೊಂದಿರುವಂತಹ ಪಕ್ಕ ಕಮರ್ಶಿಯಲ್ ಚಿತ್ರ ಇದಾಗಿದ್ದು ಜನವರಿ ಕೊನೆಯ ವಾರದಲ್ಲಿ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ ಸ್ಥಳೀಯ ಪ್ರತಿಭೆಗಳಿಗೆ ಪ್ರಾಶಸ್ತ್ಯ ನೀಡಿ, ಕುಂದಾಪುರ ಪರಿಸರದಲ್ಲಿಯೇ ಚಿತ್ರೀಕರಿಸಿರುವ ಸಿನೆಮಾ ಕುತೂಹಲದಿಂದ ಕೂಡಿದ್ದು, ಕಮರ್ಶಿಯಲ್ ಸಿನೆಮಾಕ್ಕೆ ಬೇಕಾದ ಎಲ್ಲಾ ಆಯಾಮಗಳನ್ನೂ ಒಳಗೊಂಡಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ನಾಯಕ ನಟ ರತೀಕ್ ಮುರ್ಡೇಶ್ವರ್, ಸುಕಿನರಾ ಶೇಖರ್ ಶೆಟ್ಟಿ, ಗುಲ್ವಾಡಿ ಗ್ರಾ.ಪಂ.ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ನಟ ಅಮೀರ್ ಹಂಝ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eleven + five =