ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಸಿನಿಮಾ ಸ್ಪರ್ಧೆಗೆ ‘ಆ 90 ದಿನಗಳು’ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಾ.3ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳುಲಿರುವ 13ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಸಿನಿಮಾ ಸ್ಪರ್ಧೆಗೆ ಮಾಲ್ವಿಕ ಮೋಶನ್ ಪಿಚ್ಚರ್ಸ್ ನಿರ್ಮಾಣದ, ಗುಲ್ವಾಡಿ ಟಾಕೀಸ್ ಅರ್ಪಿಸುವ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ‘ಆ 90 ದಿನಗಳು’ ಸಿನಿಮಾ ಆಯ್ಕೆಯಾಗಿದೆ.

Click here

Click Here

Call us

Call us

Visit Now

Call us

Call us

ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಆ 90 ದಿನಗಳು’ ಸಿನೆಮಾದಲ್ಲಿ ದೊಡ್ಡ ತಾರಾಗಣವಿದೆ. ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರ ಪುತ್ರ ರತಿಕ್ ಮುರ್ಡೇಶ್ವರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ಭವ್ಯ, ರಾಧ ಭಗವತಿ, ಕೃತಿಕ ದಯಾನಂದ್, ಜೋ ಸೈಮನ್, ಪ್ರದೀಪ್ ಪೂಜಾರಿ, ಅಮೀರ್ ಹಂಝ, ಪಕೀರ್ ಸಲಾಂ, ರವಿಕಿರಣ್ ಮುರ್ಡೇಶ್ವರ ಸೇರಿದಂತೆ ಹಲವು ಸ್ಥಳೀಯ ಪ್ರತಿಭೆಗಳು ಅಭಿನಯಿಸಿದ್ದಾರೆ.

ಗಿರೀಶ ಶೆಟ್ಟಿಗಾರ್, ನವೀನ ವಿಲಿಯಮ್ಸ್ ಬರ್ಬೋಜ ಸಹ ನಿರ್ಮಾಪಕರಾಗಿದ್ದು, ತಾಂತ್ರಿಕ ನಿರ್ದೇಶನವನ್ನು ಬಿ. ಶಿವಾನಂದ್, ಛಾಯಾಗ್ರಹಣವನ್ನು ಪಿವಿಆರ್ ಸ್ವಾಮಿ, ಗೂಗಾರ ದೊಡ್ಡಿ, ಸಂಗೀತವನ್ನು ಕೃಷ್ಣ ಬಸ್ರೂರು, ಸಂಕಲನವನ್ನು ನಾಗೇಶ ಎನ್, ಕಲರಸ್ಟ್‌‌ನಲ್ಲಿ ಗುರು ಪ್ರಸಾದ್, ಸೌಂಡ್ ಡಿಸೈನರ್ ಆಗಿ ಬಾಲಕೃಷ್ಣ, ಸಾಹಿತ್ಯವನ್ನು ಪ್ರಮೋದ ಮರವಂತೆ, ಗಾಯಕರಾಗಿ ಅರ್ಫಾಝ್ ಉಳ್ಳಾಲ್, ಶಶಿಕಲಾ ಸುನೀಲ್ ಸೇರಿದಂತೆ ಇನ್ನಿತರರು ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಸಿನೆಮಾ ಸ್ಪರ್ಧೆಗೆ ಸಿನೆಮಾ ಆಯ್ಕೆಯಾಗಿರುವ ಬಗ್ಗೆ ಸಹ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರು ಸಂತಸ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

twelve + 10 =