ಆಗಳಿನ್ ಬಾಲಸಭೆ ಮತ್ತ್ ನಾವ್

Call us

Call us

Call us

Call us

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ
student-speech‘ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೆ, ಹಾಗೂ ನನ್ನ ಒಲವಿನ ಸಹೋದರ ಸಹೋದರಿಯರೆ, ನಾನು ಮಾಡುವ ವಂದನೆಗಳು. ನಾನು ಈ ದಿನ ಚರ್ಚೆಗಿಟ್ಟ ವಿಷಯ ‘ದೂರದರ್ಶನದ’ ಬಗ್ಗೆ ಒಂದೇರಡು ಮಾತುಗಳನ್ನಾಡಲು ಇಚ್ಚಿಸುತ್ತೇನೆ. ‘ನಮ್ಮ ಊರಿನ ಶಾಲೆಗ್ ಓದಿದ ಎಲ್ಲರಿಗೂ ಇದು ಎಂತ ಅಂದೇಳಿ, ಎಷ್ಟೊತ್ತಿಗೆ ಹೇಳ್ತ್ರ್ ಅಂದೇಳಿ ಗೊತ್ತಾಯೇ ಆತ್ತ್. ಹೌದೇ. ನಾನು ಅದೇ ಬಾಲ-ಸಭೆ ಬಗ್ಗ್ ಹೇಳುಕ್ ಹೊರಟದ್ದ್. ಸನಿವಾರ ಬಂತ್ ಅಂದ್ರೆ ಸಾಕ್, 1 ರಿಂದ 4 ನೇ ಕ್ಲಾಸ್ಸಿನ ಮದ್ಯೆ ಇಟ್ಟ್ ತಟ್ಟಿ (ತಡೆಗೊಡೆ)ನ ಬದಿಗ್ ಹಾಕಿ, ಶಾಲಿ ಚೀಲನ ಹೊರಗಡೆ ಬಿಸಾಕಿ, ಮಕ್ಕಳ್ ಎಲ್ಲ ಬಂದ್ ಕೂಕಂಡ್ರ್ ಅಂದ್ರೆ ಬಾಲಸಭೆ ಶುರು. ಪ್ರತಿ ಸಲ ಒಬ್ಬರು ಮಾಷ್ಟ್ರು ಬಾಲಸಭೆಯ ಅಧ್ಯಕ್ಷರಾಗಿ ಸ್ಟೇಜ್ ಮೆಲೆ ಬಂದು ಕೂಕಂಡ್ ಸಭೆಯನ್ನ ಶುರು ಮಾಡುದ್ ವಾಡಿಕಿ. ಅದಾದ್ಮೇಲ್ ಶುರುವಾತ್ತ್ ಕಾಣಿ ಕಾರ್ಯಕ್ರಮ. ಒಂದು ವಾರದ ಮೊದಲೇ ಮುಂದಿನ್ ಬಾಲಸಭೆಗೆ ಯಾರೆಲ್ಲ ಮಾತಾಡ್ಕ್. ಯಾವ ವಿಷಯದ ಬಗ್ಗೆ ಮಾತಾಡ್ಕ್, ಯಾರು ವಿಷಯದ ಪರವಾಗಿ, ಯಾರು ವಿಷಯದ ವಿರುದ್ದವಾಗಿ ಮಾತಾಡ್ಕ್ ಅಂದೆಳಿ ಎಲ್ಲ ಡಿಸೈಡ್ ಮಾಡಿ ಒಂದ್ ಪಟ್ಟಿನ ತಯಾರಿ ಮಾಡ್ಕಂಡ್ ಇರ್ತರ್. ಹಿಂದಿನ ವಾರವೇ ‘ಬರುವ ವಾರ ಈ ವಿಷಯದ ಬಗ್ಗೆ ಚರ್ಚೆ ಇರತ್ತ್, ಯಾರೆಲ್ಲಾ ಭಾಗವಹಿಸ್ತ್ರಿ’ ಅಂದೆಳಿ ಆ ವಾರ ಅಧ್ಯಕ್ಷರಾದ ಮಾಷ್ಟ್ರು ಕೆಳತ್ರ್. ನಾಲ್ಕನೇ ಕ್ಲಾಸ್ಸಿಂದ ಹಿಡಿದು 7ನೇ ಕ್ಲಾಸ್ ವರೆಗೆ ಪ್ರತಿ ಕ್ಲಾಸ್ಸಿಂದ ಇಬ್ಬರು ಹೆಸರು ಕೊಡ್ಕ್. ಇದು ಬರೇ ಭಾಷಣಕ್ಕೆ ಮಾತ್ರ ಸೀಮಿತ ಅಲ್ಲ, ಮಕ್ಕಳು ಎನ್ ಬೇಕಾರು ಮಾಡ್ಲಕ್. ಹಾಡು ಹೆಳ್ಳಕ್ಕ್. ಡ್ಯಾನ್ಸ್ ಮಾಡ್ಲಕ್, ನಾಟಕ ಮಾಡ್ಲಕ್, ಮಿಮಿಕ್ರಿ ಮಾಡ್ಲಕ್, ರಸವಾರ್ತೆ ಒದ್ಲಕ್, ಇನ್ನೂ ನಿಮಗೆ ಎಂತೆಲ್ಲ ಮಾಡುಕ್ ಆತ್ತೋ, ಅದೆಲ್ಲ ಮಾಡ್ಲಕ್. ಬಾಲ ಸಭೆ ಇಪ್ಪುದೇ ಮಕ್ಕಳ ಪ್ರತಿಭೆ ತೊರ್ಸುಕೆ. ಆದ್ರೆ ಕೆಲವು ಸಲ, ಮಾಷ್ಟರು ಶಿಕ್ಷೆ ಕೊಡುಕು ಈ ಬಾಲ-ಸಭೆನೆ ಉಪಯೋಗಸ್ಕಂತ್ರ್.  ಕುಂದಾಪ್ರ ಡಾಟ್ ಕಾಂ ಅಂಕಣ.

Call us

Click Here

Click here

Click Here

Call us

Visit Now

Click here

ಹೀಂಗೆ ಹೋದ ವಾರ ದೂರದರ್ಶನದ ಬಗ್ಗೆ ಯಾರು ಭಾಷಣ ಮಾಡ್ತೀರಿ ಅಂದಾಗ ‘ಸರ್, ನಾನ್ ಮಾಡ್ತೆ, ನಾನ್ ಮಾಡ್ತೆ..’ ಅಂದೆಳಿ ಕೆಲವರು ಕೈ ಎತ್ತುಕ್ ಶುರು ಮಾಡಿದ್ರ್. ನಂಗೆ ಅಂತ ಕೆಟ್ಟ ಚಟ ಇಲ್ಲ ಬಿಡಿ. ನಾ ಮಾಡ್ತೇ, ನಾ ಮಾಡ್ತೇ ಅಂದೆಳಿ ಎಲ್ಲರ ಎದರು ಹೇಳೂ ಬುದ್ದಿ ಮೊದ್ಲಿಂದನೂ ಇಲ್ಲ ಕಾಣಿ. ಬಾಲಸಭೆ ನಡೆಯುವ ಜಾಗ ಸ್ವಲ್ಪ ಎತ್ತರದಲ್ಲಿರತ್ತ್, ನಾವು ಮಕ್ಕಳೆಲ್ಲ ಕೆಳಗೆ ನೆಲದಲ್ಲಿ ಕೈ-ಕಾಲ್ ಕಟ್ಟ್ಕಂಡ್ ಕೂತ್ಕಂಡ್ಕ್. ಮಾಷ್ಟರ್ ಎಲ್ಲ ಗೋಡೆಗೆ ತಾಗ್ಸಿ ಕುರ್ಚಿ ಹಯ್ಕಂಡ್ ಕೂತ್ಕಂಡ್ ಇರ್ತರ್. ಈ ಮೀಸಿ ಚಿಗುರುಕೆ ಶುರು ಆದ್ದ್ ಏಳನೇ ಕ್ಲಾಸಿನರೆಲ್ಲ ಹಿಂದೆ ಬೆಂಚ್ ಮೇಲೆ ಕೂತ್ಕಂತ್ರ್. ನಾನ್ ನನ್ನ ಪಾಡಿಗೆ ನೆಲದಲ್ಲಿ ಮಂಡಿ ಕೆಳಗೆ ಹಯ್ಕಂಡ್ ಕೂತ್ಕಂಡ್, ‘ದೇವ್ರೆ, ನನ್ನ ಹೆಸರು ಮಾತ್ರ ಹೇಳುವಂಗೆ ಮಾಡ್ಬೇಡ.. ದಮ್ಮಯ್ಯ.. ದಕ್ಕಯ್ಯ.. ‘ಅಂದೆಳಿ ಮುಂದೆ ಕೂಕಂಡವರ ಹಿಂದೆ ಹೊಕ್ಕಂಡ್ ಕೂಕಂಡಿ. ‘ಏಯ್, ಯಾರ ಅದ್, ನಿತ್ಕೋ.. ಈ ಸಲ ದೂರದರ್ಶನದ ಬಗ್ಗೆ ನೀನೆ ಭಾಷಣ ಮಾಡ್ಕ್. ಆಯ್ತಾ? ಏನಾದ್ರೂ ಸಹಾಯ ಬೇಕಾದ್ರೆ ಕೇಳು..’ ಅಂದ್ರು ಶ್ರೀಧರ್ ಮಾಷ್ಟ್ರು. ನಾನ್ ಇನ್ನೂ ಕೇಳದೆ ಇಪ್ಪು ತರ ಮಂಡಿ ಅಡಿ ಹಯ್ಕಂಡೇ ಕೂತ್ಕಂಡಿ. ‘ಏ, ದಿಲೀಪ, ನಿಂಗೆ ಹೇಳ್ತಿದ್ದದ್ದ್, ನಿತ್ಕೊ ಮೇಲೆ ..’ ಅಂದ್ರ್. ‘ಅಷ್ಟೊಂದ್ ಜನ ನಾನ್ ಭಾಷಣ ಮಾಡ್ತೇ, ನಾನ್ ಮಾಡ್ತೆ ಅಂದೆಳಿ ಕೈ ಎತ್ತುವತಿಗೆ, ಅವರಿಗೆ ಛಾನ್ಸ್ ಕೊಡುದ್ ಬಿಟ್ಟು, ನನ್ನಂತ ಬಡಪಾಯಿಯನ್ನ ಶೋಷಣೆ ಮಾಡ್ತಾ ಇದ್ರಿಯಲೆ, student-speechಯಾರಿಗೆ ದೂರ್ ಕೊಡುದ್ ಅದನ್ನ ಹೇಳಿ..’ ಅಂದೆಳಿ ಮನಸ್ಸ್ ಒಳಗೊಳಗೆ ಬೈಕಂಡ್, ಎದ್ದು ನಿತ್ಕಂಡ್, ‘ಆಯ್ತು ಸಾರ್..’ ಅಂದೆ. ‘ಸರ್, ಅಧ್ಯಾಪಕರ ಕಿರುಕುಳ- ಈ ವಿಷಯದ ಬಗ್ಗೆ ಭಾಷಣ ಮಾಡುದಾ.. ‘ ಅಂದೆಳಿ ಕೆಣ್ ಕೆಣ್ ಅಂತಿತ್ತ್ ಮನಸು. ‘ಮೊದ್ಲೇ ನಾವು ಫೇಮಸ್. ಅದೊಂದು ಅವ್ರತ್ರ ಹೇಳಿದ್ರೆ, ಎಲ್ಲ ಬಾಲಸಭೆಯಲ್ಲೂ ನಾನೇ ಭಾಷಣ ಮಾಡುವಂಗೆ ಮಾಡ್ತರ್ ಅಷ್ಟೇ. ಅದೂ ಒಂದು ಕಾಲೆಗೆ ನಿಂತ್ಕಣ್ಡ್. ನೀವು ಸ್ವಲ್ಪ ಮುಚ್ಕೋಂಡ್ ಇರ್ತೀಯಾ..’ ಅಂದಿ, ಮನಸಿಗೆ. ‘ಛೇ… ಯಾವ್ದಾರೂ ಪ್ರಹಸನಕ್ಕೆ ಹೆಸರು ಕೊಡ್ಲಕಿದಿತ್. ಎಲ್ಲ ಸೇರಿ ಎಂತದಾರೂ ಮಾಡಿ ಮಾಷ್ಟ್ರ ಕಣ್ಣಿಗ್ ಮಣ್ಣ್ ಹಾಕ್ಲಕಿದಿತ್. ಈ ಭಾಷಣ ಯಾರ್ ಕಷ್ಟಪಟ್ಟು ಕಲ್ತ್, ಉರು ಹೊಡಿತರ್ ಮರಾಯ…’ ಅಲ್ಲೇ ಪಕ್ಕದೆಗ್ ಹಲ್ಲ್ ಕಿಸಿತಿದ್ದ ಪ್ರವೀಣಂಗೆ ಹೆಳ್ದಿ. ‘ನಿಂಗೆ ಹಾಂಗೆ ಆಯ್ಕ್. ಹೊಕ್ಕಂತಿಯ. ನಿನ್ನೆ ಭಜನೆ ಮಾಡ್ವತಿಗೆ ನನ್ನ ನಗಾಡ್ಸಿ, ಜಗ್ನಾತ್ ಮಾಷ್ಟ್ರ ಹತ್ರ ಬೈಸಿದ್ಯಲ. ಅದಕ್ಕೆ ನಿಂಗೆ ಹಾಂಗೆ ಅಯ್ಕ್. ಅನ್ಯಾಯ ಮಾಡ್ರೆ, ಕುನ್ನಯಿ ಕಚ್ಚತ್ ಅಂದೇಳಿ ಗೊತ್ತಿಲ್ಯಾ…’ ಬಡ್ಡಿಮಗ ನನ್ನ ಸಮಾಧಾನ ಮಾಡುದ್ ಬಿಟ್ಟು ಬೈತಿದ್ದ ಪ್ರವೀಣ. ಇವನಿಗೆ ಹೀಂಗೆ ಬಿಟ್ರೆ ಅಪೂದಲ್ಲ ಅಂದೇಳಿ, ಎದ್ದ್ ನಿತ್ಕಂಡ್ ‘ಸಾರ್, ಸಾರ್, ಪ್ರವೀಣ ರಸವಾರ್ತೆ ಓದುತ್ತಾ ಅಂಬರ್…’ ಅಂದೆ. ಆಗ ಶ್ರೀಧರ್ ಮಾಷ್ಟ್ರು ‘ಹೌದನಾ.. ನಿಂಗೆ ಹೇಳುಕ್ ಎನ್ ದಾಡಿ. ಸೋಂಬೆರಿ ಎಲೊ.. ಕೂತ್ಕೊ. ‘ಅಂದೇಳಿ ಹೆಸರು ಬರ್ಕೋಂಡ್ರು. ಪಾಪ ಪ್ರವೀಣ, ಹೌದು-ಇಲ್ಲ ಅಂಬುಕ್ ಪುರ್ಸೋತೆ ಕೊಡದೆ ಹೆಸರು ಬರ್ಕಂಡೇ ಬಿಟ್ರು. ನಾನ್ ಬಾಯಿ ಮುಚ್ಚಿ ನಗು ತಡುಕಾಗದೆ ಪುರ್ರ್.. ಪುರ್ರ್.. ಅಂದೆಳಿ ಒಳಗೊಳಗೆ ನಗ್ತಾ ಇದ್ರೆ, ‘ಮಾಡ್ತಿ ತಡೆ ನಿಂಗೆ, ಚಂದ್ರ್ ಮಾಷ್ಟ್ರ ಹತ್ರ ಹೇಳಿ ಕೊಡ್ದಿರೆ ಕಾಣ್ ಹಂಗರೆ..’ ಅಂದೆಳಿ ಮರ್ಕುಕೆ ಶುರು ಮಾಡಿದ. ಮುಂದಿನ ವಾರ ನಾನು ಕಷ್ಟ ಪಟ್ಟು ಒಂದು ಮೂರು ಪ್ಯಾರ ಹ್ಯಾಂಗೊ ಉರು ಹೊಡ್ಕಂಡ್ ಬಂದ್ ಹರಕೆ ಸಂದಾಯ ಮಾಡದಿ. ಪಾಪ ಪ್ರವೀಣನು ಎಂತೆಲ ಬರ್ಕಂಡ್ ಬಂದು ಓದಿದ. ಹಾಂಗೂ-ಹೀಂಗೂ ಬಂದ ಕಂಟಕಗಳೆಲ್ಲ ನಿವಾರಣೆ ಮಾಡ್ಕಂತ್. ಕುಂದಾಪ್ರ ಡಾಟ್ ಕಾಂ ಅಂಕಣ.

ನಾವು ಆಗೆಲ್ಲ ‘ಈ ಮಾಷ್ಟ್ರು ಯಾಕೆ ನಮ್ಮ ಜೀವ ಹಿಂಡತ್ರಪ್ಪ..’ ಅಂದೆಳಿ ಬೈಕಂತಿದ್ರೂ, ಅದೆಲ್ಲ ಈಗ ನಮ್ಮನ್ನ ಇಷ್ಟರ ಮಟ್ಟಿಗೆ ಬೆಳಸುಕೆ ಕಾರಣ ಆಯಿತ್.  ನಮಗೆ ಮನಸ್ಸಿಲ್ಲದಿದ್ದರೂ, ಒತ್ತಾಯ ಮಾಡಿಯಾದ್ರೂ ಮಾಡಿಸ್ತಾ ಇದ್ದ ಇಂತ ಪಠ್ಯೇತರ ಚಟುವಟಿಕೆಗಳು. ಇವೆಲ್ಲ ಅಂಕಪಟ್ಟಿಲ್  ಅಲ್ಲಿ ಬರದೇ ಇದ್ರೂ, ಮಕ್ಕಳ ಇಡೀ ಭವಿಷ್ಯ ರೂಪಿಸುವಲ್ಲಿ ಖಂಡಿತ ಪರಿಣಾಮಕಾರಿ.  ಬಾಲಸಭೆ ಬರಿ ಶಾಲೆಗ್ ಮಾತ್ರ ಹೆಸರು ಕೊಡುದಿಲ್ಲ, ಶಾಲಿ ಮುಗಿದ ಮೇಲೆ ನಮ್ಮ ಕಾಲ ಮೇಲೆ ನಾವು ನಿಲ್ಲುಕು ಒಂದ್ ಒಳ್ಳೆ ವೇದಿಕೆ ಮಾಡಿಕೊಟ್ಟಿತ್. ನಾವು ಎಷ್ಟೇ ಓದಿ, ಎಷ್ಟೇ ರ್ಯಾಂಕ್ ತಕಂಡರೂ ಜನರ ಜೊತಿಗೆ ಬೆರಿದೆ ಇದ್ರೆ ಆ ರ್ಯಾಂಕ್ ಎಂತಕ್ ಆತ್ತ್ ಅಲ್ದೇ?. ಮಕ್ಕಳಿಗೆ ಪಾಠದ ಜೊತಿಗೆ, ಇಂತಹ ಬೇರೆ ಚಟುವಟಿಕೆನೂ ಅಷ್ಟೇ ಮುಖ್ಯ ಅಲ್ದಾ?

ಅಂದ ಹಾಗೆ, ನೀವು ಬಾಲಸಭೆಯಲ್ಲಿ ಎಂತ ಮಾಡ್ತಿದ್ರಿ. ನಿಮ್ಮದೂ ಟಿ.ವಿ. ಬಗ್ಗೆನೇ ಬಾಷಣುವ ಹೆಂಗೆ?. / / / ಕುಂದಾಪ್ರ ಡಾಟ್ ಕಾಂ ಅಂಕಣ.

Leave a Reply

Your email address will not be published. Required fields are marked *

three × two =