ಬೆಂಗಳೂರು : ಅ.13ರಂದು ರಟ್ಟೇಶ್ವರಿ ಕಲಾ ವೇದಿಕೆಯಿಂದ ಆಕರ್ಷಣೆ- 2018

ಕುಂದಾಪ್ರ ಡಾಟ್ ಕಾಂ ಸುದ್ದಿ
ಕಳೆದ ಹಲವಾರು ವರ್ಷಗಳಿಂದ ಕರಾವಳಿಯ ಜನರಿಗೆ ಕಲೆಯ ಸವಿಯನ್ನು ಬಡಿಸುತ್ತಿರುವ ರಟ್ಟೇಶ್ವರ ಕಲಾ ವೇದಿಕೆ ರಾಜ್ಯದ ರಾಜಧಾನಿಯಲ್ಲೂ ಕಲೆಯ ಕಲರವವನ್ನು ಪಸರಿಸುತ್ತಿದೆ.

ಅಕ್ಟೋಬರ್ 13ನೇ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ರಾತ್ರಿ 9:30 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮನೋರಂಜನೆಯ ಮಹಾಪೂರ ಹರಿಸಲು ’ಆಕರ್ಷಣೆ-2018’ ಎಂಬ ವೈವಿಧ್ಯಮಯ ಸಾಂಸ್ಕೃತಿಕಕಾರ್ಯಕ್ರಮದೊಂದಿಗೆ ಸಜ್ಜಾಗಿ ನಿಂತಿದೆ.

ಕರಾವಳಿಯ ಕೋಗಿಲೆಗಳಿಂದ ಸಂಗೀತರಸಮಂಜರಿ (ಭಾವಯಾನ), ವಿವಿಧ ಟಿ.ವಿ. ಚಾನೆಲ್‌ಗಳಲ್ಲಿ ಹಾಸ್ಯ ಕಚಗುಳಿಯಿಡುತ್ತಿರುವ ಕರಾವಳಿಯ ಹಾಸ್ಯಕಲಾವಿದರಿಂದ ನಗೆಯ ಮಹಾಪೂರ ಹಾಗೂ ಕಾಮಿಡಿ ಸ್ಕಿಟ್‌ಗಳು (ಹಾಸ್ಯಯಾನ), ರಾಜ್ಯಮಟ್ಟದ ಟಿ.ವಿ. ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಕರಾವಳಿಯ ಪುಟಾಣಿಗಳಿಂದ ನೃತ್ಯ (ನೃತ್ಯಯಾನ) ಹಾಗೂ ಇತರ ಮನೋರಂಜನಾ ಕಾರ್ಯಕ್ರಮಗಳು, ಯಕ್ಷದಿಗ್ಗಜರಿಂದಯಕ್ಷಗಾನ (ಯಕ್ಷಯಾನ) ನಡೆಯಲಿದೆ.ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿತಾರಾ ಮೆರಗು ನೀಡಲು ಹಲವಾರು ಸೆಲೆಬ್ರಿಟಿಗಳು ಸೇರಿಕೊಳ್ಳಲಿದ್ದಾರೆ.

ರಟ್ಟೇಶ್ವರಕಲಾವೇದಿಕೆಯುತನ್ನ ಸದಸ್ಯರ ಮುಖೇನ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ.ಇದೇ ಮೊದಲ ಬಾರಿಗೆ ಕರಾವಳಿಯ ಖ್ಯಾತಕಲಾವಿದರನ್ನುಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಬೆಂಗಳೂರಿಗರಿಗೆ ಮನೋರಂಜನೆ ನೀಡಲು ಸಿದ್ದವಾಗಿದೆ.

Leave a Reply

Your email address will not be published. Required fields are marked *

seventeen − twelve =