ರಾ.ಹೆ-66ರಲ್ಲಿ ಇನ್ನೋವಾ ಡಿಕ್ಕಿಯಾಗಿ ಎರಡು ದನಗಳ ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಸಮೀಪದ ರಾಹುತನಕಟ್ಟೆ ಶಾಲೆಯ ಎದುರು ಇನ್ನೋವಾವೊಂದು ದನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಮೃತಪಟ್ಟಿದೆ. ಇನ್ನೋವಾ ವಾಹನವೂ ಸಂಪೂರ್ಣ ಜಖಂಗೊಂಡಿದ್ದು ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Click Here

Call us

Call us

ಭಟ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದನಗಳು ಅಡ್ಡ ಬಂದಿದ್ದು, ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಇನ್ನೋವಾ ಕಾರು ದನಕ್ಕೆ ಡಿಕ್ಕಿಯಾಗಿ ಹಾಗೆಯೇ ಬಲಬದಿಯ ರಸ್ತೆಗೆ ಜಿಗಿದು, ಶಾಲೆಯ ಬಳಿಯ ತೋಡಿಗೆ ಬಿದ್ದಿತ್ತು. ವಾಹನದಲ್ಲಿದ್ದವರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರ ತಕ್ಷಣ ಎಲ್ಲರನ್ನೂ ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಲು ನೆರವಾದರು.

Click here

Click Here

Call us

Visit Now

ಅಪಾಯಕಾರಿ ವಲಯವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ:
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಲೇ ಇದ್ದು, ಗುತ್ತಿಗೆದಾರ ಕಂಪೆನಿ ಮಾತ್ರ ಜಾಣಮೌನ ಅನುಸರಿಸುತ್ತಿದೆ. ಕಳೆದ ಕೆಲವು ತಿಂಗಳಿನಲ್ಲಿ ರಾಹುತನಕಟ್ಟೆ ಭಾಗದಲ್ಲಿಯೇ 5 ದನಗಳು ಅಪಘಾತದಿಂದ ಮೃತಪಟ್ಟಿವೆ. ಯಡ್ತರೆ ಬೈಪಾಸ್ ಬಳಿ ನಿರಂತರವಾಗಿ ಅಫಘಾತ ಸಂಭವಿಸುತ್ತಲೇ ಇದೆ. ಬೈಂದೂರು ಹೊಸ ಬಸ್ ನಿಲ್ದಾಣ, ಒತ್ತಿನಣೆ ತಿರುವು ಎಲ್ಲವೂ ಅಪಾಯಕಾರಿ ತಾಣವಾಗಿದ್ದರೂ ಗುತ್ತಿಗೆ ಕಂಪೆನಿ, ಜನಪ್ರತಿನಿಧಿಗಳು ಮಾತ್ರ ಮೌನವಹಿಸಿದ್ದಾರೆ.

Leave a Reply

Your email address will not be published. Required fields are marked *

five + one =