ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ರಾ.ಹೆ.66 ರ ತ್ರಾಸಿ ಮೊವಾಡಿ ಕ್ರಾಸ್ ಬಳಿ ಇರುವ ಡಾನ್‌ಬಾಸ್ಕೊ ಶಾಲಾ ಮಕ್ಕಳ ಓಮ್ನಿಗೆ ಕುಂದಾಪುರ ಕಡೆಗೆ ತೆರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಓಮ್ನಿಯಲ್ಲಿದ್ದ ಎಂಟು ಶಾಲಾ ಮಕ್ಕಳು ದಾರುಣವಾಗ ಮೃತಪಟ್ಟಿದ್ದಾರೆ. 9 ಮಕ್ಕಳು, ಓರ್ವ ಶಾಲಾ ಶಿಕ್ಷಕಿ ಹಾಗೂ ಬಸ್ಸಿನಲ್ಲಿ ಇರ್ವರು ಗಂಭೀರ ಗಾಯಗೊಂಡು ಕುಂದಾಪುರ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ:
ಮಂಗಳವಾರ ಬೆಳಿಗ್ಗೆ ಎಂದಿನಂತೆ ಸುಳ್ಸೆಯಿಂದ ಮೂವತ್ತುಮುಡಿ, ಬಗ್ವಾಡಿ, ಹೆಮ್ಮಾಡಿಯ ಕಟ್ಟು ಮಾರ್ಗವಾಗಿ ಮಕ್ಕಳನ್ನು ಹತ್ತಿಸಿಕೊಂಡು ತ್ರಾಸಿ ಬಳಿಯ ಮೋವಾಡಿ ಕ್ರಾಸ್ ಸಮೀಪ ಇರುವ ಡಾನ್ ಬಾಸ್ಕೊ ಶಾಲೆಗೆ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಗಂಗೊಳ್ಳಿಯ ಮೂಲಕ ಎದುರಿನಿಂದ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಓಮ್ನಿಗೆ ಡಿಕ್ಕಿ ಹೊಡೆದಿತ. ಅಫಘಾತದ ತೀವ್ರತಿಗೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದ್ದರೇ, ವಾಹನದಲ್ಲಿದ್ದ ಇಬ್ಬರು ಮಕ್ಕಳ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸ್ಥಳಿಯುರ ನೆರವಿನೊಂದಿನ ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯುಲ್ಲಿದ್ದಯಲ್ಲಿದ್ದವರನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಓಮ್ನಿಯಲ್ಲಿ ಎಲ್.ಕೆ.ಜಿಯಿಂದ 10ತರಗತಿ ವರೆಗಿನ ಮಕ್ಕಳು ಓಮ್ನಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿರುವವರನ್ನು ನಿಖಿತಾ, ದಿಕ್ಷಿತಾ, ಮೀರಾ, ಲಿಸೆಲಾ, ಆನ್ಸನ್, ಕೆಲಿಸ್ಟಾ, ಕ್ಲೆರಿಸಾ, ಡಿಲ್ವಿರ್, ಡೆನ್ವಿಲ್, ಮಾರಿಯೋ, ಪ್ರಿನ್ಸಿಟಾ, ಅನನ್ಯ, ಓವಿಲಾ, ರಿಸೆಲ್, ಓಲ್ಫಾ, ರಾಯ್ಸ್ಟನ್, ಐಲಿಸ್ ಎಂದು ಗುರುತಿಸಲಾಗಿದೆ. ಶಿಕ್ಷಿ ಫಿಲೋಮಿನಾ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೇ, ಆಕೆಯ ಗಂಡ ಓಮ್ನಿ ಚಾಲಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಸ್ಸಿನಲ್ಲಿದ್ದ ಗಾಯಾಳು ಕವಿತಾ ಹಾಗೂ ಸುಪ್ರಿತಾ ಎಂಬುವವರೂ ಚಿಕಿತ್ಸೆ ಪಡೆಯತ್ತಿದ್ದು, ಬಸ್ಸಿನ ಚಾಲಕ ತಲೆಮರೆಸಿಕೊಂಡಿದ್ದಾನೆ. ಒಟ್ಟು 27 ಶಾಲಾ ಮಕ್ಕಳ ಪೈಕಿ 8 ಮಂದಿ ದಾರುಣವಾಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಆಸ್ಪತ್ರೆಗೆ ಜಿಪಂ ಅಧ್ಯಕ್ಷ ದಿವಾಕರ್, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಅಣ್ಣಾಮಲೈ, ಡಿಡಿಪಿಐ ದಿನಕರ್ ಶೆಟ್ಟಿ, ಎಸಿ ಅಶ್ವಥಿ ಎಸ್. ಪುರಸಭಾ ಅಧ್ಯಕ್ಷೆ ವಸಂತಿ ಮೋಹನ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಪಂ ಸದಸ್ಯೆ ಲಕ್ಷ್ಮಿ ಮಂಜು ಬಿಲ್ಲವ ಮೊದಲಾದವರು ಭೇಟಿ ನೀಡಿದ್ದಾರೆ.