ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೂನ್‌ನಲ್ಲಿ ಅಧಿಕಾರಾವಧಿ ಮುಗಿದ ಕುಮದಾಪುರ ತಾಲ್ಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜೂನ್ ೨೯ರಂದು ಆದೇಶ ಹೊರಡಿಸಿದ್ದಾರೆ. ಇವುಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ವಿಧಿ ಇದೆಯಾದರೂ ಕೋವಿಡ್ -19 ಹರಡುತ್ತಿರುವ ಕಾರಣ ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು:
- ಆಲೂರು – ನಾಗೇಶ್ ನಾಯ್ಕ್, ಮುಖ್ಯೋಪಧ್ಯಾಯರು, ಆಲೂರು ಸರಕಾರಿ ಪ್ರೌಢಶಾಲೆ
- ಕೆರಾಡಿ – ಮಾಲತೇಶ್, ಸಹಾಯಕ ಅಭಿಯಂತರರು, ಸಿದ್ಧಾಪುರ
- ಚಿತ್ತೂರು, ವಂಡ್ಸೆ – ಮಮತಾ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಂಡ್ಸೆ
- ಹಕ್ಲಾಡಿ – ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ
- ತ್ರಾಸಿ, ಹೊಸಾಡು, ಇಡೂರು ಕುಂಜ್ಞಾಡಿ – ಪ್ರೀತಮ್, ಎಇ, ವರಾಹಿ ಸಿದ್ಧಾಪುರ
- ಗುಜ್ಜಾಡಿ – ಅಂಜನಾದೇವಿ ಪಿ., ಎ.ಡಿ, ಮೀನುಗಾರಿಕಾ ಇಲಾಖೆ ಗಂಗೊಳ್ಳಿ
- ಹೆಮ್ಮಾಡಿ, ಕಟ್‌ಬೆಲ್ತೂರು – ಅರುಣಕುಮಾರ್ ಶೆಟ್ಟಿ, ಎಡಿ, ಅಕ್ಷರದಾಸೋಹ ಕುಂದಾಪುರ
- ತಲ್ಲೂರು – ಶ್ವೇತ ಎನ್., ಶಿಶು ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕುಂದಾಪುರ
- ಹಟ್ಟಿಯಂಗಡಿ – ಸಿ ರಘುರಾಮ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ ವಂಡ್ಸೆ
- ಕರ್ಕುಂಜೆ – ರೂಪಾ ಮಾಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ
- ಆಜ್ರಿ – ರಾಜೇಂದ್ರ ವಿಸ್ತರಣಾಧಿಕಾರಿ, ರೇಷ್ಮೆ ಇಲಾಖೆ ಕುಂದಾಪುರ
- ಹೊಸಂಗಡಿ – ಭಾನು ನಾಯ್ಕ್, ಸಹಾಯಕ ಅಭಿಯಂತರರು, ವಾರಾಹಿ, ಸಿದ್ಧಾಪುರ
- ಸಿದ್ಧಾಪುರ – ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ, ಕುಂದಾಪುರ
- ಶಂಕರನಾರಾಯಣ, ಅಂಪಾರು – ಚಿದಾನಂದ, ವಲಯ ಅರಣ್ಯಾಧಿಕಾರಿ, ಶಂಕರನಾರಾಯಣ
- ಕಾವ್ರಾಡಿ, ಬಳ್ಕೂರು – ಚಂದ್ರಶೇಖರ್, ಎ.ಡಿ. ಮೀನುಗಾರಿಕಾ ಇಲಾಖೆ ಕುಂದಾಪುರ
- ಬಸ್ರೂರು – ಸಂಜೀವ ನಾಯ್ಕ್ ಎ.ಡಿ, ತೋಟಗಾರಿಕಾ ಇಲಾಖೆ ಕುಂದಾಪುರ
- ಆನಗಳ್ಳಿ – ಯಶವಂತ್, ಎಇಇ, ಶಂಕರನಾರಾಯಣ ಕುಂದಾಪ್ರ ಡಾಟ್ ಕಾಂ ಸುದ್ದಿ.
- ಹಂಗಳೂರು, ಕೋಣಿ – ಡಾ. ಸೂರ್ಯನಾರಾಯಣ ಉಪಾಧ್ಯ, ಎ.ಡಿ, ಪಶು ಸಂಗೋಪನಾ ಇಲಾಖೆ ಕುಂದಾಪುರ
- ಕೋಟೇಶ್ವರ – ಮಧುಕರ, ಸಹಾಯಕ ತೋಟಕಾರಿಕಾ ಅಧಿಕಾರಿ ಕುಂದಾಪುರ
- ಬೀಜಾಡಿ – ಪ್ರಭಾಕರ ಕುಲಾಲ್, ವಲಯ ಅರಣ್ಯಾಧಿಕಾರಿ ಕುಂದಾಪುರ
- ಕುಂಭಾಶಿ – ದೀಪ್ತಿ ಎಸ್., ಕಾರ್ಯದರ್ಶಿ ಎಪಿಎಂಸಿ ಕುಂದಾಪುರ
- ತೆಕ್ಕಟ್ಟೆ, ಬೆಳೂರು – ಹರ್ಷವರ್ಧನ್, ಎಇ, ಲೋಕೋಪಯೋಗಿ ಕುಂದಾಪುರ
- ಕೆದೂರು, ಅಮಾಸೆಬೈಲು – ರಾಘವೇಂದ್ರ ನಾಯ್ಕ್, ಎಇ, ಲೋಕೋಪಯೋಗಿ ಕುಂದಾಪುರ
- ಕಾಳಾವರ, ಹೆಂಗವಳ್ಳಿ – ಲೋಹಿತ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ
- ಹೊಂಬಾಡಿ ಮಂಡಾಡಿ – ಶಂಕರ ಶೇರೆಗಾರ್, ಸಹಾಯಕ ಕೃಷಿ ಅಧಿಕಾರಿ ಕುಂದಾಪುರ
- ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಗುಲ್ವಾಡಿ – ಕುಸುಮಾಕರ ಶೆಟ್ಟಿ, ಯುವಜನ ಸೇವಾ ಕ್ರೀಡಾಧಿಕಾರಿ ಕುಂದಾಪುರ
- ಹಾಲಾಡಿ – ರಾಘವೇಂದ್ರ ಆರ್. ವಿ., ಎ.ಡಿ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ
- ಯಡಮೊಗೆ – ನಾಗರಾಜ ಗೊಂಡ, ಎಡಿ, ಕ್ವಾಲಿಟಿ ಕಂಟ್ರೋಲ್, ವರಾಹಿ ಸಿದ್ದಾಪುರ
- ಉಳ್ಳೂರು – ದುರ್ಗಾದಾಸ್, ಎಇಇ ಲೋಕೋಪಯೋಗಿ, ಕುಂದಾಪುರ
- ಕಂದಾವರ – ಅಶೋಕ್ ಎಇಇ, ಮೆಸ್ಕಾಂ ಕುಂದಾಪುರ ಕುಂದಾಪ್ರ ಡಾಟ್ ಕಾಂ ಸುದ್ದಿ.
- ಗೋಪಾಡಿ – ಅಜಿತ್ ಅಕ್ಕೋಳ್ಳಿ, ಸಹಾಯಕ ತೋಟಗಾರಿಕಾ ಅಧಿಕಾರಿ ಬೈಂದೂರು
- ಕೊರ್ಗಿ – ಅಶೋಕ್, ಎಇಇ ಮೆಸ್ಕಾಂ ಕುಂದಾಪುರ
ನಿರ್ವಹಣೆಗೆ ಸೂಚನೆ:
ಆಡಳಿತಾಧಿಕಾರಿಗಳು ಕ್ರಮಬದ್ಧವಾಗಿ ರಚಿಸಿದ ಗ್ರಾಮ ಪಂಚಾಯಿತಿ ಎಂದು ಭಾವಿಸಿ ಗ್ರಾಮ ಪಂಚಾಯಿತಿಯ ಎಲ್ಲ ಸಾಮಾನ್ಯ ಅಧಿಕಾರ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಬೇಕು. ಕ್ರಮದಂತೆ ಪಂಚಾಯಿತಿ ಸಭೆ, ವಾರ್ಡ್‌ಸಭೆ, ಗ್ರಾಮಸಭೆಗಳನ್ನು ನಡೆಸಬೇಕು. ಅಧ್ಯಕ್ಷನ ಅಧಿಕಾರವನ್ನು ನಿರ್ವಹಿಸುವುದರ ಜತೆಗೆ ಅಭಿವೃದ್ಧಿ ಅಧಿಕಾರಿ ಜತೆ ಜಂಟಿಯಾಗಿ ಹಣಕಾಸಿನ ವ್ಯವಹಾರ ನಡೆಸಬೇಕು. ಪಂಚಾಯಿತಿ ಮತ್ತು ಗ್ರಂಥಾಲಯ ಸಿಬ್ಬಂದಿಗೆ ವೇತನ, ಗೌರವಧನ ಪಾವತಿಸಬೇಕು. ಆದರೆ ನೌಕರರನ್ನು ನೇಮಕ ಮಾಡಿಕೊಳ್ಳಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ಹರಡುವುದನ್ನು ತಡೆಯಲು ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಬೈಂದೂರು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39183 .