ರಾಘವೇಂದ್ರ ಶಿರಿಯಾರ ಅವರು ಅಕ್ರೂಟ್ ಕಿರುಚಿತ್ರ ಮುಹೂರ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಕ್ರೂಟ್ ಕಿರುಚಿತ್ರದ ಮುಹೂರ್ತ ಸಮಾರಂಭ ಶ್ರೀ ಬ್ರಾಹ್ಮೀ ಕಲಾ ವೇದಿಕೆ ಶಿರಿಯಾರ ಇಲ್ಲಿ ನೆರವೇರಿತು. ಶ್ರೀ ವಿಘ್ನೇಶ್ವರ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಯು ಪ್ರಸಾದ್ ಭಟ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು.

ಅಧ್ಯಾಪಕ, ಸಾಹಿತಿ ನರೇಂದ್ರ ಕುಮಾರ್ ಕೋಟ, ಶಿರಿಯಾರ ಹಿ ಪ್ರಾ ಶಾಲಾ ಮುಖ್ಯೋಪಾಧ್ಯಾಯ ಸಾಧು ಸೇರೆಗಾರ್, ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಶೆಟ್ಟಿ, ಶಿವರಾಮ ಕಾರ್ಕಡ, ಕೃಷ್ಣ ಭಟ್, ದರ್ಶನ್ ಶೆಟ್ಟಿ ಉಪಸ್ಥಿತರಿದ್ದರು.

ಕಿರುಚಿತ್ರದ ಕಥೆ, ಚಿತ್ರ ಕಥೆ, ನಿರ್ದೇಶನ-ರಾಘವೇಂದ್ರ ಶಿರಿಯಾರ, ಛಾಯಾಗ್ರಹಣ-ರೋಹಿತ್ ಅಂಪಾರ್, ಸಂಕಲನ-ಸುಮಂತ್ ಭಟ್, ಸಂಭಾಷಣೆ-ಸತೀಶ ವಡ್ಡರ್ಸೆ, ಕಲೆ-ಶಶಿ ಶೆಟ್ಟಿ ಹಲ್ತೂರು, ಸಹ ನಿರ್ದೇಶನ-ಸುರೇಶ ಶೆಟ್ಟಿ ಮಂದಾರ್ತಿ, ಆದರ್ಶ ಕೆ ಜೆ. ಪ್ರಮುಖ ಕಲಾವಿದರಾಗಿ ಯೋಗೇಶ್ ಬಂಕೇಶ್ವರ್, ಕರಾವಳಿಯ ಬಹುಮುಖ ಪ್ರತಿಭೆ ಬಾಲನಟ ರೋಶನ್ ಗಿಳಿಯಾರು, ಪ್ರಭಾಕರ ಬಿ ಕುಂದರ್, ಗುಂಡ್ಮಿ ರಾಮಚಂದ್ರ ಐತಾಳ್,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕೋಟ ಶಿವಾನಂದ, ಸಂಧ್ಯಾ ಶೆಟ್ಟಿ ಹಾಗೂ ಇನ್ನಿತರ ಕಲಾವಿದರು ಅಭಿನಯಿಸಲಿದ್ದಾರೆ

ರಾಘವೇಂದ್ರ ಶಿರಿಯಾರ ಅವರು ಈ ಮೊದಲು ಅಣ್ಣು, ಪಾಠ, ಅಜ್ಜಿ ಮನಿ, ಮೊದಲಾದ ಸುಂದರ ಕಿರುಚಿತ್ರವನ್ನು ನಿರ್ದೇಶಿಸಿದ್ದರು.

Leave a Reply

Your email address will not be published. Required fields are marked *

seven + four =