ಉದ್ಯಮಿ, ಅಧಿಕಾರಿಗಳಿಗೆ ಕಿರುಕುಳ ನೀಡಿದ ಆರೋಪ ಸತ್ಯಕ್ಕೆ ದೂರವಾದುದು, ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ: ಕೆ. ವೆಂಕಟೇಶ ಕಾರಂತ್

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತನ್ನ ವಿರುದ್ಧ ಕೃಷ್ಣಪ್ರಸಾದ ಅಡ್ಯಂತಾಯ ಎಂಬುವವರು ನೀಡಿದ ದೂರು ಹಾಗೂ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ಆರ್.ಟಿ.ಐ ಕಾರ್ಯಕರ್ತ ಕೆ. ವೆಂಕಟೇಶ ಕಾರಂತ್ ಅವರು ತಿಳಿಸಿದ್ದಾರೆ.

Call us

Click Here

Click here

Click Here

Call us

Visit Now

Click here

ನ.6ರಂದು ಕೃಷ್ಣಪ್ರಸಾದ ಅಡ್ಯಂತಾಯ ಎಂಬುವವರು ನೀಡಿರುವ ದೂರಿಗೆ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಂವಿಧಾನದತ್ತ ಮಾಹಿತಿ ಕಾನೂನು ಅಧಿನಿಯಮದ, ನಿಯಮವನ್ನು ಸಿವಿಲ್ ಸಮಾಜದ ಒಳಿತಿಗಾಗಿಯೇ ಬಳಸುತ್ತಿದ್ದು, ಸದ್ರಿ ಅಧಿನಿಯಮದ ಕಾನೂನನ್ನು ಇಲ್ಲಿಯವರೆಗೂ ದುರ್ಬಳಕೆ ಮಾಡಿದ್ದಿಲ್ಲ. ಸಂವಿಧಾನದತ್ತ ಪಡೆದ ಮಾಹಿತಿಯಿಂದ ಯಾರನ್ನೂ ಹಣಕ್ಕಾಗಿ ಇಲ್ಲಿಯವರೆಗೂ ನಾನು ಪೀಡಿಸಿದ್ದಿಲ್ಲ. ಅಥವಾ ನನ್ನ ಪರವಾಗಿ ಅಂತಹ ಅಥವಾ ಬೇರೆಯೇ ಆದ ವಾಮ ಮಾರ್ಗದಲ್ಲಿ ಸಿಗುವ ಹಣ ಪಡೆಯುವ ಬಗ್ಗೆ ಇತರ ಯಾರನ್ನೂ ನನ್ನ ಮತ್ತು ನನ್ನ ಟ್ರಸ್ಟ್ ಪರವಾಗಿ ನೇಮಿಸಿಲ್ಲ. 2014 ರಿಂದ ಸಿವಿಲ್ ಸಮಾಜದಲ್ಲಿ ಮಧ್ಯಮ ವರ್ಗದವರನ್ನು ನಂಬಿಸಿ ಇ-ಸ್ವತ್ತು ಭೂ-ವ್ಯವಹಾರ ಮಾಡುವ ದಂದೆ ಈ ಪ್ರದೇಶದಲ್ಲಿ ಸಕತ್ತಾಗಿ ನಡೆದಿರುತ್ತದೆ. ಬೈಂದೂರು ಮತ್ತು ಯಡ್ತರೆ ಗ್ರಾಮದ ಸಮಘೃ ಸರ್ವೇ ನಕ್ಷೆಯು ಬೈಂದೂರು ಪಟ್ಟಣ ಪಂಚಾಯತು ಕಚೇರಿ ವ ತಹಸಿಲ್ದಾರ್ ಕಚೇರಿಯಲ್ಲಿ ಇಲ್ಲ ಎಂದು ಇತ್ತೀಚಿನ ಮಾಹಿತಿಯಿಂದ ತಿಳಿದು ಬಂದಿರುತ್ತದೆ. ಕೆ ವೆಂಕಟೇಶ ಕಿಣಿ ದಿನಾಂಕ 16.06.2015 ರಂದು ಅವರಾಗಿಯೇ ನನ್ನ ತಮ್ಮ ದಿ| ಬಿ ಅಣ್ಣಪ್ಪಯ್ಯ ಕಾರಂತನ ಸಹಾಯದಿಂದ ಎಸ್ ಬಿ ಐ ಯಡ್ತರೆ ಟ್ರಸ್ಟ್ ಖಾತೆಗೆ ₹35,000/-ಜಮಾ ಮಾಡಿಸಿರುತ್ತಾನೆ. 2016-17 ದ ಆರ್ಥಿಕ ವರ್ಷದ ಅಂತ್ಯದ ವರೆಗೂ ಸದ್ರಿ ಭೂ ವ್ಯವಹಾರಿ ಸಂಬಂಧಿಸಿದ ವಾಣಿಜ್ಯ ಸಂಸ್ಥೆಯ PAN ಸಂಖ್ಯೆಯನ್ನು ನೀಡಲು ನಿರಾಕರಿಸಿ, ನನ್ನನ್ನು ಹೀಯಾಳಿಸಿರುತ್ತಾನೆ. ಕುಂಜಾಲು ವೆಂಕಟೇಶ ಕಿಣಿ ಗ್ಯಾಸ್ ಅಂಡೆ ವ್ಯವಹಾರದೊಂದಿಗೆ ಈ ಪ್ರದೇಶದಲ್ಲಿ ವಾಣಿಜ್ಯ ಸಂಸ್ಥೆಳಾದ ಚಿತ್ರಾಪುರ ಡೆವಲಪರ್ಸ್, ಮೂಕಾಂಬಿಕಾ ಡೆವಲಪರ್ಸ್, ಸೌಪರ್ಣಿಕಾ ಡೆವಲಪರ್ಸ್ ಮತ್ತು ಇನ್ನಿತರ ವಾಣಿಜ್ಯ ಸಂಸ್ಥೆಗಳನ್ನು ಹುಟ್ಟು ಹಾಕಿಕೊಂಡು ಭೂ-ವ್ಯವಹಾರ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದಾನೆ. ಅವರಾಗಿಯೇ ಖಾತೆಗೆ ಜಮಾ ಮಾಡಿಸಿದ ಹಣದ ಮೂಲವನ್ನು ಟ್ರಸ್ಟ ಗೆ ತಿಳಿಸದೆ ಈಗ ನನ್ನನ್ನು ಹಫ್ತಾ ವಸೂಲಿ ಮಾಡುವವ ಅಂತ ಸಮಾಜದಲ್ಲಿ ಬಿಂಬಿಸುವುದು ಕಾನೂನು ಪ್ರಕಾರ ದೇಶದ ಖಜಾನೆಗೆ ನಷ್ಟ ಉಂಟುಮಾಡಿರುತ್ತಾನೆ ಎಂದು ತಿಳಿಯಬೇಕಾಗಿರುತ್ತದೆ. ಆ ನೆಲೆಯಲ್ಲಿ ಈತನು ಮತ್ತು ಈತನ ಭೂ-ವ್ಯವಹಾರದಲ್ಲಿ ಪಾರ್ಟ್ನರ್ ಆಗಿರುವ “ಬೈಂದೂರು ಕ್ಷೇತ್ರ ಅಭಿವೃದ್ದಿ ಸಂಚಾಲರು” ಎಂದು ಕರೆಸಿಕೊಳ್ಳುವ ಕುಂದಾಪುರ ಪೋಲೀಸು ಸರಹದ್ದಿನಲ್ಲಿ ವಾಸಿಸುತ್ತಿರುವ ಕ್ರಷ್ಣಪ್ರಸಾದ್ ಅಡ್ಯಂತಾಯ ಮತ್ತು ಗುರುರಾಜ ಬಿನ್ ನರಶಿಂಹ ಕಲ್ಕಂಟಮನೆ ಇವರೆಲ್ಲರ ಮೂಲಕ ಸಂಚಾರಿ ಸಂಪರ್ಕದಲ್ಲಿನ Whatspp ಸುದ್ದಿ ಮಾಧ್ಯಮದಲ್ಲಿ ಮತ್ತು ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕ್ರಷ್ಣಪ್ರಸಾದ್ ಅಡ್ಯಂತಾಯ ಸಹಿ ಮಾಡಿದ್ದೆನ್ನಲಾದ ಪತ್ರದ ಯಥಾ ವಿಷಯವನ್ನು ಅಪ್ ಲೋಡ್ ಮಾಡಿಸಿರುತ್ತಾರೆ ಎಂದು ಕೆ. ವೆಂಕಟೇಶ್ ಕಾರಂತ್ ತಿಳಿಸಿದ್ದಾರೆ.

► ಆರ್.ಟಿ.ಐ ಕಾಯ್ದೆ ದುರುಪಯೋಗ. ಉದ್ಯಮಿ, ಅಧಿಕಾರಿಗಳಿಗೆ ಕಿರುಕುಳ ಆರೋಪ. ಬೈಂದೂರಿನ ಕೆ. ವೆಂಕಟೇಶ ಕಾರಂತ್ ವಿರುದ್ಧ ದೂರು – https://kundapraa.com/?p=54727 .

Leave a Reply

Your email address will not be published. Required fields are marked *

12 − five =