ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ಹಿರಿಯರು ಬಹಳ ಹಿಂದಿನಿಂದಲೂ ಆಯುರ್ವೇದಿಕ್ ಔಷಧಿಗಳನ್ನು ಉಪಯೋಗಿಸುತ್ತಿದ್ದು, ಇಂದಿನ ದಿನಗಳಲ್ಲಿ ಯುವಜನರು ಅಲೋಪತಿ ಔಷಧಿಗಳನ್ನು
ಬಳಸುತ್ತಿದ್ದಾರೆ. ಅಲೋಪತಿ ಔಷಧಿಗಳ ಅತಿಯಾದ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಜನರು ಆಯುರ್ವೇದ ಔಷಧಿಗಳನ್ನು
ಬಳಸಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ನಾಕುದಾ ಜೂನುಲ್ ಅಭಿದ್ದೀನ್ ಸಾಹೇಬ್ ಹೇಳಿದರು.
ಅವರು ಗಂಗೊಳ್ಳಿಯ ಮೊಯಿದ್ದೀನ್ ಮಸೀದಿ ಕಟ್ಟಡದಲ್ಲಿ ಆಲ್ಪೈನ್ ಅಸೋಸಿಯೇಟ್ಸ್ ಮಂಗಳೂರು ಇವರ ಆಲ್ಪೈನ್ ಆಯುರ್ವೇದಿಕ್ ಎಂಡ್ ಯುನಾನಿ ಮೆಡಿಕಲ್ಸ್
ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೌಲಾನಾ ಅಬ್ದುಲ್ ಮತೀನ್, ಮೌಲಾನಾ ಅಬ್ದುಲ್ ವಹಾಬ್, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ಮುಖ್ಯೋಪಾಧ್ಯಾಯ ಮಹಮ್ಮದ್ ರಫೀಕ್ ಮೊದಲಾದವರು ಶುಭ
ಹಾರೈಸಿದರು. ಮೊಮಿನ್ ಮಹಮ್ಮದ್ ಗೌಸ್, ಮೆಡಿಕಲ್ಸ್ನ ಮಾಲೀಕ ಜಹೀರ್ ಅಹಮ್ಮದ್ ನಾಕುದಾ ಮೊದಲಾದವರು ಉಪಸ್ಥಿತರಿದ್ದರು.