ಆಳ್ವಾಸ್ ಕಾಲೇಜಿಗೆ ‘ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ 2020-21’ ಗೌರವ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಕಾಲೇಜಿನ ಎನ್ಸಿಸಿ ಭೂದಳ ಹಾಗೂ ಎನ್ಎಸ್ಎಸ್ ಘಟಕವು ಮಂಗಳೂರಿನ ವೆನ್ಲಾಕ್ ಆಸ್ಪçತ್ರೆಯ ರಕ್ತನಿಧಿ ಕೇಂದ್ರ, ಆಳ್ವಾಸ್ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಕಾಲೇಜಿನ ಕಾಮಾರ್ಸ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಲಾಗಿತ್ತು.

Call us

Click Here

Click here

Click Here

Call us

Visit Now

Click here

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ ಶರತ್ ಕುಮಾರ್ ರಾವ್ ಜೆ. ಮಾತನಾಡಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮನಸ್ಥಿತಿಯುಳ್ಳವರಿಂದಾಗಿ ಸಮಾಜದಲ್ಲಿಂದು ತುರ್ತು ರಕ್ತ ಅನಿವಾರ್ಯವಾದಾಗ ಸೂಕ್ತ ಸಮಯದಲ್ಲಿ ರಕ್ತದ ಪೂರೈಕೆ ಸಾದ್ಯವಾಗುತ್ತಿದೆ. ಇಂತಹವರ ಸಂಖ್ಯೆ ಸಮಾಜದಲ್ಲಿ ದ್ವಿಗುಣವಾಗುತ್ತಾ ಸಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತಾನಾಡಿ, ಸಮಾಜದಲ್ಲಿ ನಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದರೆ ನಾವು ವಾಸಿಸುವ ಪರಿಸರಕ್ಕೆ ನಾವೆಷ್ಟು ಕೊಡುಗೆ ನೀಡಿದ್ದೇವೆ ಎಂಬುದನ್ನು ಅವಲಂಭಿಸಿರುತ್ತದೆಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಮಾಡಿದ ಕೆಲಸಗಳಿಂದಲ್ಲ ಎಂದರು.

ಆಳ್ವಾಸ್ ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ :
ಕೋವಿಡ್ ಸಂಧರ್ಭದಲ್ಲಿ ಅತೀ ಹೆಚ್ಚು ಭಾರಿ ರಕ್ತದಾನ ಶಿಬಿರಗಳನ್ನು ನಡೆಸುವುದರೊಂದಿಗೆ, ವರ್ಷವಿಡೀ ಕಾಲೇಜಿನಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ ಹಿನ್ನಲೆಯಲ್ಲಿ ಆಳ್ವಾಸ್ ಕಾಲೇಜನ್ನು ‘’ ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ 2020-21ಎಂದು ಘೋಷಿಸಲಾಯಿತು.

ಶಿಬಿರದಲ್ಲಿ ಉಪನ್ಯಾಸಕರೂ ಸೇರಿದಂತೆ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಒಟ್ಟು 296 ಯೂನಿಟ್ ರಕ್ತ ಸಂಗ್ರಹವಾಯಿತು. ಆಳ್ವಾಸ್ ಕಾಲೇಜಿನ ಪ್ರಾಚಾರ್ಯರಾದ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಎನ್ಸಿ ಸಿ ಭೂಸೇನಾದಳದ ಅಧಿಕಾರಿ ಕ್ಯಾಪ್ಟನ್ ಡಾ ರಾಜೇಶ್ ಬಿ, ಎನ್.ಎಸ್.ಎಸ್ ಘಟಕದ ಸಂಯೋಜಕ ವಸಂತ ಎ ಉಪಸ್ಥಿತರಿದ್ದರು. ಎನ್ಸಿ ಸಿ ಕೆಡೆಟ್ಗಳಾದ ಅಮೃತ ನಿರೂಪಿಸಿ, ನಯನ ಸ್ವಾಗತಿಸಿ, ಪುನೀತ್ ವಂದಿಸಿದರು.

Call us

Leave a Reply

Your email address will not be published. Required fields are marked *

sixteen − seven =