ಆಳ್ವಾಸ್ ನುಡಿಸಿರಿಗೆ 18,000 ನೊಂದಣಿ, ಈವರೆಗೆ 40,000 ಮಿಕ್ಕಿ ಪ್ರೇಕ್ಷಕರು

Call us

ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದಿರೆ: ಯಾವುದೇ ಕಾರ್ಯಕ್ರಮದ ಯಶಸ್ಸು ಅಲ್ಲಿನ ಸಂಘಟಕರಷ್ಟೇ ಸ್ವಯಂಸೇಕರ ಮೇಲೆಯೂ ಅವಲಂಬಿಸಿದೆ. ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿಯೂ ಆಳ್ವಾಸ್ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಒಗ್ಗಟ್ಟಾಗಿ ದುಡಿಯುತ್ತಿರುವ ಘಲವಾಗಿ ಪ್ರತಿವರ್ಷಯೂ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿವೆ.

ಆಳ್ವಾಸ್ ನುಡಿಸಿರಿಗೆ ದೂರ ದೂರದ ಊರುಗಳಿಂದ ಬರುವವರುನ್ನು ಮೊದಲು ಸ್ವಾಗತಿಸಿಕೊಳ್ಳುವುದು ವಿದ್ಯಾಗಿರಿ ಕ್ಯಾಂಪಸ್ ಆರಂಭದಲ್ಲಿಯೇ ಇರುವ ನೊಂದಣಿ ಕೇಂದ್ರ. ಮೂರು ದಿನದ ನುಡಿಸಿರಿಯಲ್ಲಿ ಪ್ರತಿಯೊಬ್ಬರನ್ನೂ ಸ್ವಾಗತಿಸಿಕೊಂಡು ಅವರಿಗೆ ವಸತಿ ವ್ಯವಸ್ಥೆ ಮಾಡಿ, ಅಗತ್ಯ ಮಾಹಿತಿ ನೀಡುವ ಜವಾಬ್ದಾರಿಯನ್ನು ಸ್ವಾಗತ ಸಮಿತಿಯ ಒಂದು ತಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ನುಡಿಸಿರಿಗೆ ವಿವಿಧ ಜಿಲ್ಲೆಗಳಿಂದ ಬರುವವರಿಗಾಗಿ ಮೂರು ದಿನಗಳ ಕಾಲ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು ಬೆಳಿಗ್ಗೆ ೫ರಿಂದ ರಾತ್ರಿ ೧೧ಗಂಟೆಯ ತನಕವೂ ಕಾರ್ಯಾಚರಿಸುತ್ತಿದೆ. ಆನ್ಲೈನ್ ಮೂಲಕವೂ ನೊಂದಣಿ ಮಾಡಿಕೊಳ್ಳುವುದಕ್ಕೆ ಮೂರು ತಿಂಗಳ ಹಿಂದೆಯೇ ಅವಕಾಶ ಮಾಡಿಕೊಟ್ಟು ಅವರ ಮಾಹಿತಿ ಕಲೆಹಾಕಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. ಈ ಭಾರಿ ಆಳ್ವಾಸ್ ನುಡಿಸಿರಿಗೆ ೪೦,೦೦೦ಕ್ಕೂ ಅಧಿಕ ಜನ ಈಗಾಗಲೇ ಭಾಗವಹಿಸಿದ್ದು, ಆ ಪೈಕಿ ೧೮,೦೦೦ ಮಂದಿ ನೊಂದಣಿ ಮಾಡಿಸಿಕೊಂಡಿದ್ದಾರೆ.

Call us

ನೊಂದಣಿ ಕೇಂದ್ರದ ಜವಾಬ್ದಾರಿ ವಹಿಸಿಕೊಂಡಿರುವ ಎ. ಕೈಲಾಸ್ ನಾತ್ರೇಯ ಇಲ್ಲಿನ ವ್ಯವಸ್ಥೆಯ ಬಗೆಗೆ ಪ್ರತಿಕ್ರಿಯಿಸಿ, ನುಡಿಸಿರಿಗೆ ಬರುವ ಜನರ ಉತ್ಸುಕತೆ ಮೆಚ್ವುವಂತದ್ದು. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ದಾಖಲಾತಿಯು ಹೆಚ್ಚಾಗುತ್ತಿರುವುದು ನುಡಿಸಿರಿಯನ್ನು ಮೆಚ್ಚಿ ಬರುತ್ತಿರುವುದಕ್ಕೆ ಸಾಕ್ಷಿ ಎಂದಿದ್ದಾರೆ.
ಶಿಕ್ಷಕ ಡಾ. ವಿಶ್ವಪ್ರಕಾಶ್ ಪ್ರತಿಕ್ರಿಯಿಸಿ ನೋಟುಗಳ ಬದಲಾವಣೆ ನುಡಿಸಿರಿಯ ಮೇಲೆ ಪರಿಣಾಮ ಬೀರಬಹುದು ಎಂದುಕೊಂಡಿದ್ದವೆ. ಆದರೆ ಜನರು ಉತ್ಸುಕತೆಯನ್ನು ತೋರುತ್ತಿರುವುದು ನೋಡಿ ನಮಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

ವಿದ್ಯಾರ್ಥಿನಿ ಸಹನಾ ಮಾತನಾಡಿ ನಮ್ಮಲ್ಲಿ ಸಹಜವಾಗಿ ಸಂವಹನದ ತೊಂದರೆ ಇರುತ್ತದೆ. ಆದರೆ ನೊಂದಣಿ ಕಾರ್ಯದಲ್ಲಿ ತೊಡಗಿರುವ ನಮಗೆ ಜನರೊಂದಿಗೆ ಹೇಗೆ ವರ್ತಿಸಬೇಕೆಂದು ಅರಿವಾಗುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 ಶಾಂಭವಿ  ಆಳ್ವಾಸ್ ಕಾಲೇಜು ಅಂತಿಮ ಎಂಸಿಜೆ ವಿದ್ಯಾರ್ಥೀನಿ_mg_2350 _mg_2353 17-cultural-pocesssion10lva

Leave a Reply

Your email address will not be published. Required fields are marked *

18 + nine =