ಡಿ.3: ಕನ್ನಡ ಮಾಧ್ಯಮದವರಿಗೆ ವಿಶೇಷ ಉದ್ಯೋಗಮೇಳ – ಆಳ್ವಾಸ್ ಉದ್ಯೋಗಸಿರಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಕಲಿತು ಬಳಿಕ ಇತರ ಪದವಿಗಳನ್ನು ಪಡೆದವರಿಗೆ ಡಿಸೆಂಬರ್ 3, 2017 ರಂದು ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಉದ್ಯೋಗಸಿರಿ” ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಉದ್ಯೋಗಸಿರಿಯು ಆಳ್ವಾಸ್ ನುಡಿಸಿರಿಯ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರಿಯು ಕಳೆದ ಹದಿನಾಲ್ಕು ವರ್ಷಗಳಿಂದ ಸಾಹಿತ್ಯಿಕ , ಬೌದ್ಧಿಕ , ಸಾಂಸ್ಕೃತಿಕ ಮತ್ತು ವೈಚಾರಿಕ – ಹೀಗೆ ವಿವಿಧ ಆಯಾಮಗಳಲ್ಲಿ ನಡೆಸಿಕೊಂಡು ಬರುತ್ತಿರುವ ” ಆಳ್ವಾಸ್ ನುಡಿಸಿರಿ ” ಸಮ್ಮೇಳನವು ರಾಷ್ಟ್ರೀಯ ನಾಡು – ನುಡಿಯ ಉತ್ಸವವಾಗಿದೆ .

ಈ ನಿಟ್ಟಿನಲ್ಲಿ ಆಳ್ವಾಸ್ ನುಡಿಸಿರಿಯ ಪ್ರಯುಕ್ತ, ಕನ್ನಡ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕಲಿತು ತದನಂತರ ಇತರೆ ಪದವಿಗಳನ್ನು (ಡಿಗ್ರಿ, ಸ್ನಾತಕೋತ್ತರ , ಇತ್ಯಾದಿ ) ಪಡೆದ ಅಭ್ಯರ್ಥಿ ಗಳಿಗೆ ಡಿಸೆಂಬರ್ 3 ರಂದು ವಿಶೇಷ ಉದ್ಯೋಗ ಮೇಳವನ್ನು ನಡೆಸಲು ನಿರ್ಧರಿಸಲಾಗಿದೆ. ಉದ್ಯೋಗಸಿರಿಯು ಮಹತ್ತರ ಉದ್ದೇಶದ ಈಡೇರಿಕೆಗಾಗಿ ನಡೆಸಲ್ಪಡುವುದರಿಂದ ಯಾವುದೇ ಶುಲ್ಕವನ್ನು ಅಭ್ಯರ್ಥಿಗಳಿಂದ ಅಥವಾ ಕಂಪನಿ ಗಳಿಂದ ತೆಗೆದುಕೊಳ್ಳಲಾಗುವುದಿಲ್ಲ.* ಆಳ್ವಾಸ್ ಶಿಕ್ಷಣ ಸಂಸ್ಥೆಯು ಉದ್ಯೋಗಸಿರಿಯ ಎಲ್ಲಾ ಖರ್ಚು ವೆಚ್ಚವನ್ನು ಭರಿಸುವ ಜೊತೆಗೆ ಊಟದ ವ್ಯವಸ್ಥೆಯನ್ನೂ ನೀಡುತ್ತಿದೆ.

ಯಾರು ಅರ್ಜಿ ಸಲ್ಲಿಸಬಹುದು?
ಕನ್ನಡ ಮಾಧ್ಯಮ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಂಡ ಬಳಿಕ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ (ಎಲ್ಲಾ ವಿಭಾಗಗಳು), ಪದವಿ (ಎಲ್ಲಾ ವಿಭಾಗಗಳು), ಸ್ನಾತಕೋತ್ತರ ಪದವಿ (ಎಲ್ಲಾ ವಿಭಾಗಗಳು), ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಪದವಿ ಪಡೆದ ಅರ್ಹ ಅಭ್ಯರ್ಥಿಗಳು.

ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಅಗತ್ಯವಾಗಿ ತರತಕ್ಕದ್ದು
• 5-10 ಪಾಸ್ ಪೋರ್ಟ್ ಗಾತ್ರದ ಫೋಟೋ
• ಇತ್ತೀಚಿನ ಸ್ವವಿವರ ಮಾಹಿತಿ / ಬಯೋ ಡೇಟಾ / ರೆಸ್ಯುಮೆ
• ಎಲ್ಲಾ ಮಾರ್ಕ್ ಕಾರ್ಡ್ಸ್ (ಜೆರಾಕ್ಸ್)
• ಆಳ್ವಾಸ್ ವಿದ್ಯಾಗಿರಿ ಆವರಣಕ್ಕೆ ಬೆಳಗ್ಗೆ 8. 30 ಗೆ ಬರಬೇಕೆಂದು ಕೋರಲಾಗಿದೆ.

ಆನ್ ಲೈನ್ ನೋಂದಣಿಗಾಗಿ
http://alvasnudisiri.com/udyoga-siri/

ಉದ್ಯೋಗಸಿರಿಯ ದಿನದಂದು ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
9611686148, 8494934852, 9008907716, 8971250414, 9844762311

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರಿ.

Leave a Reply

Your email address will not be published. Required fields are marked *

11 − 5 =