ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿಗೆ ಸಮೀಪದ ಚಿತ್ತೂರು ಮಾರಣಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡು ಅಂಬಾಶ್ರೀ ಯುವ ವೇದಿಕೆ ಉದ್ಘಾಟನಾ ಸಮಾರಂಭ ಭಾನುವಾರ ಜರುಗಿತು.
ಯುವ ವೇದಿಕೆಯನ್ನು ನಾರಾಯಣ ನಾಯ್ಕ ಕಪ್ಟೆಕೊಡ್ಲು ಇವರು ಉದ್ಘಾಟಿಸಿದರು. ನೆಹರೂ ಯುವ ಕೇಂದ್ರದ ಸ್ವಯಂಸೇವಕ ಸುಧಾಕರ ನಾಯ್ಕ್ ಅತಿಥಿಯಾಗಿದ್ದರು.
ಯುವ ವೇದಿಕೆ ಅಧ್ಯಕ್ಷ ನಕ್ಷತ್ರ ನಾಯ್ಕ್ ಮಾತನಾಡಿ ಪರಿಶಿಷ್ಟ ಪಂಗಡ ಮರಾಠಿ ಸಮುದಾಯದ ಜನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಹಾಗೂ ಸಮಾಜಸೇವಾ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶದಿಂದ ಯುವ ವೇದಿಕೆ ಸ್ಥಾಪಿಸಲಾಗಿದ್ದು ಈ ನೆಲೆಯಲ್ಲಿ ಉತ್ತಮ ಸೇವೆ ಸಲ್ಲಿಸುವುದಾಗಿ ಅವರು ತಿಳಿದರು.
ಉಪಾಧ್ಯಕ್ಷರಾದ ರಮೇಶ್ ನಾಯ್ಕ್, ಕಾರ್ಯದರ್ಶಿಯಾದ ಸಂದೀಪ್ ನಾಯ್ಕ್, ಜೊತೆ ಕಾರ್ಯದರ್ಶಿಯಾದ ಶಿವರಾಜ್ ನಾಯ್ಕ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ನಾಗರಾಜ್ ನಾಯ್ಕ್ ಇವರು ಕಾರ್ಯಕ್ರಮ ನಿರೂಪಿಸಿದರು.