ಅಮ್ಮ ನೀನಿಲ್ಲದಾ ಹೊತ್ತು…

Call us

Call us

ಅದೊಂದು ಶುದ್ಧ ’ಬ್ಯಾಡ್ ಡ್ರೀಮ್’…

Call us

Call us

Visit Now

ಕನಸುಗಳೇ ಹಾಗೆ ಎಲ್ಲಿ ಕಾಡುತ್ತವೋ, ಎಲ್ಲಿ ತೂರುತ್ತವೋ, ಎಲ್ಲಿ ಸತ್ಯಾಸತ್ಯದಿಂದ ಕೂಡಿರುತ್ತವೋ, ಮನಸಿನ ಕಣ್ಣುಗಳಿಗೆ ಯಾವ ರೀತಿಯ ’ಫಿಲ್ಮ್’ಗಳನ್ನು ತೋರಿಸುತ್ತವೆಯೋ, ಹೇಳಲಾಗದು, ಮರೆತರಂತೂ ವರ್ಣಿಸಲೂ ಆಗದು… ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ ಪೂರ್ತಿ ಕಾಲ್ಪನೆಗಳಿಂದ ಕೂಡಿದ್ದರೂ ನಿಜ ಜೀವನಕ್ಕೆ ಸಂಬಂಧಿಸಿರುವ ಸಂಬಂಧಿಕನಂತೆಯೂ ಕೆಲವೊಮ್ಮೆ ನಾಟ್ಯವಾಡುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ ಇನ್ನೂ ಕೆಲವು ಕಹಿ ಅನುಭವ ಕೊಡುತ್ತವೆ. ಆ ದಿನ ರಾತ್ರಿ ನನ್ನು ಮನದಾಳದಲ್ಲಿ ಕೆಟ್ಟ ಕಸಸೊಂದು ತೆರೆಯಂತೆ ಅಪ್ಪಳಿಸಿತ್ತು.

Click here

Call us

Call us

ಕನಸಿನ ವಿಷಯಗಳನ್ನು ಚೆನ್ನಾಗಿ ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮತ್ತು ಯುಂಗ್ ಪ್ರಾಯ್ಡ್‌ರು ಹೇಳುವಂತೆ, ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗವಂತೆ. ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು(ಕೋಪ, ನೋವು) ನಾವು ಸುಪ್ತ ಮನಸ್ಸಿನೊಳಗೆ ತಳ್ಳಿ ಬಿಡುತ್ತೆವಂತೆ. ನಿದ್ರಿಸುವಾಗ ಆ ಸುಪ್ತಮನಸ್ಸಿನ ಒಳಗಿರುವ ವಿಷಯಗಳೇ ಮೇಲೇರಿ ಬರುತ್ತವಂತೆ. ಅಂತಹ ಸುಪ್ತಮನಸ್ಸಿನಿಂದ ಎದ್ದು ಬಂದ ’ಫಿಲ್ಮೇ’ ಆ ’ಬ್ಯಾಡ್ ಡ್ರೀಮ್’.

ಹೌದು!., ನಿಜಕ್ಕೂ ಅದು ನನಗೆ ಇಷ್ಟವಾಗದ, ನನ್ನ ಮನಸ್ಸಿಗೆ ತಡೆದುಕೊಳ್ಳಲಾಗದಂತಹ, ಅದರೆದುರೂ ನಾ ನಿಲ್ಲಲಾಗದ ನಿರ್ವಾಜ್ಯ ಸನ್ನಿವೇಶ. ಇದರಿಂದ ನಾ ಕಲಿತುಕೊಂಡಿದ್ದು ಬಹಳ. ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಕಲಿಯೋದು ನನ್ನ ಹಾಬಿ ಕೂಡ ಹೌದು. ಇದು ವ್ಯಕ್ತಿತ್ವ ಬಲಗೊಳಿಸಲು ಸಹಕಾರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಆ ದಿನದ ಕನಸಲ್ಲಿ ನನ್ನ ಜೀವ, ನನ್ನ ಭಾವ, ನನ್ನ ಆತ್ಮವೇ ಆಗಿರುವ ’ನನ್ನಮ್ಮ’ ನನ್ನ ಬಳಿ ಜೀವಂತವಾಗಿ ಇರಲಿಲ್ಲ. ಅವಳೇ ಕರೆತಂದ ಈ ಜೀವ ಅವಳಿಲ್ಲದೇ ಒಂಟಿಯಾಗಿತ್ತು. ಏಕಾಂಗಿಯಾಗಿಸಿ ಬಿಟ್ಟು ಕಾಣದ ಲೋಕಕ್ಕೆ ಪಯಣಿಸಿದ್ದಳು. ಅಮ್ಮನ ಉಪಸ್ಥಿತಿ ಅಂದಿಗೆ ಕೊನೆಯಾಗಿ ಇನ್ನೂ ಮುಂದೆ ಅಪ್ಪಿಕೊಳ್ಳಲು, ಸೆರಗ ಹಿಂದೆ ಅವಿತುಕೊಳ್ಳಲು, ನೋವಾದಾಗ ತೊಡೆಯ ಮೇಲೆ ಮಲಗಲು, ಮುದ್ಧಾದ ಅಪ್ಪುಗೆಯ ಆಲಿಂಗನ ಮಾಡಿಕೊಳ್ಳಲು, ಮುದ್ದಾಡಲು ಯಾವುದಕ್ಕೂ ಲಭ್ಯವಾಗದಂತೆ ನಿರ್ಜಿವಿಯಾಗಿದ್ದಳು. ಯಾವಾಗ ಇನ್ಮುಂದೆ ಅಮ್ಮ ನನ್ನ ಲಭ್ಯತೆಗೆ ದೊರೆಯಳು ಅಂತ ತಿಳಿಯಿತೋ ಆಗಲೇ ಎದೆಯ ಪಂಜರದಲ್ಲಿ ಢವ-ಢವ ಶಬ್ದದ ಉಸ್ತುವಾರಿಯೇ ಜಾಸ್ತಿಯಾಗಿ ಅತೀರೇಕತೆಗೆ ತಿರುಗಿ ಏನು ಮಾಡಬೇಕೆಂದು ತೋಚದೇ ಒದ್ದಾಟ ಪ್ರಾರಂಭಿಸಿದ್ದೆ. ಕನಸಿನ ರಾಜನ ಆಸ್ತಾನದಲ್ಲಿ ರಾಜ, ಮಂತ್ರಿ, ಸಭಿಕರು, ಅಷ್ಟೇ ಅಲ್ಲದೇ ಕಾಲಾಳುಗಳ ಪಾದಕ್ಕೂ ಬಿದ್ದು, ಪರಿ ಪರಿಯಲ್ಲಿ ಬೇಡಿಕೊಂಡರೂ ಯಾರು ನನ್ನ ಒಡಲಾಳದ ನೋವನ್ನು ಅರ್ಥಮಾಡಿಕೊಳ್ಳಲಿಲ್ಲ. ’ಬೇಕಾ ಅಮ್ಮಾ ಬೇಕಾ’ ಎಂದು ಕೇಳಲಿಲ್ಲ. ಆ ಆರ್ಥನಾದ ಮಾಡಿಕೊಂಡವರಿಗೆ ಗೊತ್ತು, ಹೇಳಲಸಾಧ್ಯವನಿಸುತ್ತೆ. ಅಮ್ಮ ಅಂದರೆ ಏನೂ!? ಎಂದು ಅತ್ತು ಅತ್ತು ಸುಸ್ತಾದ ನನಗೆ ಆಗಲೇ ಅರಿವಾಗಿದ್ದು. ಅಮ್ಮ ಎನ್ನುವ ಪದ ಈ ಜನ್ಮ ತಾಳಿ ಭೂಮಿಗೆ ಬಂದ ದಿನದಿಂದ ದಿನಂಪ್ರತಿ ಎನ್ನದೇ ಬಾಯಲ್ಲಿ ತೊದಲುತ್ತಾ, ಕರೆಯುತ್ತಾ, ಅರಚುತ್ತಾ, ಬೆಳೆದರೂ ಅದರ ಅರಿವು ಆಗಲಿಲ್ಲವಲ್ಲಾ! ಈಗೆಲ್ಲಿಂದ ಬಂದಿತೆಂದು ಸಾಧಾರಣ ಭಿನ್ನತೆಯಲ್ಲೆ ಅರ್ಥವಾಗುತ್ತಾ ಸಾಗಿತ್ತು.

ಈ ಹಿಂದೆ ಯಾರೋ ಒಂದು ಮಾತು ಹೇಳಿದ್ದರು. ’ಹತ್ತಿರ ಇರುವಾಗ ಯಾವುದರ ಬೆಲೆಯೂ ಅರಿಯುವುದಿಲ್ಲ ಕಳೆದುಕೊಂಡಾಗಲೇ ಅದರ ಮೌಲ್ಯ, ಅಂತಸ್ತು ಅರಿಯುವುದೆಂದು’. ಅದೀಗ ಹೌದನ್ನಿಸುವ ಕಾಲ. ಅವಳಿರುವಾಗ ಅವಳ ಮೌಲ್ಯ ಅಷ್ಟಿದೆ ಎನ್ನುವ ಪರಿವೇ ಇರಲಿಲ್ಲ. ಕಲ್ಪನೆಯೂ ಬಂದಿರಲಿಲ್ಲ. ನಿಜವಾಗಲೂ ಅವಳ ಉಪಸ್ಥಿತಿ ಎಷ್ಟು ಭದ್ರ ಅನಿಸಿದ್ದು ಆವಾಗಲೇ..!

ಎಸ್… ಅಮ್ಮ ಅಮ್ಮನೇ. ಅವಳೊಂದು ತ್ಯಾಗಮಯಿ, ಆ ಪದವೇ ಒಂದು ’ಯುನೀಕ್ ಐಡೆಂಟಿಟಿ’. ಈ ಭೂಮಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಬರುವ ಮೊದಲ ಪದವೇ ಅಮ್ಮ. ಪುಟ್ಟ ಮಗುವಿನ ಮೊದಲ ತೊದಲ ನುಡಿಯೂ ಅಮ್ಮನೇ. ಅಮ್ಮ ಎಂದರೆ ಅದೇನೋ ಹರುಷ ಆ ಎರಡಕ್ಷರದ ಪದದಲ್ಲಿ ಅದೇನೋ ಚೈತನ್ಯ. ನವ ಮಾಸ ಗರ್ಭದಲ್ಲಿ ಹೊತ್ತು ಹಲವು ನೋವು, ಯಾತನೇ ಅನುಭವಿಸಿ, ಸೃಷ್ಟಿಗೆ ಕಾರಣವಾಗಿ ತನ್ನ ಮಡಿಲಲ್ಲಿಟ್ಟು ಸಣ್ಣ ನೋವು ಆಗದಂತೆ ಜತನವಾಗಿ ಕಾಪಾಡಿ ತಾನು ಅರೆಹೊಟ್ಟೆ ಇದ್ದರೂ ಮಗನಿಗೆ ಹೊಟ್ಟೆ ತುಂಬಾ ಕೈ ತುತ್ತು ಹಾಕಿ ಬೆಳೆಸುವ ತಾಯಿಗೆ ತಾಯಿಯೇ ಸಾಟಿ.

ಒಮ್ಮೊಮ್ಮೆ ಮೌನವೇ ಮಾತಾಗುವ ಅಮ್ಮ ಇನ್ನೂ ಕೆಲವೊಮ್ಮೆ ಮಾತೇ ಮೌನ ಎನಿಸುವುದು ಉಂಟು. ಅಕಳಂಕ ಧಾರೆ ಅವಳೆಂದರೆ ತಪ್ಪಲ್ಲ. ಪ್ರಪಂಚದಲ್ಲಿ ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲವೆಂಬಂತೆ ಎಷ್ಟೋ ಮಂದಿಯ ಜೀವನದ ಜಂಜಡಗಳಿಗೆ, ಸುಖಕ್ಕೆ, ದುಃಖಕ್ಕೆ, ಔನತ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತು ಯಾವುದೇ ಸ್ವಾರ್ಥವಿಲ್ಲದೇ ನಾನೇ ಎಲ್ಲ, ನನ್ನಿಂದಲೇ ಎಲ್ಲಾ ಆಯಿತು ಎಂದು ಕ್ರೆಡಿಟ್ ತೆಗೆದುಕೊಳ್ಳಲು ಎಳಸದ ಮನಸ್ಸಿದ್ದರೆ ಅದು ಅಮ್ಮಂದಿರದು ಮಾತ್ರ.

ಚಿಕ್ಕಂದಿನಲ್ಲಿ ನಡೆಯಲು ಬಾರದಿದ್ದಾಗ ಕೈ ಹಿಡಿದು ನಡೆಸಿ, ಆನಂತರ ನಡೆಯಲು ಸಮರ್ಥರಾದರೂ ತನ್ನ ಕರುಳ ಬಳ್ಳಿಗೆ ನೋವಾಗುವುದೇನೋ ಎಂದು ಕಂಕುಳಲ್ಲಿ ಕೂರಿಸಿಕೊಂಡು ಪಯಣಿಸಿ ಮುದ್ದಿಸುವ ಆ ಹೆತ್ತ ಪ್ರೀತಿ, ಮಜ್ಜಿಗೆ ಕಡೆಯುವ ಹೊತ್ತು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹಾಡಿನ ಧಾರೆಯ ಮೂಲಕ ನೀತಿಕತೆ ಹೇಳುವ ನಲ್ಮೆ, ಶಾಲೆಗೆ ಹೋಗಲ್ಲ ಎಂದಾಗ ನಿನಗೇನು ಬೇಕು ತಗೋ ಎಂದು ಬಳಿಯಲ್ಲಿ ಕೂಡಿಟ್ಟ ಅಷ್ಟಿಷ್ಟು ಖಾಸನ್ನು ಕೊಟ್ಟು, ತಪ್ಪುಗೆರೆದಾಗ ಬುದ್ಧಿ ಹೇಳಿ, ಕಷ್ಟವಿದ್ದರೂ ತೋರ್ಪಡಿಸದೇ ಸದಾ ಮುಗುಳ್ನಕ್ಕೂ ನನ್ನ ಬೆಳೆಸಿದ ಈ ಪರಿಗಳೇ ಅವಳನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಒಪ್ಪಲಿಲ್ಲವಾ? ಅಥವಾ ಆ ಬಾಂಧವ್ಯ ಇನ್ಯಾರಿಂದಲೂ ಧಾರೆಯೆರೆಯಲಾಗುವುದಿಲ್ಲ ಅಂತಲಾ!? ತಿಳಿಯಲಿಲ್ಲ… ಸಾಹಸಕ್ಕೆ ಛಲಕ್ಕೆ ಮೂಲಹೇತುವಾಗುವ ಆಕೆ, ಅನಿವಾರ್ಯತೆ ಬಂದರೆ ಅಪ್ಪನೂ ಆಗಿ ನಮ್ಮನ್ನ ಸಲಹಿದ್ದು ಕಣ್ಣಮುಂದೆ ಗೋಚರಿಸಿತ್ತು. ನನ್ನ ಪಾಲಿಗೆ ಬಾಳದೀವಿ, ದಾರಿ ದೀವಿ ಎರಡು ಆಗಿರುವ ಆಕೆಯ ವಾತ್ಸಲ್ಯದ ಸಾಗರದಲ್ಲಿ ಪ್ರತಿದಿನ ಮಿಂದೇಳುವುದು ಅನಿರ್ವಚನೀಯ ಆನಂದಸಾಗರ. ಆ ಸಾಗರದಿ ಅವಳೇ ಮುತ್ತು. ಆ ಮುತ್ತನ್ನು ಕಳೆದುಕೊಳ್ಳಲು ನಾ ಒಲ್ಲೆ …

ಆಗೆಲ್ಲಾ ನಾ ಅತ್ತು ಅವಳಿಗೆ ಎಷ್ಟು ಘಾಸಿ, ಕಿರಿ ಕಿರಿ ಮಾಡಿದ್ದರೂ, ಅಪ್ಪನನ್ನೇ ಆನೆ ಮಾಡಿ ಅಂಬಾರಿಯಂತೆ ನನ್ನ ಕೂರಿಸಿ ಮನದೊಳಗೆ ನಗುವನ್ನು ಕಂಡಿದ್ದಳು. ಮನಸ್ಸಿನ ಅಂತಃಕರಣದಲ್ಲಿ ಅವಳಿಲ್ಲದೇ ಜೀವನ ಸಾಗಲ್ಲ. ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ಪ್ರತಿಯೊಬ್ಬ ಪುರುಷನಿಗೂ ಬೆನ್ನೆಲುಬಾಗಿ ನಿಲ್ಲ್ಲುವ ಈಕೆಯ ಇಂಪು ಪಸರಿಸದೇ ಜಗತ್ತೇ ಇಲ್ಲ ಅನಿಸುತ್ತೆ. ಶಾಲಾ ದಿನದ ನಾಟಕದಲ್ಲಿ ನಾ ಸಾಯೋ ಸೈನಿಕನ ಪಾತ್ರ ಮಾಡಿದ್ದನ್ನು ಎದುರು ನಿಂತು ನೋಡಿದ ಆಕೆ ಎಡೆಬಿಡದೆ ಅತ್ತಿದ್ದು, ಮಳೆ ಮಿಂಚು, ಗುಡುಗಿನಲಿ ತಾ ನೆನೆದರೂ ತನ್ನ ಸೆರಗ ಎನ್ನ ತಲೆಗೆ ಹೊದಿಕೆಯಾಗಿಸಿ ಜಾಗೃತಿವಹಿಸಿದ್ದು, ಇದೆಲ್ಲಾ ಗಮನಿಸಿದರೆ ಭಾವನಾತ್ಮಕವಾಗಿ ಅಮ್ಮನೊಂದಿಗಿರುವ ಸಂಬಂಧ ಅಪ್ಪನೊಂದಿಗೆ ಇಲ್ಲ ಎನಿಸುತ್ತದೆ. ಅಂಬೆಗಾಲಿಡುವಾಗ ಆನೆಯಾಗಿ ಆಡಿಸುವ ಅಪ್ಪ, ನಡೆಯುವಾಗ ಅಂಗಡಿಗೆ ಬೆರಳು ಹಿಡಿದು ಹೋಗಿ ಕೇಳಿದ್ದು ಕೊಡಿಸುವ ಅಪ್ಪ ಒಮ್ಮೊಮ್ಮೆ ಸಿಟ್ಟು ಬಂದಾಗ ಹೊಡೆಯುತ್ತಿದ್ದದ್ದು ಅಮ್ಮನೆದೆಯಲ್ಲಿ ಹೇಳಲಾಗದೇ ಎಷ್ಟು ಸಂಕಟವನ್ನು ನೀಡಿತ್ತೋ ನಾ ಕಾಣೆ.

ಇಷ್ಟೆಲ್ಲಾ ಮಮಕಾರ ಇರುವ ಅಮ್ಮ ಕಣ್ಣೇದುರು ಕಾಣದಾದಾಗ ನನ್ನಯ ತಳಮಳ, ಕಸಿವಿಸಿ, ಒದ್ದಾಟದ ಪರಿ ಹೇಳಲಾಗದೇ ಇನ್ನೇನೂ ತಡೆಯಲಾರೆ ಎನ್ನುವಷ್ಟರಲ್ಲಿ ಕಣ್ದೆರೆಡು ಆಕಸ್ಮಿಕವಾಗಿ ಎದ್ದೆ. ಜಗತ್ತು ನಿರ್ಮಲವಾಗಿತ್ತು ಕಹಿಯ ಸತ್ಯ, ಜೀವನದ ಸಹಿಯ ತಿಳಿಸಿತ್ತು.

ಅವಳು ಬಳಿ ಇದ್ದಳೆಂದು ತಿಳಿದಿದ್ದ ಸಮಯದಲ್ಲಿ ಅರಿಯದ ಅದೆಷ್ಟೋ ಮೌಲ್ಯಯುತ ಬಾಳ್ವೆಯ ಅಂಶವನ್ನು ಅವಳು ಇಲ್ಲವೆಂಬ ಕನಸಿನಲ್ಲಿ ಕಂಡೆ. ಅಂದಿನಿಂದ ಅಮ್ಮನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನಾನು ನಮ್ಮ ವೈಯಕ್ತಿಕ ಜೀವನದ ಏಳು ಬೀಳುಗಳ ನಡುವೆ ಮಕ್ಕಳಿಗಾಗಿ ಅವಳು ಮಾಡುವ ತ್ಯಾಗ, ಪ್ರೀತಿ, ಕರುಣೆ, ಮಮತೆ ಇತ್ಯಾದಿಗಳನ್ನು ಮನಗೊಂಡು ಇತರರಿಗೂ ಅಮ್ಮನ ಅಂತಃಕರಣ ಹಾಗೂ ಅವಳ ಉಪಸ್ಥಿತಿಯ ಮೌಲ್ಯಗಳನು ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಯಾಕೆಂದರೆ ’ಮೇರೆ ಪಾಸ್ ಮಾ ಹೈ’… ನಿಮಗೂ ಅಮ್ಮ ಬೇಕಲ್ವಾ!!? ಅರಿಯದ ಅವಳ ಪ್ರೀತಿ ಅರಿತು ನೋಡಿ, ಆ ಭರವಸೆಯ ಭಾವ ಮನಸ್ಸಿಗೆ ಹೊಸ ಶಕ್ತಿ ನೀಡುತ್ತದೆ.

’ಅವಳು ನಾಳೆಗಳೆಡೆಗಿನ ಭರವಸೆ, ಬದುಕಿನ ಮೂಲಾಧಾರಗಳ ಒಳಸೆಲೆ’
ಲವ್ ಯೂ ಅಮ್ಮ…

Leave a Reply

Your email address will not be published. Required fields are marked *

14 − twelve =