ಅನನ್ಯಾ ಹೆಬ್ಬಾರ್‌ಗೆ ಪಿಯುಸಿಯಲ್ಲಿ ರಾಜ್ಯಕ್ಕೆ ಐದನೆ ಸ್ಥಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಡ ಗ್ರಾಮದ ಚುಂಗಿಗುಡ್ಡೆ ಲಕ್ಷ್ಮೀನಾರಾಯಣ ಹೆಬ್ಬಾರ್-ಜ್ಯೋತಿ ಹೆಬ್ಬಾರ್ ದಂಪತಿಯ ಪುತ್ರಿ ಅನನ್ಯಾ ಹೆಬ್ಬಾರ್ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಶೇ 99 ಅಂಕ ಗಳಸಿ ರಾಜ್ಯದಲ್ಲಿ ಐದನೆ ಸ್ಥಾನ ಗಳಿಸಿದ್ದಾಳೆ.

Call us

Call us

ಈಕೆ ಬೆಂಗಳೂರು ಮಲ್ಲೇಶ್ವರದ ವಿದ್ಯಾಮಂದಿರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.  ಇಂಗ್ಲಿಷ್‌ನಲ್ಲಿ 94 ಅಂಕ ಬಂದಿದ್ದು, ಉಳಿದ ಐದು ವಿಷಯಗಳಾದ ಸಂಸ್ಕೃತ, ವ್ಯವಹಾರ ಶಾಸ್ತ್ರ, ಲೆಕ್ಕಾಚಾರ ಶಾಸ್ತ್ರ, ಸಂಖ್ಯಾ ಶಾಸ್ತ್ರ, ಮೂಲಗಣಿತದಲ್ಲಿ 100 ಅಂಕಗಳು ಬಂದಿವೆ.

Leave a Reply

Your email address will not be published. Required fields are marked *

thirteen + twenty =