ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಈ ಭಾರಿ ಬಿಜೆಪಿ ಅಧಿಕಾರ ಕೈತಪ್ಪಿದ್ದು ಕಾಂಗ್ರೆಸ್ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇಂದು ಮಿನಿ ವಿಧಾನಸೌಧದಲ್ಲಿ 6 ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಮತ ಎಣಿಕೆ ನಡೆದಿದ್ದು, 3ಕಾಂಗ್ರೆಸ್ 3 ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದ್ದಾರೆ.
ಉಳಿದ ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಒಟ್ಟು ಹದಿಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ ಪಡೆದುಕೊಂಡರೆ, ಬಿಜೆಪಿ ಪಕ್ಷ 7 ಸ್ಥಾನ ಪಡೆದು ಬಹುಮತ ಸಾಧಿಸಿದ್ದರೂ ಮೂವರು ನಾಮ ನಿರ್ದೇಶಿತ ಸದಸ್ಯರಿಂದಾಗಿ ಅಧಿಕಾರ ಕೈತಪ್ಪಲಿದೆ. ಎಪಿಎಂಸಿ ಆರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ವರ್ತಕ ಕ್ಷೇತ್ರ, ಶಿರೂರು ಹಾಗೂ ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೆಂಲಿತರು ಜಯ ಸಾಧಿಸಿದರೆ, ಕಂಬದಕೋಣೆ, ತ್ರಾಸಿ, ವಂಡ್ಸೆ ಕೃಷಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿಗರು ವಿಜಯ ಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ರೈತ ಸಂಘದ ಅಧ್ಯಕ್ಷರ ಸೋಲು
ಎರಡು ಭಾರಿ ಎಂಪಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ದೀಪಕ್‌ಕುಮಾರ್ ಶೆಟ್ಟಿ ಈ ಭಾರಿ ಸೋಲು ಕಂಡಿದ್ದಾರೆ. ಒಂದು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಮೂರನೇ ಬಾರಿ ಸ್ವರ್ಧಿಸಿದ್ದರು. ರೈತಸಂಘದ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದರು. ಆದರೆ ಈ ಭಾರಿ ಕಂಬದಕೋಣೆ ಕ್ಷೇತ್ರದಿಂದ ಸ್ವರ್ಧಿಸಿ ಸೋಲು ಕಂಡಿದ್ದಾರೆ.
ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದ್ದು, ಕುಂದಾಪುರ ಎಪಿಎಂಸಿ ಚುನಾವಣೆಗೆ ಒಟ್ಟು 42 ನಾಮಪತ್ರ ಸಲ್ಲಿಕೆಯಾಗಿದ್ದು, 16 ಮಂದಿ ಕಣದಲ್ಲಿದ್ದರು.
ಗೆಲುವು ಸಾಧಿಸಿದ ಅಭ್ಯರ್ಥಿಗಳು
- ಬಿಜೆಪಿ: ಶಿರೂರು-ವೆಂಕಟ ಪೂಜಾರಿ, ಕಿರಿಮಂಜೇಶ್ವರ-ಮಂಜು ದೇವಾಡಿಗ, ವರ್ತಕರ ಪ್ರತಿನಿಧಿ-ರಾಮರಾಯ ಕಾಮತ್.
- ಕಾಂಗ್ರೆಸ್: ಕಂಬದಕೋಣೆ-ವಸಂತ ಶೆಟ್ಟಿ, ವಂಡ್ಸೆ-ಸಂಜೀವ ಪೂಜಾರಿ, ತ್ರಾಸಿ ಶರತ್ ಕುಮಾರ್ ಶೆಟ್ಟಿ,
ಅವಿರೋಧವಾಗಿ ಆಯ್ಕೆಗೊಂಡವರು:
- ಎಸ್.ರಾಜು ಪೂಜಾರಿ (ಕಾಂಗ್ರೆಸ್ – ಸಹಕಾರಿ ಮಾರುಕಟ್ಟೆ ಪ್ರತಿನಿಧಿ ಕ್ಷೇತ್ರ ಸಾಮಾನ್ಯ)
- ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕ್ಷೇತ್ರ ಮೀಸಲು ಮಹಿಳೆ)
- ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕ್ಷೇತ ಅನುಸೂಚಿತ ಪಂಗಡ)
- ಗಣೇಶ್ ಶೇರಿಗಾರ್ (ಕಾಂಗ್ರೆಸ್- ಕುಂದಾಪುರ ಸಾಮಾನ್ಯ ಕ್ಷೇತ್ರ)
- ಹೆಚ್.ವಸಂತ ಶೆಟ್ಟಿ(ಬಿಜೆಪಿ- ತೆಕ್ಕಟ್ಟೆ ಕ್ಷೇತ್ರ ಹಿಂದುಳಿದ ವರ್ಗ ಬಿ)
- ಮಂಜುಳಾ (ಬಿಜೆಪಿ- ಹೊಂಬಾಡಿ-ಮಂಡಾಡಿ ಮೀಸಲು ಮಹಿಳೆ)
- ಚಂದ್ರ ಸಮಗಾರ(ಬಿಜೆಪಿ- ಹಾಲಾಡಿ ಕ್ಷೇತ್ರ ಅನುಸೂಚಿತ ಜಾತಿ) ಕುಂದಾಪ್ರ ಡಾಟ್ ಕಾಂ ವರದಿ.
ಮತವಿವರ:
- ಶಿರೂರು: ವೆಂಕಟ ಪೂಜಾರಿ (ಬಿಜೆಪಿ)-1609, ಮಹಾಬಲ ದೇವಾಡಿಗ-1223, ಸ್ವತಂತ್ರ ಅಭ್ಯರ್ಥಿಗಳಾದ-ಮೋಹನಚಂದ್ರ-26, ರವಿಚಂದ್ರ-29, ತಿರಸ್ಕೃತ ಮತ 39, ಚಲಾವಣೆಯಾದ ಮತ 2926. ಅಂತರ-386
- ಕಂಬದಕೋಣೆ: ವಸಂತ ಹೆಗ್ಡೆ (ಕಾಂ)-1014, ದೀಪಕ್ ಕುಮಾರ್ ಶೆಟ್ಟಿ-933, ಸ್ವತಂತ್ರ ಅಭ್ಯರ್ಥಿಗಳು-ಮೋಹನಚಂದ್ರ-8, ರವಿಚಂದ್ರ-21, ತಿರಸ್ಕೃತ ಮತ 20, ಚಲಾವಣೆಯಾದ ಮತ-1996. ಅಂತರ-81
- ಕಿರಿಮಂಜೇಶ್ವರ: ಮಂಜು ದೇವಾಡಿಗ (ಬಿಜೆಪಿ)-981, ನರಸಿಂಹ ಪೂಜಾರಿ-916, ತಿರಸ್ಕೃತ ಮತ 19, ಚಲಾವಣೆಯಾದ ಮತ 1916. ಅಂತರ-25
- ತ್ರಾಸಿ: ಶರತ್ ಕುಮಾರ್ ಶೆಟ್ಟಿ (ಕಾಂ)-1381, ರಾಧಾಕೃಷ್ಣ ಸೇರಿಗಾರ್-1138, ತಿರಸ್ಕೃತ-52, ಚಲಾವಣೆಯಾದ ಮತ-2576. ಅಂತರ 243
- ವಂಡ್ಸೆ: ಸಂಜು ಪೂಜಾರಿ (ಕಾಂ)-1516, ಚಂದ್ರ ಆಚಾರ್ ಕಳಿ-1336, ತಿರಸ್ಕೃತ-73, ಚಲಾವಣೆಯಾದ ಮತ 2925. ಅಂತರ-180
- ವರ್ತಕರ ಕೇತ್ರ: ರಾಮರಾಯ ಕಾಮತ್ (ಬಿಜೆಪಿ)-73, ರಾಜೇಶ್ ಪೈ-41 ಚಲಾವಣೆಯಾದ ಮತ-411 ಅಂತರ 32 ಕುಂದಾಪ್ರ ಡಾಟ್ ಕಾಂ ವರದಿ.
ವಿಜಯೋತ್ಸವ
ಕುಂದಾಪುರ ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸದ ಕಾಂಗ್ರೆಸ್ ಬೆಂಬಲಿತರಾದ ಶರತ್ ಕುಮಾರ್ ಶೆಟ್ಟಿ, ವಸಂತ ಹೆಗ್ಡೆ, ಸಂಜು ಪೂಜಾರಿ ವಿಜಯೋತ್ಸವ ಆಚರಿಸಿದರೇ ಬಿಜೆಪಿ ಬೆಂಬಲದಿಂದ ಆಯ್ಕೆಯಾದ ವೆಂಕಟ ಪೂಜಾರಿ, ಮಂಜು ದೇವಾಡಿಗ, ರಾಮರಾಯ ಕಾಮತ್ ಅವರನ್ನು ಬಿಜೆಪಿ ಕಾರ‍್ಯಕರ್ತರು ಅಭಿನಂದಿಸಿದರು. © ಕುಂದಾಪ್ರ ಡಾಟ್ ಕಾಂ.
► ಕುಂದಾಪುರ ಎಪಿಎಂಸಿ ಚುನಾವಣೆ. ಗದ್ದುಗೆಗೆ ಪೈಪೋಟಿ – http://kundapraa.com/?p=20589