ಉಡುಪಿ: ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಆತ್ಮ ಯೋಜನೆಯಡಿ ಜಿಲ್ಲಾ, ತಾಲೂಕು ಶ್ರೇಷ್ಠ ಪ್ರಶಸ್ತಿ ಹಾಗೂ ಶ್ರೇಷ್ಠ ಆಸಕ್ತ ಗುಂಪು ಪ್ರಶಸ್ತಿಗೆ ಹನ್ನೆರಡು ವಿಭಾಗಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

Call us

ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಆಯ್ಕೆಯಾದ ಜಿಲ್ಲೆಯ 10 ಮಂದಿ ರೈತರಿಗೆ ತಲಾ ರೂ.25,000/ ಹಾಗೂ ತಾಲೂಕು ಮಟ್ಟದ ಚಟುವಟಿಕೆಗಳಡಿ ಆಯ್ಕೆಯಾದ ಆಯಾಯ ತಾಲೂಕಿನ 5 ಮಂದಿ ರೈತರಿಗೆ ತಲಾ 10,000/- ನಗದು ವಿತರಿಸಲಾಗುವುದು.

ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ರೈತರು ಭಾಗವಹಿಸಬಹುದಾದ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು: ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಹಾಗೂ ಅರಣ್ಯ ಕೃಷಿ, ಆಡು, ಕುರಿ, ಮೊಲ, ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಾಗಿವೆ.

ಜಿಲ್ಲೆಗಳ ಪ್ರಗತಿಪರ ರೈತರ ಗುಂಪುಗಳ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ರೈತರ ಗುಂಪುಗಳಿಂದ ಆಸಕ್ತ ಗುಂಪು ಪ್ರಶಸ್ತಿಗೆ ಗರಿಷ್ಟ 5 ರೈತರ ಗುಂಪುಗಳಿಗೆ ಪ್ರಶಸ್ತಿ ನೀಡಲು ಅವಕಾಶವಿದ್ದು, ತಲಾ 20,000 ನಗದು ಬಹುಮಾನವಾಗಿದೆ.

ಆಸಕ್ತ ರೈತರು ಅರ್ಜಿಗಳನ್ನು ಆಯಾಯ ತಾಲೂಕಿನ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದು ಭರ್ತಿ ಮಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸೆಪ್ಟೆಂಬರ್ 7 ರ ಸಂಜೆ 5:30 ರೊಳಗೆ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:
ಕೃಷಿ ಪ್ರಶಸ್ತಿ-ಭತ್ತದ ಬೆಳೆ ಸ್ವರ್ಧೆಗೆ ರೈತರಿಂದ ಅರ್ಜಿ ಆಹ್ವಾನ – https://kundapraa.com/?p=40297 .
► ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ – https://kundapraa.com/?p=40294 .

Leave a Reply

Your email address will not be published. Required fields are marked *

17 − 16 =