ಆರ್ಡಿ ಪ್ರೌಢ ಶಾಲೆಯ ‘ಪರೀಕ್ಷಾ ಪೇ ಚರ್ಚಾ’ ಪ್ರೋಮೋಗೆ ದೇಶಾದ್ಯಂತ ಪ್ರಶಂಸೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಚಿಸಿದ ಪರೀಕ್ಷಾ ಪೇ ಚರ್ಚಾ ವಿಡಿಯೋ ದೇಶಾದ್ಯಂತ ಸದ್ದು ಮಾಡಿದೆ. ಪ್ರಧಾನಿ ಮೋದಿ ಅವರ ಮಹಾತ್ವಕಾಂಕ್ಷೆಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಪ್ರೇರಣೆ ನೀಡುವ ಪ್ರಮೋಶನಲ್ ವಿಡಿಯೋಕ್ಕೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ದೊರೆತಿದೆ.

Click Here

Call us

Call us

2.52 ನಿಮಿಷಗಳಿರುವ ಈ ವಿಡಿಯೋವನ್ನು ಮುಖ್ಯ ಶಿಕ್ಷಕ ಶೇಖರ ಶೆಟ್ಟಿಗಾರ್ ಅವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸೈಬರಕಟ್ಟೆ ಅವರ ನಿರ್ದೇಶನದಲ್ಲಿ ಹಾಗೂ ಎಲ್ಲಾ ಶಿಕ್ಷಕರ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಐದು ವಿದ್ಯಾರ್ಥಿನಿಯರು ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ವಿಡಿಯೋ ಮೂಲಕ ಅರ್ಜಿ ಸಲ್ಲಿಸಲು ವೀಕ್ಷಕರಿಗೆ ಸ್ಪೂರ್ತಿಯ ಸಂದೇಶ ನೀಡಿದ್ದಾರೆ.

Click here

Click Here

Call us

Visit Now

ಈ ವಿಡಿಯೋ ಈಗಾಗಲೇ ಡಿಡಿ ಇಂಡಿಯಾ ಸೇರಿದಂತೆ ಡಿಡಿ ನ್ಯೂಸ್, ಡಿಡಿ ಚಂದನ ಟಿ.ವಿ, ಡಿಡಿ ನ್ಯೂಸ್ ಟ್ವಿಟ್ಟರ್ನಲ್ಲಿ ಪ್ರಸಾರ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ದೇಶಾದ್ಯಂತ ಪಸರಿಸುವಂತಾಗಿದೆ. ಈ ವಿಡಿಯೋದ ಹಿಂದಿ ಅವತರಣಿಕೆಯು ರಾಷ್ಟ್ರಮಟ್ಟದ ಹಿಂದಿ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ. ನವದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ನಿರ್ದೇಶಕರು ಗ್ರಾಮೀಣ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

Call us

Leave a Reply

Your email address will not be published. Required fields are marked *

12 + eighteen =