ಚಿತ್ರಕಲಾ ಶಿಕ್ಷಕ ಗಿರೀಶ್ ತಗ್ಗರ್ಸೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಯುವ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ ಅವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರತಿವರ್ಷ ಅನುದಾನ ರಹಿತ ಶಾಲಾ ಶಿಕ್ಷರಿಗೆ ನೀಡಲಾಗುತ್ತಿರುವ ಪ್ರಶಸ್ತಿಗೆ ಅವರು ಭಾಜನರಾಗಿದ್ದು, ಉಡುಪಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಪ್ರತಿಭಾನ್ವಿತ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ:

ಬೈಂದೂರು ತಗ್ಗರ್ಸೆಯ ಪ್ರತಿಭಾವಂತ ಯುವ ಕಲಾವಿದ, ಚಿತ್ರಕಲಾ ಶಿಕ್ಷಕ ಗಿರೀಶ್ ತನ್ನ ಕಲಾಪ್ರೌಡಿಮೆಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡ ಪರಿ ಮೆಚ್ಚುವಂತದ್ದು. ಚಿತ್ರಕಲೆಯಿಂದ ಆರಂಭಿಸಿ, ಮಣ್ಣಿನ ಕಲಾಕೃತಿಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ ಗಿರೀಶ್ ತನ್ನ ಶಾಲಾ ದಿನಗಳಲ್ಲಿಯೇ ಹಲವು ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದರು. ಆ ಬಳಿಕ ವಿಜುವಲ್ ಆಟ್ಸ್ ನಲ್ಲಿ ಪದವಿ ಪಡೆದು ಸಂಪೂರ್ಣವಾಗಿ ಚಿತ್ರಕಲೆಯಲ್ಲಿಯೇ ತೊಡಗಿಕೊಂಡರು.

ಚಿತ್ರಕಲೆ, ಮರಳು ಶಿಲ್ಪ, ಮಣ್ಣಿನ ಕಲಾಕೃತಿ ಮುಂತಾದ ಕಲಾ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಗಿರೀಶ್ ಈವರೆಗೆ ಹಲವು ಆರ್ಟ್ ಕ್ಯಾಂಪ್, ಗ್ರೂಪ್ ಶೋಗಳು, ವಿವಿಧೆಡೆ ಜರುಗಿದ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಮಹಾನದಿ ಎಂಬ ಕನ್ನಡ ಸಿನೆಮಾದಲ್ಲಿ ಸಹಾಯಕ ಕಲಾ ನಿರ್ದೇಶಕನಾಗಿಯೂ ತೊಡಗಿಸಿಕೊಂಡಿದ್ದರು.

ಪ್ರಸ್ತುತ ಕುಂದಾಪುರದ ಬಸ್ರೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುರಭಿ ಬೈಂದೂರು ಇಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಉತ್ತಮ ಚಿತ್ರಕಲಾ ಶಿಕ್ಷಕರೆನಿಸಿಕೊಂಡಿರುವ ಗಿರೀಶ್ ಅವರು, ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಹೊಂದಿದ್ದಾರೆ. ಚಿತ್ರಕಲಾ ಕ್ಷೇತ್ರದಲ್ಲಿನ ಗಿರೀಶ್ ಅವರ ಸಾಧನೆಗೆ ಬೆಂಗಳೂರಿನಲ್ಲಿ ಬಿ. ಪಿ. ವಾದಿಯ ಪ್ರಶಸ್ತಿ, ಬೈಂದೂರಿನ ರಂಗಸುರಭಿ ಪ್ರಶಸ್ತಿ, ಏಳಜಿತ ಸಮ್ಮಿಲನದ ಗೌರವ ಸೇರಿದಂತೆ ಹತ್ತಾರು ಗೌರವ ಸನ್ಮಾನಗಳು ಲಭಿಸಿದೆ.

ತಗ್ಗರ್ಸೆಯ ಗಣೇಶ ಗಾಣಿಗ ಹಾಗೂ ಸೀತಾ ದಂಪತಿಗಳ ದ್ವೀತಿಯ ಪುತ್ರನಾದ ಗಿರೀಶ್ ಅವರು ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೈಯಲಿ ಎಂಬುದು ನಮ್ಮ ಹಾರೈಕೆ.

One thought on “ಚಿತ್ರಕಲಾ ಶಿಕ್ಷಕ ಗಿರೀಶ್ ತಗ್ಗರ್ಸೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

  1. ಚಿತ್ರಕಲೆಯಲ್ಲಿ ಗೋಳಿಹೊಳೆ ಗ್ರಾಮದಲ್ಲಿ ತರಗತಿ ನಡೆಸುವುದಾದರೆ ನಮ್ಮ ಬೆಂಲವಿದೆ.
    ಸಂಪರ್ಕ : 9004068184
    ಗಣೇಶ ಬಳೆಗಾರ ಅರೆಶಿರೂರು

Leave a Reply

Your email address will not be published. Required fields are marked *

three − 1 =