ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ಎಚ್.ಎ.ಎಲ್ ಸಮೀಪ ಕುಂದನಹಳ್ಳಿ ಗೇಟ್ ಎಂಬಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಬೈಂದೂರು ಮದ್ದೋಡಿಯ ಯುವಕರಿಗೆ ವಿನಾಕಾರಣದ ರೌಡಿಗಳು ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೈಂದೂರು ಮದ್ದೋಡಿಯ ನವೀನ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ನಿತೀಶ್ ಶೆಟ್ಟಿ ಕೆಲ ಸಮಯದಿಂದ ಶ್ರೀ ಬ್ರಹ್ಮಲಿಂಗೇಶ್ವರ ಬೇಕರಿ ಉದ್ಯಮ ನಡೆಸುತ್ತಿದ್ದು, ಗುರುವಾರ ರಾತ್ರಿ ನವೀನ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಬೇಕರಿಯಲ್ಲಿ ವ್ಯಾಪರ ನಡೆಸುತ್ತಿದ್ದ ಸಂದರ್ಭ ಈ ದರ್ಘಟನೆ ನಡೆದಿದೆ.
ಬೇಕರಿಯಲ್ಲಿ ವ್ಯವಹಾರ ನಡೆಸಿ ಹಣ ಕೇಳಿದಾಗ ಖ್ಯಾತೆ ತೆಗೆದ ರೌಡಿಗಳು ಅಂಗಡಿಯೊಳ್ಳಕ್ಕೆ ನುಗ್ಗಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ನಾಲ್ಕೈದು ಮಂದಿ ಅಂಗಡಿಯೊಳ್ಳಕ್ಕೆ ನುಗ್ಗಿ ಹಲ್ಲೆ ಇಬ್ಬರಿಗೂ ಹಲ್ಲೆ ನಡೆಸಿದ್ದು, ಪ್ರಶ್ನಿಸಲು ಬಂದವರಿಗೂ ಹಲ್ಲೆ ನಡೆಸಲಾಗಿದೆ. ಅಂಗಡಿ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಈ ದೃಶ್ಯ ಅಂಗಡಿಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕರಾವಳಿಯ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಸಂಜೆ ಹೆಚ್.ಎ.ಎಲ್ ಪೊಲೀಸ್ ಠಾಣೆಗೆ ಕರಾವಳಿಯ ವಿವಿಧ ಸಂಘಟನೆಗಳು ಹಾಗೂ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಲಿದ್ದಾರೆ. ಸಚಿವ ವಿ. ಸುನಿಲ್ ಕುಮಾರ್ ಹಾಗೂ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿದ್ದಾರೆ.
